ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿ ನರೇಂದ್ರ ಮೋದಿ ಸರಕಾರ ಐತಿಹಾಸಿಕ ಮತ್ತು ದೂರಗಾಮಿ ಪರಿಣಾಮವುಳ್ಳ ದಿಟ್ಟ ನಿರ್ಧಾರವನ್ನು ಪ್ರಕಟಿಸಿದೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ವಿವಾದಾತ್ಮಕ 370ನೇ ವಿಧಿಯನ್ನು ಸೋಮವಾರ ಕಿತ್ತು ಹಾಕಿರುವ ಸರಕಾರ, ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ. ಈ ಮೂಲಕ ಕಳೆದ ನಾಲ್ಕು ದಶಕದಿಂದ ಹಿಂಸಾಗ್ರಸ್ತವಾಗಿ ಹಿಂದುಳಿದಿರುವ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಭರವಸೆಯನ್ನು ಮೂಡಿಸಿದೆ.
72 ವರ್ಷಗಳಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಈ 370ನೇ ವಿಧಿಯ ವಿರುದ್ಧ ಬಿಜೆಪಿ ನಿರಂತರವಾಗಿ

ನಡೆಸುತ್ತಿದ್ದ ಹೋರಾಟಕ್ಕೆ ನರೇಂದ್ರ ಮೋದಿ ಸರಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದು 67 ದಿನಗಳಲ್ಲೇ ಜಯ ಸಿಕ್ಕಂತಾಗಿದೆ. ಗೃಹ ಸಚಿವ ಅಮಿತ್‌ ಶಾ ಅವರು ಸೋಮವಾರ ರಾಜ್ಯಸಭೆಯಲ್ಲಿ ವಿಧಿ ರದ್ದತಿ ನಿರ್ಣಯ ಮತ್ತು ರಾಜ್ಯ ಪುನರ್‌ವಿಂಗಡಣೆ ವಿಧೇಯಕ ಮಂಡಿಸುತ್ತಿದ್ದಂತೆಯೇ ದೇಶಾದ್ಯಂತ ಸಂಚಲನ ಉಂಟಾಯಿತು. ಮೋದಿ-ಶಾ ಜೋಡಿಯ ಧೈರ್ಯಕ್ಕೆ ಬಿಜೆಪಿ ಅಭಿಮಾನಿಗಳು ಕುಣಿದು
ಕುಪ್ಪಳಿಸಿದ್ದಾರೆ. ಮತ್ತೊಂದೆಡೆ ಸೋಶಿಯಲ್ ಮಿಡಿಯಾದಲ್ಲಿ ಭಾರತೀಯರು ಸಂತಸ
ಹಂಚಿಕೊಂಡಿದ್ದಾರೆ. ಇನ್ನು ಮುಂದೆ ಕಾಶ್ಮೀರದಲ್ಲಿ ಉಡುಪಿ ಭವನ , ದಾವಣಗೆರೆ ದೋಸೆ ಕ್ಯಾಂಟೀನ್ ತಲೆ ಎತ್ತಲಿವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌, ಪಿಡಿಪಿ, ನ್ಯಾಷನಲ್‌ ಕಾನ್ಫರೆನ್ಸ್‌ ಸೇರಿದಂತೆ ಕೆಲವು ಪ್ರತಿ ಪಕ್ಷಗಳು ಸರಕಾರದ ನಿರ್ಧಾರವನ್ನು ವಿರೋಧಿಸಿವೆ.ಕಾಶ್ಮೀರ ಕ್ರಾಂತಿಯ ಬಗ್ಗೆ ಕಳೆದ ಕೆಲವು ದಿನಗಳಿಂದ ಸೂಚನೆ ಇತ್ತಾದರೂ ಏನು ಎಂಬ ಬಗ್ಗೆ ಟಾಪ್‌ ಸೀಕ್ರೆಟ್‌ ಕಾಯ್ದುಕೊಂಡಿದ್ದು ಸರಕಾರದ ಹೆಗ್ಗಳಿಕೆ. ಭಾರಿ ಪ್ರಮಾಣದ ಸೇನೆ ನಿಯೋಜನೆ, ಉಗ್ರರ ಭೀತಿ ಹೆಸರಲ್ಲಿ ಅಮರನಾಥ ಯಾತ್ರೆ ರದ್ದು.. ಹೀಗೆ ಭದ್ರತೆ ಹೆಚ್ಚಿಸಿ ಅಂತಿಮವಾಗಿ ಮಾಸ್ಟರ್‌ ಸ್ಟ್ರೋಕ್‌ ನೀಡಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here