ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನವನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರದ ನಂತರ ಕಣಿವೆ ರಾಜ್ಯದ ಪರಿಸ್ಥಿತಿ ಅಷ್ಟು ಸರಿಯಾಗಿಲ್ಲ.‌ ಅಲ್ಲಿ ಪ್ರಕ್ಷುಬ್ಧ ವಾತಾವರಣವಿದೆ ಎಂದು, ಅಲ್ಲಿನ ಜನರನ್ನು ಖುದ್ದಾಗಿ ಭೇಟಿ ಮಾಡಲು, ಪರಿಸ್ಥಿತಿ ಅಧ್ಯಯನ ಮಾಡಲು ರಾಹುಲ್ ಗಾಂಧಿ ಮತ್ತು ಪ್ರತಿಪಕ್ಷದ ನಾಯಕರ ನಿಯೋಗವೊಂದು ಇಂದು ಅಲ್ಲಿನ ಅಧಿಕಾರಿಗಳೇ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರುತ್ತಿದೆಯೆಂದು, ನೀವು ಬರುವ ಅಗತ್ಯ ಇಲ್ಲ ಎಂದರೂ ದೆಹಲಿಯಿಂದ ನಿಯೋಗವು ವಿಮಾನದಲ್ಲಿ ಶ್ರೀ ನಗರಕ್ಕೆ ಹೊರಟಿತ್ತು‌. ಆದರೆ ಈಗ ಆ ನಿಯೋಗವು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮತ್ತೆ ದೆಹಲಿಗೆ ವಾಪಸಾಗುವ ಪರಿಸ್ಥಿತಿಯು ಎದುರಾಗಿದೆ.

ಜನರನ್ನು ಭೇಟಿ ಮಾಡಲು ಮತ್ತು ಕಾಶ್ಮೀರ ಕಣಿವೆಯ ಪರಿಸ್ಥಿತಿಯನ್ನು ನಿರ್ಣಯಿಸಲು ಶನಿವಾರ ಶ್ರೀನಗರಕ್ಕೆ ಭೇಟಿ ನೀಡಲು ಯತ್ನಿಸಿದ ರಾಹುಲ್ ಗಾಂಧಿ ಮತ್ತು ಪ್ರತಿಪಕ್ಷ ನಾಯಕರ ನಿಯೋಗವನ್ನು ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೇ ವಾಪಸ್ ಕಳುಹಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಕೇಂದ್ರವು ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ನಂತರ ಆಗಸ್ಟ್ 5 ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ನಿರ್ಬಂಧಗಳು ಜಾರಿಯಲ್ಲಿವೆ. ಅಲ್ಲದೆ ಅಲ್ಲಿನ ಪರಿಸ್ಥಿತಿಯನ್ನು ರಾಜಕಾರಣ ಮಾಡಬಾರದೆಂದು ಯಾವುದೇ ನಾಯಕರಿಗೂ ಅಲ್ಲಿಗೆ ಹೋಗಲು ಅವಕಾಶವನ್ನು ನೀಡಿರಲಿಲ್ಲ.

ದೆಹಲಿಯಿಂದ ಶ್ರೀ ನಗರಕ್ಕೆ ಹೊರಟ ನಿಯೋಗದಲ್ಲಿ ಕಾಂಗ್ರೆಸ್, ಸಿಪಿಐ-ಎಂ, ಸಿಪಿಐ, ಆರ್‌ಜೆಡಿ, ಎನ್‌ಸಿಪಿ, ಟಿಎಂಸಿ ಮತ್ತು ಡಿಎಂಕೆ ಮುಖಂಡರು ಇದ್ದರು. ಅವರೆಲ್ಲಾ ಶ್ರೀ ನಗರದಲ್ಲಿ ವಿಮಾನ ನಿಲ್ದಾಣದಲ್ಲಿ ಇಟ್ಟು ಅನಂತರ ವಾಪಸ್ಸು ದೆಹಲಿಗೆ ಕಳುಹಿಸಲಾಗಿದೆ.
ನಿಯೋಗದ ಭೇಟಿಯನ್ನು ನಿಲ್ಲಿಸಿದ್ದಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ದೂಷಿಸುತ್ತಾ “ಸರ್ಕಾರ ಮರೆಮಾಡಲು ಏನು ಪ್ರಯತ್ನಿಸುತ್ತಿದೆ” ಎಂದು ಕೆಂಡಾಮಂಡಲವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here