ಹ್ಯಾಟ್ರಿಕ್ ಹೀರೊ ಶಿವಣ್ಣ ನಟಿಸಿ, ಅತಿ ಶೀಘ್ರದಲ್ಲೇ ತೆರೆಗೆ ಬರಲು ಸಿದ್ಧವಾಗಿರುವ ಅಪರೂಪದ ಸಿನಿಮಾ ಕವಚ. ಈ ಚಿತ್ರ ಒಂದು ಅಪರೂಪ ದೃಶ್ಯ ಕಾವ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಟ್ರೈಲರ್ ನೋಡಿದ ಪ್ರತಿಯೊಬ್ಬರಿಗೂ ಚಿತ್ರ ಒಂದು ಅನೂಹ್ಯವಾದ ಅನುಭೂತಿಯನ್ನು ಅನುಭವವಾಗುವಂತೆ ಮಾಡಿದೆ. ಮೊದಲ ಬಾರಿಗೆ ಶಿವಣ್ಣ ತನ್ನೆಲ್ಲಾ ಚಿತ್ರಗಳಿಗಿಂತ ವಿಭಿನ್ನ ಪಾತ್ರವೊಂದನ್ನು ನಿರ್ವಹಿಸಿದ್ದು, ಅವರು ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಕವಚ ಸಿನಿಮಾದ ಒಂದು ಹಾಡನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದು, ಯೂ ಟ್ಯೂಬ್ ನಲ್ಲಿ ಈ ಹಾಡು ಈಗಾಗಲೇ ಲಭ್ಯವಿದೆ. ಈಗ ಬಿಡುಗಡೆಯಾಗಿರುವ ಹಾಡು ನಿಜಕ್ಕೂ ಒಂದು ಮೋಹಕವಾದ ಮೋಡಿಯನ್ನು ಮಾಡುತ್ತಿದೆ.

ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಶ್ರೇಯ ಜಯದೀಪ್ ಅವರ ಹಿನ್ನೆಲೆ ಗಾಯನದಲ್ಲಿ, ಅರ್ಜುನ್ ಜನ್ಯಾ ಅವರ ಸಂಗೀತ ಸಾರಥ್ಯದಲ್ಲಿ ಮೂಡಿ ಬಂದಿರುವ ಈ ಹಾಡು ಕೇಳಲು ಇಂಪಾಗಿ, ಮನಸ್ಸನ್ನು ಮುಟ್ಟುವಂತಿದೆ. ಇನ್ನು ಹಾಡಿಗೆ ತಕ್ಕಂತೆ ಶಿವಣ್ಣ ಹಾಗೂ ಅವರ ಮಗಳ ಪಾತ್ರದಲ್ಲಿ ನಟಿಸಿರುವ ಬಾಲ ನಟಿ ಬೇಬಿ ಅನನ್ಯ ಇಬ್ಬರ ಮನೋಜ್ಞ ಅಭಿನಯ ಆ ಹಾಡಿಗೆ ಒಂದು ಹೊಸ ಮೆರುಗನ್ನು ನೀಡಿದೆ. ಇನ್ನು ಹಾಡಿನ ದೃಶ್ಯಗಳಲ್ಲಿ ಕಂಡು ಬರುವ ಸುತ್ತಲಿನ ಪರಿಸರ ಮೈಮನಗಳಿಗೆ ಆಹ್ಲಾದಕರ ಎನಿಸುವಂತೆ ಹಸಿರಿನಿಂದ ಕಂಗೊಳಿಸಿದೆ.

ಬಹು ಮುಖ್ಯವಾಗಿ ಈ ಹಾಡಿನ ಸಾಹಿತ್ಯ ಅತ್ಯದ್ಭುತವಾಗಿದೆ. ಹಾಡಿನ ಪ್ರತಿ ಸಾಲು, ಆ ಸಾಲುಗಳಲ್ಲಿ ಬಳಸಲಾಗಿರುವ ಕನ್ನಡದ ಪದಗಳು ನೇರವಾಗಿ ಮನಸ್ಸನ್ನು ತಲುಪುತ್ತವೆ. ಇಂಪಾದ ಸಂಗೀತ, ಮಧುರವವಾದ ಹಿನ್ನೆಲೆಗಾಯನ, ಅದಕ್ಕೆ ತಕ್ಕಂತಹ ಮನೋಜ್ಞ ಅಭಿನಯ ಹಾಗೂ ವರ್ಣಮಯ ದೃಶ್ಯಗಳು, ತಂದೆ ಮಗಳ ಪ್ರೀತಿಯನ್ನು ಅವರ ನಡುವಿನ ಆತ್ಮೀಯತೆಯ ಕ್ಷಣಗಳನ್ನು ಪದಗಳ ಮೂಲಕ ವರ್ಣಿಸಿರುವ ವಿಧಾನ ಎಲ್ಲವೂ ಒಂದು ಸುಂದರವಾದ ಕಾಣಿಕೆಯಾಗಿ , ಮಧುರ ಸಂಗೀತ ಸವಿಯಲು ಬಯಸುವ ಮನಸ್ಸುಗಳಿಗೆ ಗಾನ ಸುಧೆಯಾಗಿ ಹರಿದು ಬಂದಿದೆ ರೆಕ್ಕೆಯ ಕುದುರೆಯೇರಿ, ಬೆಳ್ಳಿ ಬೆಳ್ಳಿ ಮೋಡವ ದಾಟಿ ಬರುವ ನಿನ್ನ ಅಪ್ಪಯ್ಯ ಎನ್ನುವ ಸುಂದರವಾದ ಹಾಡು.ಈ ಸುಂದರ ಹಾಡಿನ ವೀಡಿಯೋ ಇಲ್ಲಿದೆ ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here