ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಕರುಣಾನಿಧಿ ಪುತ್ರಿ, ಡಿಎಂಕೆ ಪಕ್ಷದ ನಾಯಕಿಯೂ ಆಗಿರುವ ಕನಿಮೋಳಿ ಅವರು ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತ ಹಾಗೂ ಒಂದು ರೀತಿಯ ಮುಜುಗರಕ್ಕೆ ಒಳಗಾಗುವಂತಹ ಪ್ರಶ್ನೆಯೊಂದನ್ನು ಎದುರಿಸಿದ್ದಾರೆ. ಈ ವಿಷಯದ ಕುರಿತಾಗಿ ಕನಿಮೋಳಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ನಡೆದಿದ್ದು ಏನು ಎಂಬುದನ್ನು ಬರೆದುಕೊಂಡಿದ್ದಾರೆ. ಏರ್​ಪೋರ್ಟ್ ಒಂದರಲ್ಲಿ ಕನಿಮೋಳಿ ಅವರನ್ನು “ನೀವು ನಿಜಕ್ಕೂ ಭಾರತೀಯರೇ” ಎಂದು ಪ್ರಶ್ನಿಸಿದರು ಎಂಬುದಾಗಿ ಆಕೆ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಹಾಗದರೆ ಏನಿದು ಘಟನೆ? ಎನ್ನುವುದಕ್ಕೆ ಉತ್ತರ ಕನಿಮೋಳಿ ಅವರೇ ಹೇಳುವಂತೆ ಇಲ್ಲಿದೆ.

ಏರ್​ಪೋರ್ಟ್​ ಒಂದರಲ್ಲಿ ಸಿಐಎಸ್​ಎಫ್ ಸಿಬ್ಬಂದಿಯನ್ನು ಕನಿಮೋಳಿ ಅವರು ತನ್ನೊಂದಿಗೆ ಇಂಗ್ಲಿಷ್​ ಅಥವಾ ತಮಿಳಿನಲ್ಲಿ ಮಾತನಾಡುವಂತೆ ಕೇಳಿದ್ದಾರೆ. ಆದರೆ ಅಲ್ಲಿನ ಅಧಿಕಾರಿಯು ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ ಕನಿಮೋಳಿಯವರನ್ನು ನಿಜಕ್ಕೂ ನೀವು ಭಾರತದವರೇನಾ? ಎಂದು ಕೇಳಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಕನಿಮೋಳಿ, ಇಂದು ಏರ್​ಪೋರ್ಟ್​ನಲ್ಲಿ ಹಿಂದಿ ಬಾರದಿದ್ದಕ್ಕೆ ನೀವು ಭಾರತದವರೇನಾ ಎಂದು ಪ್ರಶ್ನಿಸಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಆಕೆ ಯಾವಾಗಿನಿಂದ ಭಾರತೀಯ ಎಂದರೆ ಹಿಂದಿ ಕಲಿತಿರಬೇಕು ಎಂಬುದಕ್ಕೆ ಸಮಾನವಾಯಿತು ಎಂದು ಪ್ರಶ್ನೆ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here