ಕೆಂಗಲ್ ಹನುಮಂತ ದೇವಾಲಯ ಕರ್ನಾಟಕದ ರಾಮನಗರಜಿಲ್ಲೆಯ ಚೆನ್ನಪಟ್ಟಣ ತಾಲೂಕಿನಲ್ಲಿ ವಂದಾರಗುಪ್ಪೆ ಗ್ರಾಮದಲ್ಲಿದೆ. ಬೆಂಗಳೂರು ಮೈಸೂರಿನ ಮಾರ್ಗದಲ್ಲಿ ಈ ಗ್ರಾಮವಿದೆ. ಈ ದೇವರ ವಿಗ್ರಹ 5.5 ಅಡಿ ಎತ್ತರವಿದೆ.

ಈ ವಿಗ್ರಹವನ್ನು ಸ್ವಯಂಭು ಹನುಮಾನ್ ಎಂದು ಕರೆಯುತ್ತಾರೆ. ಸ್ವಯಂಭು ಎಂದರೆ ಸ್ವಯಂ ಪ್ರೇರಿತ, ಸ್ವತಃ ತಯಾರಿಸಿವುದು ಸ್ವಯಂ-ಅಭಿವ್ಯಕ್ತಿ ಅಥವಾ ಅದರ ಸ್ವಂತ ಒಪ್ಪಂದದಿಂದ ಸೃಷ್ಟಿಸಲ್ಪಟ್ಟಿದೆ. ಈ ಮೂರ್ತಿಯಲ್ಲಿ ದೇವರ ಮೀಸೆ ವಿಶೇಷವಾಗಿದೆ. ಈ ವಿಗ್ರಹವು ಕೆಂಪು ಕಲ್ಲುಗಳಿಂದ ಮಾಡಲಾಗಿದೆ, ಕೆಂಗಲ್ ಎಂದರೆ ಕೆಂಪು ಕಲ್ಲು (red stone).ಈ ವಿಗ್ರಹವು ಕೆಂಪು ಕಲ್ಲಿನಿಂದ ಉದಯಿಸುತ್ತಿರುವುದರಿಂದ ಇಲ್ಲಿಗೆ ಕೆಂಗಲ್ ಆಂಜನೇಯ ಸ್ವಾಮಿ ಅಥವಾ ಕೆಂಗಲ್ ಹನುಮಂತ ಎಂದು ಕರೆಯುತ್ತಾರೆ.

ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನವು ಬೆಂಗಳೂರಿನಿಂದ ೩೪ ಕಿಮೀ ದೂರದಲ್ಲಿದೆ. ಇದ್ದು ವಂದರಗುಪ್ಪೆ ಹಳ್ಳಿಯಲ್ಲಿದ್ದು ಚನ್ನಪಟ್ಟಣ ತಾಲ್ಲೂಕಿನಲ್ಲಿದೆ. ಇದು ಮೈಸೂರು ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿದೆ. ಈ ದೇವರು ೫ ೧/೨ ಅಡಿ ಎತ್ತರ ಇದೆ.

ಕೆಂಗಲ್ ಎಂದು ಹೆಸರು ಬರಲು ಕಾರಣ ಈ ದೇವಸ್ಥಾನದ ೩ ಕಿಮೀ ಸುತ್ತಳತೆಯಲ್ಲಿ ಕೆಂಪುಕಲ್ಲು ನೋಡಬಹುದು. ಇಲ್ಲಿಯ ಸ್ಥಳೀಯರು ದೇವರನ್ನು “ಅಯ್ಯ” ಎಂದು ಕರೆಯುತ್ತಾರೆ. ಅಂದರೆ ಮನೆಯಲ್ಲಿ ದೊಡ್ಡವನು ಎಂದರ್ಥ. ದೇವಸ್ಥಾನವನ್ನು “ಅಯ್ಯನಗುಡಿ” ಎಂದು ಕರೆಯುತ್ತಾರೆ.

ಈ ದೇವಸ್ಥಾನವು ೮೦೦ ವರ್ಷ ಹಳೆಯದು. ಪುರಾಣಗಳ ಪ್ರಕಾರ ಖುಷಿ ವೈಸರಾಯ ಇಲ್ಲಿ ತಪಸ್ಸು ಮಾಡಿದ್ದನು. ಇಲ್ಲಿಯ ಕಲ್ಲುಗಳು ಅಂಜನೇಯನಂತೆ ಕಾಣುತ್ತವೆ. ಪುರಾಣದ ಪ್ರಕಾರ ವ್ಯಾಪಾರಿಗಳು ವ್ಯಾಪಾರಕ್ಕೆ ಹೋಗುವಾಗ ಇಲ್ಲಿ ಸ್ವಲ್ಪ ಹೊತ್ತು ಕುಳಿತು ಮುಂದಕ್ಕೆ ಹೋಗುತ್ತಾರೆ. ಇಲ್ಲಿ ಹುಲಿಗಳಿರುವ ಕಾರಣದಿಂದ ವ್ಯಾಪಾರಿಗಳು ಈ ಸ್ಥಳವನ್ನು “ಹುಲಿ ಮುಟ್ಟಿಗೆ ದೊಡ್ಡಿ” ಎಂದು ಕರೆದರು.

ಒಂದು ರಾತ್ರಿ ಹುಲಿಯು ಒಬ್ಬವ್ಯಾಪಾರಿಗೆ ಸೇರಿದ ಎತ್ತನ್ನು ಬೇಟೆಯಾಡಿತು. ಆ ವ್ಯಾಪಾರಿಯು ತನ್ನ ಎತ್ತನ್ನು ಹುಡುಕಲು ಹೊರಟನು. ಆದರೆ ಎತ್ತು ದೊರೆಯದ ಕಾರಣ ವಿಶ್ರಾಂತಿಯನ್ನು ತೆಗೆದುಕೊಂಡು ಮುಂಜಾನೆ ಹುಡುಕುವುದೆಂದು ನಿರ್ಧಾರ ಮಾಡಿದನು. ಆಗ ಕನಸಿನಲ್ಲಿ ಹನುಮಂತನು ಬಂದು ನಿನ್ನ ಎತ್ತಿಗೆ ಏನು ಆಗುವುದಿಲ್ಲ ಎಂದು ಆಶ್ವಾಸನೆ ಕೊಟ್ಟನು. ಹಾಗೆಯೇ ವ್ಯಾಪಾರಿಗೆ ನನಗೊಂದು ದೇವಸ್ಥಾನವನ್ನು ಕಟ್ಟಿಸಲು ಹೇಳಿದನು.

ಆ ವ್ಯಾಪಾರಿಯು ಮುಂಜಾನೆ ಎದ್ದು ತನ್ನ ಎತ್ತನ್ನು ಹುಡುಕಲು ಹೊರಟಾಗ ಆಶ್ಚರ್ಯಕರೆವೆಂಬಂತೆ ಹುಲಿ ಎತ್ತು ಪಕ್ಕದಲ್ಲಿಯೇ ಕುಳಿತಿದ್ದವು. ಎತ್ತಿಗೆ ಯಾವುದೆ ಹಾನಿಯಾಗಿರಲಿಲ್ಲ. ಅವುಗಳ ಮುಂದೆಯೇ ಒಂದು ದೊಡ್ಡದಾದ ಬಂಡೆಯಿದ್ದು ಅದನ್ನು ಬಳ್ಳಿಗಳು ಮುಚ್ಚಿಕೊಂಡಿದ್ದವು. ವ್ಯಾಪಾರಿಯು ಆ ಬಳ್ಳಿಗಳನ್ನು ತೆಗೆದು ನೋಡಲು ಆ ಬಂಡೆಯು ಆಂಜನೇಯ ರೂಪದಲ್ಲಿತ್ತು. ಅವನು ಅಲ್ಲಿ ಸಣ್ಣ ದೇವಸ್ಥಾನವನ್ನು ನಿರ್ಮಿಸಿದನು.

ಹುಲಿಯು ಪೂಜಾರಿಗೆ ಕಾಟ ಕೊಡುತ್ತಿತ್ತು. ಆದ್ದರಿಂದ ಅವನು ೯ಗಂಟೆಯ ನಂತರ ಬಂದು ದೇವರಿಗೆ ಪೂಜೆ ಸಲ್ಲಿಸುತ್ತಿದ್ದನು. ಇದನ್ನು ಪರಿಕ್ಷಿಸಲು ಸ್ವಲ್ಪ ದಿನದ ನಂತರ ಮೈಸೂರು ದಿವಾನ ಮಿರ್ಜಾ ಇಸ್ಮಾಯಿಲ್ ಒಂದು ಸಾರಿ ದೇವಸ್ಥಾನಕ್ಕೆ ಬೇಟಿ ಕೊಟ್ಟನು. ಆಗ ಅವನು ಬೆಳಿಗ್ಗೆ ನನ್ನನ್ನು ಹುಲಿಯು ಹಿಡಿದರೆ ನಾನು ದೇವರಲ್ಲಿ ನಂಬುತ್ತೇನೆ ಎಂದು ನಿರ್ಧರಿಸಿದನು.

ಆಗ ಬೋನಿನಲ್ಲಿ ಹುಲಿಯನ್ನು ಕಂಡನು. ಇದರಿಂದ ಆಶ್ಚರ್ಯಚಕಿತನಾದನು, ಆದ್ದರಿಂದ ಅವನು ಅರ್ಚಕ ಹಳ್ಳಿಯಲ್ಲಿ ೮ ಎಕರೆ ಜಾಗವನ್ನು ದೇವರಿಗೆ ನೀಡಿದನು. ಈ ದೇವಸ್ಥಾನವನ್ನು ಕರ್ನಾಟಕದ ಎರಡನೇ ಮುಖ್ಯ ಮಂತ್ರಿಯಾದ ಹಾಗೂ ವಿಧಾನ ಸೌಧದ ವಾಸ್ತುಶಿಲ್ಪಿಯಾದ ಕೆಂಗಲ್ ಹನುಮಂತಯ್ಯನು ೬೦ನೇ ಹುಟ್ಟು ಹಬ್ಬವನ್ನು ಈ ದೇವರ ದೇವಸ್ಥಾನ ನಿರ್ಮಿಸುವುದರ ಮೂಲಕ ಆಚರಿಸಿಕೊಂಡರು.

ಪುಟ್ಟಪರ್ತಿಯ ಶ್ರೀ ಸತ್ಯಸಾಯಿಬಾಬ ಮತ್ತು ಶೃಂಗೇರಿ ಸ್ವಾಮಿಜೀಯವರಿಂದ ಕಳಸ ಪ್ರತಿಷ್ಟಪನೆ ಮಾಡಿಸಲಾಗಿದೆ. ಈ ಸ್ಥಳವು ಶೀಘ್ರ ಮತ್ತು ಸರಳ ಮದುವೆಗೆ ಪ್ರಖ್ಯಾತವಾಗಿದೆ.ಈ ದೇವಾಲಯವು ಪುರಾತನ ದೇವಾಲಯಗಳಲ್ಲಿ ಒಂದಾಗಿದೆ.

ಹಿಂದೂ ಮಹಾಕಾವ್ಯ ಮಹಾಭಾರತವನ್ನು ಬರೆದ ಋಷಿ ವ್ಯಾಸ ಈ ವಿಗ್ರಹವನ್ನು ನಿರ್ಮಿಸಿದನು. ಈ ವಿಗ್ರಹವು ಬಹಳಷ್ಟು ಶಕ್ತಿಯನ್ನು ಹೊಂದಿದೆ. ಇಲ್ಲಿಗೆ ಬಂದು ತಮ್ಮ ಕಷ್ಟಗಳನ್ನು ದೇವರ ಬಳಿ ಹೇಳಿಕೊಂಡು ಬೇಡಿಕೊಂಡರೆ ಕಷ್ಟಗಳಿಗೆ ಪರಿಹಾರ ಸಿಗುವುದಂತೆ. ಈ ದೇವರು ಕೆಟ್ಟದನ್ನು ಶಿಕ್ಷಿಸುವಾಗ ಯಾವುದೇ ರೀತಿ ದಯೆ ತೋರುವುದಿಲ್ಲ ಹಾಗೆ ಒಳ್ಳೆಯವರನ್ನು ಕೈ ಬಿಡುವುದಿಲ್ಲ. ಮಕ್ಕಳಿಲ್ಲದ ದಂಪತಿಗಳಿಗೆ ಮತ್ತು ಇತರ ಅನಾರೋಗ್ಯದ ಜನರಿಗೆ ಇದು ಪ್ರಸಿದ್ಧ ಹಿಂದೂ ಯಾತ್ರಾ ಸ್ಥಳವಾಗಿದೆ.

ಈ ದೇವಸ್ಥಾನದ ವಾಸ್ತುಶಿಲ್ಪದ ಒಂದು ಅದ್ಭುತವೆಂದರೆ, ಮಕರಸಂಕ್ರಾಂತಿಯ ದಿನದಂದು (ಸೂರ್ಯ) ಕಿರಣಗಳು (ಜನವರಿ 14/15) ಅಂದರೆ #ಉತ್ತರಾಯಣದ ಮೊದಲ ದಿನವು ನೇರವಾಗಿ ವಿಗ್ರಹದ ಮೇಲೆ ಬಿಳುತ್ತವೆ. ಇದು ಇತರ ದಿನಗಳಲ್ಲಿ ಆಗುವುದಿಲ್ಲ

ನಿರೂಪಣೆ:- ಅಚ್ಯುತ್ ಸೌಮ್ಯ ಸನತ್‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

1 COMMENT

  1. ಕೆಂಗಲ್ ಹನುಮಂತರಾಯನ ದೇವಸ್ಥಾನದ ಬರೆಹದಲ್ಲಿ ಕೆಲವು ತಪ್ರುಗಳಿವೆ-ಮುಖ್ಯವಾದ್ದು ಇಲ್ಲಿ “ಖುಷಿ ವೈಸರಾಯ”ನ ಬದಲು ಋಷಿ ವ್ಯಾಸ ಅಂತಿರಬೇಕು…ತಿದ್ದುಪಡಿಯಾಗಬೇಕು ಶೀಘ್ರವೇ…

LEAVE A REPLY

Please enter your comment!
Please enter your name here