ಕರುನಾಡು ಎಂಬ ಸೇವಕರ ತಂಡವನ್ನು ಕಟ್ಟಿಕೊಂಡು ಸದಾ ಕಾಲ ಒಂದಿಲ್ಲೊಂದು ಕನ್ನಡ ಪರ ಕೆಲಸಗಳನ್ನು ಮಾಡುತ್ತಾ ನೇರವಾಗಿ  ವಿಡಿಯೋ ಮಾಡುವ ಮೂಲಕ, ಹೋರಾಟಕ್ಕೆ ಇಳಿಯುತ್ತಾ  ಸದಾ ಕನ್ನಡ ಪರ ಕೆಲಸಗಳಿಗೆ ಸಕ್ರಿಯವಾಗಿರುತ್ತಿದ್ದ ರೂಪೇಶ್ ರಾಜಣ್ಣ ಅವರನ್ನು ಅದೇ ಕರುನಾಡ ಸೇವಕರು ತಂಡದಿಂದ ಉಚ್ಛಾಟಿಸಲಾಗಿದ್ದು, ಈ ಸಂಬಂಧ ತಂಡವು ಹೇಳಿಕೆ ನೀಡಿದೆ. ಅದೇನೆಂದರೆ ರೂಪೇಶ್ ರಾಜಣ್ಣ ನವರು ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದು, ಕೆಲವು ದಿನಗಳಿಂದ ತಂಡದ ಆಂತರಿಕ ಬೆಳವಣಿಗೆಗೆ ಎಲ್ಲರ ವಿಶ್ವಾಸ ಪಡೆಯುವ ಬದಲಿಗೆ, ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡು, ಸಂಘಟನೆಯಲ್ಲಿ ವ್ಯಕ್ತಿ ಪೂಜೆ ಮಾಡುವ ಸಂಸ್ಕೃತಿಯನ್ನು ತಂದಿಟ್ಟಿದ್ದಾರೆ ಎಂದು ದೂರಲಾಗಿದೆ.

ಇದನ್ನು ಖಂಡಿಸಿ ಅವರನ್ನು ಪ್ರಶ್ನೆ ಮಾಡಿದವರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದರಿಂದ, ಸಂಘಟನೆ ಇಬ್ಭಾಗ ಮಾಡಲು ಯತ್ನಿಸಿದ್ದರಿಂದ ಅವರನ್ನು ರಾಜ್ಯ ಸಮಿತಿಯು ಸಂಘಟನೆಯು ಅಧ್ಯಕ್ಷ ಸ್ಥಾನದಿಂದ ಹಾಗೂ ಪ್ರಾಥಮಿಕ ಸದಸ್ಯತ್ವದಿಂದಲೂ ಉಚ್ಛಾಟಿಸಲಾಗಿದೆ ಎಂದು ತಿಳಿಸಿದೆ. ರೂಪೇಶ್ ರಾಜಣ್ಣ ನವರು ಸಂಘಟನೆಯಲ್ಲಿ ಇದ್ದು‌ ಕೊಂಡೇ ಅವರನ್ನು ಪಶ್ನಿಸುವ ಪದಾಧಿಕಾರಿಗಳ ಮೇಲೆ ಅವರು ಅಪಪ್ರಚಾರ ಕೂಡಾ ಮಾಡಿದ್ದಾರೆ ಎನ್ನುವುದು ಅವರ ಮೇಲೆ ಬಂದಿರುವ ಆರೋಪವಾಗಿದೆ.

ಇನ್ನು ಈ ಉಚ್ಚಾಟನೆಗೆ ರೂಪೇಶ್ ರಾಜಣ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಉತ್ತರಿಸುತ್ತಾ ನನ್ನ ಕಡೆ ಉಸಿರಿರೋವರೆಗೆ ಕನ್ನಡ ತಾಯಿಯ ಸೇವೆ ನಿಲ್ಲೋಲ್ಲ. ಇಷ್ಟು ವರ್ಷ ಬೆಂಬಲಿಸಿದ್ದೀರಿ, ಮುಂದೆಯೂ ಬೆಂಬಲಿಸಿ, ನನ್ನ ವಿರೋಧಿಸಿದವರಿಗೂ ದೇವರು ಒಳ್ಳೆಯದು ಮಾಡಲೆಂದು ಹಾರೈಸುತ್ತಾ, ಮುಂದಿನ ಭಾನುವಾರ ಕನ್ನಡ ಕೆಲಸ ಸಹಕಾರ ನಗರದಲ್ಲಿ ಎಂದು ಫೋಸ್ಟ್ ಹಾಕಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here