ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ತೆಗೆದುಕೊಂಡ ಐತಿಹಾಸಿಕ ನಿರ್ಧಾರವನ್ನು ಇಡೀ ದೇಶವೇ ಒಪ್ಪಿದೆ ಹಾಗೂ ಸರ್ಕಾರದ ನಿರ್ಣಯವನ್ನು ಸ್ವಾಗತಿಸಿದೆ. ಈ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಈಗ ಪಾಕಿಸ್ತಾನ ಕೂಡಾ ಈ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ತೀವ್ರವಾದ ಪ್ರತಿಕ್ರಿಯೆ ನೀಡುತ್ತಿದೆ. ಈಗ ಅದೇ ರೀತಿ ಪಾಕ್ ಮತ್ತೊಮ್ಮೆ ಗುಡುಗಿದೆ. ಜಮ್ಮು- ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಭಾರತದ ನಿರ್ಧಾರವನ್ನು ಕಾನೂನುಬಾಹಿರ ಎಂದು ಕರೆದಿದೆ ಪಾಕಿಸ್ತಾ‌ನ. ಪಾಕಿಸ್ತಾನ ಈ ನಿರ್ಧಾರದಿಂದ ತಲ್ಲಣಗೊಂಡಂತೆ ವರ್ತಿಸುತ್ತಿದೆ.

ಭಾರತದ ನಿರ್ಣಯ ಅಸಾಂವಿಧಾನಿಕ ಎಂದು ಅರಚಿದ ಪಾಕಿಸ್ತಾನ, ಈಗ ಇನ್ನೂ ಮುಂದೆ ಹೋಗಿ ಕಾಶ್ಮೀರ ಮತ್ತು ಅಲ್ಲಿನ ಜನರಿಗೆ ನಮ್ಮ ಸೇನೆ ಏನು ಬೇಕಾದರೂ ಮಾಡಲು ಸಿದ್ಧವಾಗಿದೆಯೆಂದು ಹೇಳಿದೆ. ಭಾರತ ಸರ್ಕಾರವು ಜಮ್ಮು ಕಾಶ್ಮೀರವನ್ನು ಕೂಡಾ ಇತರೆ ರಾಜ್ಯಗಳಂತೆ ಪರಿಗಣಿಸಿದ್ದು, ಹಲವು ವರ್ಷಗಳಿಂದ ಕಾಶ್ಮೀರ ಕಣೆವೆಯಲ್ಲಿ ನಡೆಯುತ್ತಿರುವ ಪ್ರತ್ಯೇಕತಾವಾದವನ್ನು ಹತ್ತಿಕ್ಕಲು ಸರ್ಕಾರ ಈ ತಂತ್ರವನ್ನು ರೂಪಿಸಿದೆ ಎಂದು ಇಡೀ ದೇಶಕ್ಕೆ ಅರ್ಥವಾಗಿದೆ. ಆದರೆ ಪಾಕಿಸ್ತಾನ ಮಾತ್ರ ಇದಕ್ಕೆ ತೀವ್ರವಾಗಿ ತನ್ನ ಆಕ್ರೋಶವನ್ನು ಹೊರ ಹಾಕುತ್ತಿದೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥರಾದ ಖಮರ್ ಜಾವೇದ್ ಬಜ್ವಾ ಮಂಗಳವಾದ ನಡೆದ ಸೈನಿಕರ ಸಮ್ಮೇಳನದಲ್ಲಿ ಮಾತನಾಡುತ್ತಾ, ಕಾಶ್ಮೀರಿಗರಿಗೆ ಸಹಾಯ ನೀಡಲು ಪಾಕ್‌ ಸೇನೆ ಸದಾ ಸಿದ್ಧವಾಗಿದೆಯೆಂದು, ಕಾಶ್ಮೀರದ ಜನರ ಹಿತರಕ್ಷಣೆಗಾಗಿ ಪಾಕ್ ಸೇನೆಯು ಯಾವ ಬೆಲೆ ಬೇಕಾದರೂ ತೆರಲು ಸಿದ್ಧವಾಗಿದೆಯೆಂದು ಹೇಳುವ ಮೂಲಕ ಭಾರತದ ನಿರ್ಣಯವನ್ನು ವಿರೋಧಿಸಿದ್ದಾರೆ. ಈ ಮೂಲಕ ಪಾಕಿಸ್ತಾನದ ನಿಲುವ ಯಾವ ಮಟ್ಟಕ್ಕೆ ಇದೆ ಎಂಬುದನ್ನು ತಿಳಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here