ಚಿತ್ರ :- ಕವಲುದಾರಿ 

ತಾರಾಗಣ :- ಅನಂತನಾಗ್ ,ರಿಷಿ , ಅಚ್ಯುತ್ ಕುಮಾರ್ , ಸುಮನ್ ರಂಗನಾಥ್ , ರೋಷಿನಿ ..ಮುಂತಾದವರು

ನಿರ್ದೇಶನ :- ಹೇಮಂತ್ ಆರ್ ರಾವ್ 

ಸಂಗೀತ :- ಚರಣ್ ರಾಜ್

ನಿರ್ಮಾಣ :- ಪುನೀತ್ ರಾಜ್‍ಕುಮಾರ್

ಸುದ್ದಿಮನೆ ರೇಟಿಂಗ್  ★★★★

ಒಬ್ಬ ಸರ್ಕಾರಿ ಅಧಿಕಾರಿ,ಆತನ ಪತ್ನಿ ಮತ್ತು ಮಗಳ ಹಲವಾರು ವರ್ಷಗಳ ಹಿಂದಿನ ಅನುಮಾನಸ್ಪದ ಸಾವನ್ನು ಬೆನ್ನತ್ತುವ ಒಬ್ಬ ಟ್ರಾಫಿಕ್ ಪೋಲೀಸ್ ಇನ್ಸ್ಪೆಕ್ಟರ್, ತನ್ನ ಕೆಲಸ ಟ್ರಾಫಿಕ್ ಗೆ ಸಂಬಂಧಿಸಿದ್ದಾದರೂ ಕೂಡ ಇನ್ವೆಸ್ಟಿಗೇಷನ್ ಮೇಲಿನ ವ್ಯಾಮೋಹ ಹಳೆಯ ಕುಟುಂಬ ಸಾವಿನ ಮೇಲಿನ ಕುತೂಹಲ ಹೆಚ್ಚುವಂತೆ ಮಾಡುತ್ತದೆ. ಕೊಲೆಯ ಸುತ್ತ ಸಾಗುವ ಕವಲುದಾರಿ ಚಿತ್ರದ ಕಥಾಹಂದರಕ್ಕೆ ಅನಂತನಾಗ್ ಆಗಮನ ಚಿತ್ರದ ಲವಲವಿಕೆ ಹೆಚ್ಚಿಸುತ್ತದೆ‌. ಹಲವಾರು ಅನುಮಾನ ಮತ್ತು ಕುತೂಹಕ ಕಾರಿ ಕವಲುದಾರಿಗಳು ಕೊನೆಗೆ ಸತ್ಯದ ದಾರಿಗಳಾಗಿ ಮಾರ್ಪಾಡಾಗುತ್ತವೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಂತರ ನಿರ್ದೇಶಕ ಹೇಮಂತ್ ರಾವ್ ಈ ಚಿತ್ರದ ಮೂಲಕ ಮತ್ತಷ್ಟು ಆಳ ಮತ್ತು ಪಕ್ವವಾಗಿದ್ದಾರೆ. ಚಿತ್ರದ ನಿರೂಪಣೆ ವಿಭಿನ್ನವಾಗಿದ್ದು ಪ್ರೇಕ್ಷಕರಿಗೆ ಮುಂದೇನಾಗಬಹುದು ಎಂಬ ಕಾತುರ ಮೂಡಿಸುತ್ತದೆ. ಅನಂತನಾಗ್ ಪ್ರಬುದ್ಧಾಭಿನಯ ,ರಿಷಿ, ಅಚ್ಯುತ್ ಕುಮಾರ್ ಸಹಜಾಭಿನಯ ನೋಡುಗರನ್ನು ಆಕರ್ಷಿಸುತ್ತದೆ. ಉಳಿದಂತೆ ಸುಮನ್ ರಂಗನಾಥ್ ಸಿಕ್ಕ ಕೆಲವೇ ದೃಶ್ಯಗಳಲ್ಲಿ ಸಿನಿರಸಿಕರ ಕಣ್ತುಂಬಿಕೊಳ್ಳುತ್ತಾರೆ.

ಚರಣ ರಾಜ್ ಹಿನ್ನೆಲೆ ಸಂಗೀತ ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಇದೇ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರುವ ಪುನೀತ್ ರಾಜ್‍ಕುಮಾರ್ ತಾಂತ್ರಿಕವಾಗಿ ಕವಲುದಾರಿ ಮೂಲಕ ಪ್ರೇಕ್ಷಕರ ಮನಗೆಲ್ಲುತ್ತದೆ.ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥೆಗಳನ್ನು ಇಷ್ಡಪಡುವ ಪ್ರೇಕ್ಷಕರಿಗೆ ಕವಲುದಾರಿ ಉತ್ತಮ ಆಯ್ಕೆ. ಸಾಮಾನ್ಯ ಪ್ರೇಕ್ಷಕರಿಗೆ ಕವಲುದಾರಿ ವಿಭಿನ್ನ ಅನುಭವ ನೀಡಬಲ್ಲ ಸಿನಿಮಾ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here