ಮಹಾ ನಟಿ ಸಿನಿಮಾದ ಮೂಲಕ ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿಯಾದವರು ಕೀರ್ತಿ ಸುರೇಶ್. ಆ ಸಿನಿಮಾದಲ್ಲಿ ಹಿರಿಯ ನಟಿ ಸಾವಿತ್ರಿ ಪಾತ್ರಕ್ಕೆ ಜೀವ ತುಂಬಿ, ಸಾವಿತ್ರಿ ಅವರು ಮತ್ತೊಮ್ಮೆ ತೆರೆಯ ಮೇಲೆ ಬಂದರಾ? ಎನ್ನುವಂತೆ ಮಾಡಿದ ನಟಿ ಕೀರ್ತಿ ಸುರೇಶ್ ಅವರು, ಆ ಸಿನಿಮಾದಲ್ಲಿನ ತನ್ನ ಅದ್ಭುತ ನಟನೆಗಾಗಿ ಅತ್ಯುತ್ತಮ ನಟಿಯಾಗಿ ರಾಷ್ಟ್ರ ಪ್ರಶಸ್ತಿ ಕೂಡಾ ಪಡೆದರು‌. ಈಗ ಇದೇ ನಟಿ ಸೂಪರ್ ಸ್ಟಾರ್ ರಜನೀಕಾಂತ್ ಜೊತೆಗೆ ನಟಿಸುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಮಣಿರತ್ನಂ ಅವರ ನಿರ್ದೇಶನದ ಸಿನಿಮಾ ಪೊನ್ನಿಯನ್ ಸೆಲ್ವನ್ ನಿಂದ ಹೊರ ಬಂದಿದ್ದಾರೆ ಎಂದು ಸುದ್ದಿಯಾಗಿದೆ.

ರಜನೀಕಾಂತ್ ಅವರ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಕೀರ್ತಿ ಸುರೇಶ್ ಅವರು ನಟಿಸಲಿದ್ದಾರೆ ಎಂದು ಸನ್ ಪಿಕ್ಚರ್ಸ್ ಇತ್ತೀಚೆಗಷ್ಟೇ ಪ್ರಕಟಣೆಯೊಂದನ್ನು ನೀಡಿತ್ತು. ಆದರೆ ಕೀರ್ತಿ ಸುರೇಶ್ ಅವರು ಇದಕ್ಕಿಂತ ಮೊದಲೇ ಮಣಿರತ್ನಂ ಅವರ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಆದರೆ ಅನಂತರ ಮಣಿರತ್ನಂ ಅವರ ಸಿನಿಮಾದ ಡೇಟ್ಸ್ ಗಳು ಮತ್ತು ರಜನಿಕಾಂತ್ ಅವರ ಸಿನಿಮಾದ ಡೇಟ್ಸ್ ಗಳು ಹೊಂದಾಣಿಕೆ ಆಗದ ಕಾರಣ ಕೀರ್ತಿ ಸುರೇಶ್ ಅವರು ಯಾವುದಾದರೂ ಒಂದು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಉಂಟಾಗಿತ್ತು. ಅದಕ್ಕೆ ಅವರು ಮಣಿರತ್ನಂ ಅವರ ಸಿನಿಮಾ ಬಿಟ್ಟು ರಜನಿಕಾಂತ್ ಅವರ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಮಣಿರತ್ನಂ ಅವರ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಒಂದು ಐತಿಹಾಸಿಕ ಕಥಾನಕ ಸಿನಿಮಾ ಆಗಿದ್ದು ಇದರಲ್ಲಿ ವಿಕ್ರಂ, ಜಯಂ ಸೂರ್ಯ, ಕಾರ್ತಿ, ಐಶ್ವರ್ಯ ರೈ, ತ್ರಿಶಾ ರಂತಹ ಸೂಪರ್ ಸ್ಟಾರ್ ಗಳು ಇದ್ದಾರೆ. ಸದ್ಯಕ್ಕೆ ಅದರಿಂದ ಹೊರ ಬಂದಿರುವ ಕೀರ್ತಿ ಅವರು ಈಗ ರಜನಿಕಾಂತ್ ಅವರ ಸಿನಿಮಾದ ಜೊತೆಗೆ ಪೆಂಗ್ವಿನ್ ಮತ್ತು ಬಾಲಿವುಡ್ ನ ಮೈದಾನ್ ಸಿನಿಮಾಗಳಲ್ಲಿ ನಟಿಸುವುದು ಖಚಿತವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here