ಕೇರಳ ಕೊರೊನಾ ಸೋಂಕು ಕಂಡು ಬಂದ ಮೊದಲ ರಾಜ್ಯವಾಗಿತ್ತು. ಅದರಲ್ಲೂ ಕೇರಳದ ಕಾಸರಗೋಡಿನಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗಿರುವುದು ಕೂಡಾ ಸುದ್ದಿಯಾಗಿತ್ತು. ಇದರ ನಡುವೆಯೇ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳ ವಾರ್ಡ್‌ಗಳ ಸಮೀಪ ಸಿಕ್ಕಿದ ಐದು ಬೆಕ್ಕುಗಳನ್ನು ಹಿಡಿದು ಸ್ಥಳಾಂತರಿಸಲಾಗಿತ್ತು. ಈ ಐದು ಬೆಕ್ಕುಗಳು ಕೂಡಾ ಅನಂತರ ಶವವಾಗಿ ಪತ್ತೆಯಾಗಿವೆ. ಆಸ್ಪತ್ರೆಯ ಬಳಿ ಹಿಡಿದ ಬೆಕ್ಕುಗಳನ್ನು ಅಲ್ಲಿಂದ ಕಾಸರಗೋಡು ಜಿಲ್ಲಾ ಪಂಚಾಯತ್ ಅಡಿಯಲ್ಲಿ ಪ್ರಾಣಿ ಜನನ ನಿಯಂತ್ರಣ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.

ಬೆಕ್ಕುಗಳ ಮರಣೋತ್ತರ ಪರೀಕ್ಷೆಯ ನಂತರ, ಅವು ಕೂಡಾ COVID-19 ಸೋಂಕಿನಿಂದ ಸಾವಿಗೆ ಈಡಾಗಿಬಹುದೇ ಎಂಬ ಅನುಮಾನದಿಂದ, ಅದನ್ನು ಕಂಡುಹಿಡಿಯಲು ಅವುಗಳ ಆಂತರಿಕ ಅಂಗಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಸಂಗ್ರಹಿಸಿ ಇಡಲಾಗಿದೆ. ಮರಣೋತ್ತರ ಪರೀಕ್ಷೆಯನ್ನು ಪ್ರಾಣಿ ರೋಗ ನಿಯಂತ್ರಣ ಯೋಜನಾ ಸಂಯೋಜಕರಾದ ಟಿಟೊ ಜೋಸೆಫ್ ಮತ್ತು ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎಂ.ಜೆ. ಸೇತುಲಕ್ಷ್ಮಿ ನಡೆಸಿದರು. ಡಾ. ಜೋಸೆಫ್ COVID-19 ಸೋಂಕಿನ ಸಾಧ್ಯತೆಗಳನ್ನು ತಿರಸ್ಕರಿಸಿದ್ದಾರೆ. ಐಸೊಲೇಷನ್ ವಾರ್ಡ್ ಬಳಿ ಇಡಲಾಗಿದ್ದ ಕಸದ ಬುಟ್ಟಿಯಲ್ಲಿ ಎಸೆದ ಆಹಾರ ತ್ಯಾಜ್ಯವನ್ನು ಬೆಕ್ಕು ತಿನ್ನಲು ಪ್ರಯತ್ನಿಸುತ್ತಿರುವ ಫೋಟೋಗಳು ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಆರೋಗ್ಯ ಇಲಾಖೆ ಟೀಕೆಗೆ ಗುರಿಯಾಗಿತ್ತು.

ಎಲ್ಲೆಡೆ ಇದರ ಬಗ್ಗೆ ಟೀಕೆಗಳು ಕೇಳಿ ಬಂದ ಬೆಕ್ಕುಗಳನ್ನು ಹಿಡಿಯಲಾಯಿತು. ಎರಡು ಬೆಕ್ಕುಗಳು ಸುಮಾರು 10 ದಿನಗಳ ಹಿಂದೆ ಸಿಕ್ಕಿಬಿದ್ದು ಒಂದೆರಡು ದಿನಗಳಲ್ಲಿ ಸಾವನ್ನಪ್ಪಿದವು ಮತ್ತು ಅವುಗಳನ್ನು ಪ್ರಾಣಿಗಳ ಜನನ ನಿಯಂತ್ರಣ ಕೇಂದ್ರದಲ್ಲಿ ಕಾರ್ಮಿಕರು ಹೂಳಿದ್ದರು. ಉಳಿದ ಮೂರು ಅನಂತರ ಸತ್ತವು. ಇದನ್ನು ಗಮನಿಸಿದ ಪಶುಸಂಗೋಪನಾ ಇಲಾಖೆಯು ಎರಡು ವರ್ಷದ ಟಾಮ್‌ ಕ್ಯಾಟ್ ಮತ್ತು 20 ದಿನಗಳ ಹಳೆಯ ಬೆಕ್ಕುಗಳ ಆಂತರಿಕ ಅಂಗಗಳನ್ನು ಹೆಚ್ಚಿನ ಪರೀಕ್ಷೆಗೆ ಸಂಹ್ರಹಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here