ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆಯು ಈ ಬಾರಿಯ ಅಂದರೆ 2018-19 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಅಂತಿಮ ಹಾಗೂ ನಿಗಧಿತ ವೇಳಾಪಟ್ಟಿಯನ್ನು ಇಂದು ಪ್ರಕಟಿಸಿದೆ. ಅದರ ಪ್ರಕಾರ ಈ ಬಾರಿಯ ಮಾರ್ಚ್ ನಲ್ಲಿ ಹತ್ತನೇ ತರಗತಿಯ ಪರೀಕ್ಷೆಗಳು ಆರಂಭವಾಗಲಿದ್ದು, ಏಪ್ರಿಲ್ ನ ಕೆಲವು ದಿನಗಳ ವರೆಗೆ ಅದು ಮುಂದುವರೆದು, ಏಪ್ರಿಲ್ ನಲ್ಲಿ ಪರೀಕ್ಷೆಗಳು ಮುಕ್ತಾಯಗೊಳ್ಳುತ್ತವೆ. ಪರೀಕ್ಷೆಗಳು ಮಾರ್ಚ್ 21ರಂದು ಆರಂಭವಾಗಿ, ಏಪ್ರಿಲ್ 4 ರಂದು ಮುಗಿಯಲಿದ್ದು, ವಿದ್ಯಾರ್ಥಿಗಳು ಈಗಿನಂದಲೇ ತಮ್ಮ ತಯಾರಿಯನ್ನು ಮಾಡಿಕೊಳ್ಳಲು, ಪೂರ್ವ ಸಿದ್ಧತೆ ನಡೆಸಲು ವೇಳಾಪಟ್ಟಿಯು ನೆರವಾಗಲಿದೆ. ಇನ್ನು ವೇಳಾಪಟ್ಟಿಯ ಅನ್ವಯ ಪರೀಕ್ಷೆಗಳು ಹಾಗೂ ದಿನಾಂಕಗಳು ಈ ಕೆಳಗಿನಂತಿವೆ…

ಮಾರ್ಚ್‌ 21 ರಂದು ಪ್ರಥಮ ಭಾಷೆ ಕನ್ನಡ.
ಮಾರ್ಚ್ 23 ರಂದು ಕೋರ್ ಸಬ್ಜೆಕ್ಟ್ಗಳು
ಮಾರ್ಚ್ 25 ರಂದು ಗಣಿತ
ಮಾರ್ಚ್ 27 ರಂದು ಇಂಗ್ಲಿಷ್
ಮಾರ್ಚ್ 29 ರಂದು ಸಮಾಜ ವಿಜ್ಞಾನ
ಏಪ್ರಿಲ್ 2 ರಂದು ವಿಜ್ಞಾನ
ಏಪ್ರಿಲ್ 4 ರಂದು ತೃತೀಯ ಭಾಷೆ ಹಿಂದಿ

ಇದು ಈ ಬಾರಿಯ ಹತ್ತನೇ ತರಗತಿ ಅಥವಾ ಎಸ್.ಎಸ್.ಎಲ್.ಸಿ‌ ವೇಳಾಪಟ್ಟಿ ಆಗಿದ್ದು, ಇದೇ ಅಂತಿಮ ವೇಳಾಪಟ್ಟಿ ಎನ್ನಲಾಗಿದೆ. ಬಹುಶಃ ಇನ್ನು ಬದಲಾವಣೆಗಳಾಗುವ ಸಂಭಾವ್ಯತೆಯು ಬಹಳ ವಿರಳವೆಂದು ಹೇಳಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here