ಇಂದು ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಭಾರತ ಚುನಾವಣಾ ಆಯುಕ್ತರಾದ ಓಂ ಪ್ರಕಾಶ್ ರಾವತ್ ಅವರು ಕರ್ನಾಟಕ ವಿಧಾನ ಸಭಾ ಚುನಾವಣಾ ದಿನಾಂಕವನ್ನು ಘೋಷಿಸಿದರು.
ಇದೇ ಮೇ 12 ರಂದು ಕರ್ನಾಟಕದಲ್ಲಿ ಚುನಾವಣೆ ನಡೆಸಲಾಗುವುದು ಹಾಗೂ ಮೆ.15 ಚುನಾವಣಾ ಪಲಿತಾಂಶ ಹೊರ ಬೀಳುವುದು ಒಟ್ಟು 224 ಕ್ಷೇತ್ರಗಳಿಗೆ ಒಂದೆ ಹಂತದಲ್ಲಿ ಚುನಾವಣೆ ನಡೆಸಲಾಗುವುದು . ಹಾಗೂ ಒಟ್ಟು 56 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಒಟ್ಟು 4 ಕೋಟಿ 96 ಲಕ್ಷದ 357_ ಜನ ಮತದಾರರು ಇದ್ದಾರೆ ಎಂದು ತಿಳಿಸಲಾಗಿದೆ.
ಏಪ್ರಿಲ್ 17ರ ರಿಂದ 24 ರ ವರಗೆ ನಾಮಪತ್ರ ಸಲ್ಲಿಸಬಹುದು ಏಪ್ರಲ್ 25 ನಾಮಪತ್ರ ಪರೀಶಿಲನೆ ಮಾಡಲಾಗುವುದು ಏಪ್ರಲ್ 27 ರಂದು ನಾಮ ಪತ್ರ ವಾಪಸು ಪಡೆಯಲು ಅವಕಾಶ ನೀಡಲಾಗಿದೆ.
ಒಬ್ಬ ಅಭ್ಯರ್ಥಿಯ ಚುನಾವಣಾ ವೆಚ್ಚವನ್ನು 28 ಲಕ್ಷಕ್ಕೆ ನಗದಿ ಪಡಿಸಲಾಗಿದೆ. ಆದರೆ ಪಕ್ಣದಿಂದ ವೆಚ್ಚಕ್ಕೆ ಕಡಿವಾಣವಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ. ಇ ಸಲ ಚುನಾವಣೆಗೆ ಇ.ವಿ.ಎಮ್ ಹಾಗು ಇ.ಎಮ್ ಪ್ಯಾಡನ್ನು ಉಪಯೋಗಿಸಲಾಗುತ್ತಿದೆ.
ಇ.ಎಮ್ ಅಂದರೆ ಮತದಾರ ಮತ ಚಲಾಯಿಸಿದ ನಂತರ ನಾವು ಯಾವ ಪಕ್ಷಕ್ಕೆ ಮತ ನೀಡಿದ್ದೇವೆ ಎಂದು ನೋಡಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here