ಮೈತ್ರಿ ಸರ್ಕಾರದಲ್ಲಿ ಹೊಸ ಬಾಂಬ್ ಒಂದನ್ನು ಹಾಕಿದ್ದಾರೆ ಸಿದ್ಧರಾಮಯ್ಯನವರ ಆಪ್ತರಾದ ಒಬ್ಬ ಕಾಂಗ್ರೆಸ್ ಶಾಸಕರು. ಈಗಾಗಲೇ ಮೈತ್ರಿ ಸರ್ಕಾರ ಬಂದು ತಿಂಗಳುಗಳಾಗಿದ್ದು, ಈಗಲೂ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ಅಲ್ಲೊಬ್ಬರು, ಇಲ್ಲೊಬ್ಬರು ಶಾಸಕರು ನೀಡುತ್ತಿದ್ದು, ಮೈತ್ರಿ ಸರಕಾರದಲ್ಲಿ ಎಲ್ಲವೂ ಸರಿಯಿದೆ ಎಂಬ ವಾದವನ್ನು ಸುಳ್ಳು ಎಂದು ಸಾಬೀತು ಪಡಿಸುವಂತಿದೆ ಈ ಹೇಳಿಕೆಗಳು. ಹಾಗಾದರೆ ಈಗ ಸಿದ್ಧರಾಮಯ್ಯನವರ ಆ ಆಪ್ತ ಯಾರು? ಅವರ ಹೇಳಿಕೆ ಏನು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ದೋಸ್ತಿ ಸರ್ಕಾರದ ಸಮನ್ವಯ ಸರ್ಕಾರದ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರ ಆಪ್ತರಾದ ಪುಟ್ಟೇ ಗೌಡರೇ ಈಗ ಸ್ಪೋಟಕ ಹೇಳಿಕೆಯನ್ನು ನೀಡಿದ ಶಾಸಕರಾಗಿದ್ದಾರೆ. ಅವರು ಮಾತನಾಡುತ್ತಾ ಕಾಂಗ್ರೆಸ್ ಮತ್ತು ಜೆಡಿ ಎಸ್ ನಡುವೆ ಮೈತ್ರಿಯಾಗಿರಬಹುದು ಆದರೆ ಇದು ಕೇವಲ ರಾಜ್ಯಮಟ್ಟದಲ್ಲಿ ಮಾತ್ರ ಎಂದು ಹೇಳಿದ್ದಾರೆ. ಇದರ ಅರ್ಥ ಏನೆಂಬುದನ್ನು‌ ವಿವರಿಸುವ ಅಗತ್ಯವಿಲ್ಲ. ಏಕೆಂದರೆ ಅವರ ಮಾತುಗಳು ಸ್ಫಷ್ಟ ಮಾಹಿತಿಯನ್ನು ನೀಡುತ್ತಿವೆ. ಅಂದರೆ ದೋಸ್ತಿ ಸರ್ಕಾರದ ಮೈತ್ರಿ ಕೇವಲ ರಾಜ್ಯದ ರಾಜಕೀಯದಲ್ಲಿ ಮಾತ್ರ, ಅದರಿಂದ ಹೊರಗೆ ಅವರ ಮಧ್ಯೆ ಬೇರೇನೂ ಇಲ್ಲ ಎಂಬ ವಿಚಾರದ ಹೊಗೆ ಅಲ್ಲಿದೆ ಎಂಬುದು ನಮಗೆ ತಿಳಿಯುತ್ತದೆ.

ಪುಟ್ಟೇ ಗೌಡ ಅವರು ಮಾತನಾಡುತ್ತಾ ಕೆಲವು ಕಾಂಗ್ರೆಸ್ ಶಾಸಕರಿಗೆ ಮೈತ್ರಿ ಸರ್ಕಾರದ ಬಗ್ಗೆ ಸಮಾಧಾನ ಹಾಗೂ ಒಲವಿಲ್ಲ, ಮನಸ್ಸಿಲ್ಲದಿದ್ದರೂ ಅವರು ಬಲವಂತದಿಂದ ಸರ್ಕಾರದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ವಿಶೇಷವಾಗಿ ಹಾಸನದ ಕಾರ್ಯಕರ್ತರಲ್ಲಿ ಯಾವುದೇ ರೀತಿಯ ಸ್ನೇಹ ಭಾವ ಇಲ್ಲವಂತೆ. ಅವರಲ್ಲಿ ಹೊಂದಾಣಿಕೆ ಎಂಬ ಮನೋಭಾವನೆ ಕೂಡಾ ಇಲ್ಲವೆಂದು ಹೇಳಿದ್ದಾರೆ. ಈ ಬಾರಿಯ ಚುನಾವಣಾ ಸಂದರ್ಭದಲ್ಲಿ ಹಾಸನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ಇದ್ದದ್ದು ಎಲ್ಲರಿಗೂ ತಿಳಿದಿತ್ತು. ಆದರೆ ಚುನಾವಣೆಯ ನಂತರ ಮೈತ್ರಿ ಸರ್ಕಾರ ರಚನೆಯ ನಂತರವೂ ಅವರ ಮಧ್ಯ ಎಲ್ಲವೂ ಹೊಂದಾಣಿಕೆಯಾಗಿಲ್ಲದ ಕಾರಣ ಅವರ ನಡುವೆ ಸಾಮರಸ್ಯ ಇಲ್ಲದಂತಾಗಿದೆ.

ಪುಟ್ಟೇ ಗೌಡ ಅವರು ಮಾತನಾಡುತ್ತಾ ಸರ್ಕಾರ ನಡೆಸುವ ಮಂತ್ರಿಗಳು, ಶಾಸಕರು ಒಂದಾಗಿದ್ದರೆ, ಆದರೆ ರಾಜ್ಯದ ಕೆಲವು ಮುಖಂಡರು ಒಲ್ಲದ ಮನಸ್ಸಿನಿಂದ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಮನಃಪೂರ್ವಕವಾಗಿ ಹೊಂದಾಣಿಕೆ ಮಾಡಿಕೊಂಡು ಇರಬಹುದು. ಆದರೆ ಹಾಸನ ಭಾಗದ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮಾತ್ರ ಹೊಂದಾಣಿಕೆ ಆಗಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಎರಡೂ ಪಕ್ಷದ ಮುಖಂಡರು ಅಂದರೆ ಸಿದ್ಧರಾಮಯ್ಯನವರು,ಖರ್ಗೆ, ಡಿಕೆಶಿ, ದೇವೇಗೌಡರು, ಕುಮಾರಸ್ವಾಮಿ ಅವರು ಈ ಪರಿಸ್ಥಿತಿ ಮನಗಂಡು ಅವರನ್ನು ಒಂದು ಮಾಡೋ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಅಂತಾ ಹೇಳಿಕೆ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here