ಪುಲ್ವಾಮದಲ್ಲಿ ನೆನ್ನೆ ನಡೆದಿರುವ ಮಾರಣ ಹೋಮ ನಿಜಕ್ಕೂ ರಾಷ್ಟ್ರದ ಜನರೆಲ್ಲಾ ಚಿಂತಿಸಬೇಕಾದ ಹಾಗೂ ಅವಲೋಕಿಸಬೇಕಾದ ವಿಷಯವಾಗಿದೆ. ಏಕೆಂದರೆ ಅಲ್ಲಿ ಪ್ರಾಣ ಬಿಟ್ಟವರು ದೇಶದ ಗಡಿಗಳಲ್ಲಿ ಮಳೆ, ಚಳಿ, ಗಾಳಿ ಎನ್ನುವುದನ್ನೂ ಲೆಕ್ಕಿಸದೆ ಹಗಲಿರುಳು ಗಡಿ ಕಾಯುವ ಮೂಲಕ, ದೇಶದ ಜನರು ಸುಖ ಜೀವನ ನಡೆಸಲು, ತಾವು ನಿದ್ದೆಗೆಟ್ಟರೂ ದೇಶದ ಜನರು ಸುಖ ನಿದ್ರೆ ಮಾಡಲೆಂದು ಎಚ್ಚರವಾಗಿರುವ ವೀರ ಯೋಧರು. ಈ ಉಗ್ರವಾದಿ ಧಾಳಿಗೆ ಸೈನಿಕರ ಪ್ರಾಣ ಪಕ್ಷಿಗಳು ಹಾರಿರುವ ವಿಷಯ ರಾಷ್ಟ್ರವನ್ನು ತಲ್ಲಣಗೊಳಿಸಿದೆ‌. ಸೈನಿಕರಿಗೆ ರಕ್ಷಣೆ ಇಲ್ವೇ ಎಂಬ ಅನಮಾನವನ್ನು ಹುಟ್ಟು ಹಾಕಿದೆ.

ಇನ್ನು ಈ ಉಗ್ರ ಧಾಳಿಯಿಂದಾಗಿ 42 ಜನ ಭಾರತೀಯ ವೀರಯೋಧರ ಇಂದು ನಮ್ಮನ್ನು ಅಗಲಿ ರಾಷ್ಟ್ರವೇ ಕಂಬನಿ ಸುರಿಸುವಂತೆ ಮಾಡಿದ್ದಾರೆ. ಅದರಲ್ಲಿ ಇಂದು ನಮ್ಮ ರಾಜ್ಯ ಕರ್ನಾಟಕ ಕೂಡಾ ಕಂಬನಿ ಮಿಡಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಕಾರಣ ಉಗ್ರನ ಶತ್ಮಾಹುತಿ ಧಾಳಿಯಲ್ಲಿ ಹತರಾದ ಸೈನಿಕರಲ್ಲಿ ಕರ್ನಾಟಕದ ಒಬ್ಬ ವೀರಯೋಧ ಕೂಡಾ ಇದ್ದನೆಂಬ ವಿಷಯ ತಿಳಿದು ಬಂದಿದೆ. ಒಂದೆಡೆ ದೇಶಕ್ಕಾಗಿ ಪ್ರಾಣ ಬಿಟ್ಟ ಎಂದರೂ, ಮತ್ತೊಂದೆಡೆ ಅನ್ಯಾಯದ ಆಟವಾಡಿದ ಉಗ್ರನೊಬ್ಬರ ಆಟಕ್ಕೆ ಇಷ್ಟು ಜನ ಭಾರತ ಮಾತೆಯ ಮಕ್ಕಳು ಪ್ರಾಣ ತ್ಯಾಗ ಮಾಡಿದರೆಲ್ಲಾ ಎಂಬ ನೋವು ಕೂಡಾ ಇದೆ.

ಇಂದಿನ ಪುಲ್ವಾಮ ಆತ್ಮಾಹುತಿ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಎಚ್.ಗುರು (33) ಎಂಬ ವೀರ ಯೋಧನು ಕೂಡಾ ಹುತಾತ್ಮನಾಗಿದ್ದಾರೆ. ಒಂದು ವರ್ಷದ ಹಿಂದೆಯಷ್ಟೇ ಅವರಿಗೆ ವಿವಾಹವಾಗಿತ್ತು ಎನ್ನಲಾಗಿದೆ. ಆದರೆ ಇಂದಿನ ಧಾಳಿಯಲ್ಲಿ ಈ ಮಂಡ್ಯದ ವೀರನು ಹುತಾತ್ಮನಾಗಿದ್ದಾನೆ. ತಂದೆ , ತಾಯಿ ಹಾಗೂ ಪತ್ನಿಯನ್ನು ತೊರೆದು ಈತ ಇಹಲೋಕ ತ್ಯಜಿಸಿದ್ದಾರೆ.
ಉಗ್ರನ ಅಟ್ಟಹಾಸಕ್ಕೆ ಬಲಿಯಾದ ಎಲ್ಲಾ ಯೋಧರಿಗಾಗಿ ಇಡೀ ದೇಶವೇ ದುಃಖಿಸುವಂತಾಗಿದೆ.

ಇನ್ನು ನೆನ್ನೆಯಷ್ಟೇ ವೀರಯೋಧ ಗುರು ಪ್ರೀತಿಯ ಪತ್ನಿಗಾಗಿ ಸೆಲ್ಫಿ ವೀಡಿಯೋ ಮಾಡಿ ಕಳಿಸಿದ್ದರು. ಆ ವೀಡಿಯೋ ಇದೀಗ ಹೊರಬಂದಿದ್ದು ಪ್ರೀತಿಯ ಪತ್ನಿಗಾಗಿ ಕಾಶ್ಮೀರದಿಂದ ಯೋಧ ಗುರು ಅವರು ಮೂವತ್ತು ಸೆಕೆಂಡುಗಳ ವೀಡಿಯೋ ಕಳಿಸಿದ್ದರು. ಆ ವೀಡಿಯೋದಲ್ಲಿ ಕಾಶ್ಮೀರ ಎಂದು ಪತ್ನಿ ಕಲಾವತಿಗೆ ಗುರು ಅವರು ಹೇಳಿದ್ದರು. ಈಗ ಈ ವೀಡಿಯೋ ನೋಡಿ ಮನೆಯವರ ಆಕ್ರಂದನ ಮುಗಿಲು ಮುಟ್ಟುತ್ತಿದೆ…. ಈ ವೀಡಿಯೋ ನೋಡಿ…

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here