ನಮ್ಮ ಸಂಸ್ಕೃತಿಯಲ್ಲಿ ಪ್ರಸಿದ್ಧ ದೇವಾಲಯಗಳು ಎಂದರೆ ಅಲ್ಲಿ ಆನೆಗಳು ಇರುತ್ತವೆ. ದೇವರ ಉತ್ಸವ ಸೇರಿ ಹಲವಾರು ಪುಣ್ಯ ಕಾರ್ಯಗಳಿಗೆ ಗಜರಾಜನ ಸಾಥ್ ಇರುತ್ತದೆ. ದೇವರ ನಾಡು ಎಂದೇ ಖ್ಯಾತಿಯಾಗಿರುವ ಕೇರಳದಲ್ಲಿ ಹಲವಾರು ಪ್ರಸಿದ್ದ ದೇವಾಲಯಗಳು‌ ಇವೆ. ಅವುಗಳಲ್ಲಿ ತ್ರಿಶೂರ್ ಜಿಲ್ಲೆಯ ಪೂರಂ ಸಹ ಪ್ರಸಿದ್ಧ ದೇಗುಲವಾಗಿದ್ದು ಇಲ್ಲಿ ಇಂದಿನಿದ ಪೂರಂ ಉತ್ಸವ ಆರಂಭವಾಗಲಿದೆ. ಈ ಉತ್ಸವದ ಪ್ರಮುಖ ಆಕರ್ಷಣೆ ತೆಚಿಕೊಟ್ಟಕಾವು ರಾಮಚಂದ್ರನ್ . ಅರೆ ಯಾರು ಈ ರಾಮಚಂದ್ರನ್ ಅಂತೀರ ಅದು ವ್ಯಕ್ತಿಯ ಹೆಸರಲ್ಲ ಅದು ಕೇರಳದ ಅತಿ ಎತ್ತರದ ಆನೆಯ ಹೆಸರು.

ಹೌದು ಸುಮಾರು ಆರು ಟನ್ ತೂಕದ ಐವತ್ನಾಲ್ಕು ವರ್ಷದ ಮುನ್ನೂರ ಹದಿನೇಳು ಸೆಂಟಿಮೀಟರ್ ಎತ್ತರದ ಈ ಆನೆಯೇ ಪೂರಂ ಉತ್ಸವದ ಕೇಂದ್ರ ಬಿಂದು.ತ್ರಿಶ್ಯೂರ್ ಪೂರಂ ಉತ್ಸವ ಆರಂಭ..ಕೇರಳದ ತ್ರಿಶ್ಯೂರ್ ಪೂರಂ ಉತ್ಸವ ಇಂದು (ಮೇ 13)ಆರಂಭಗೊಂಡಿದ್ದು, ಕೇರಳದ ಅತಿ ಎತ್ತರದ ಆನೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ತೆಚಿಕೊಟ್ಟುಕಾವು ರಾಮಚಂದ್ರನ್ ಎನ್ನುವ ಆನೆ ಇಂದು ಉತ್ಸವದ ಮುನ್ನಾ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಶನಿವಾರವಷ್ಟೆ ಈ ಆನೆಯನ್ನು ಉತ್ಸವಗಳಲ್ಲಿ ಬಳಸಲು ಹೇರಿದ್ದ ನಿಷೇಧವನ್ನು ತೆಗೆಯಲಾಗಿತ್ತು.

ಆನೆಯ ಅನಾರೋಗ್ಯ ಮತ್ತು ಅದರ ಕ್ರೌರ್ಯದ ವರ್ತನೆಯನ್ನು ಉಲ್ಲೇಖಿಸಿ ಆನೆಯ ಮೇಲೆ ನಿಷೇಧ ಹೇರಲಾಗಿತ್ತು. ಈ ಆನೆಗೆ ಒಂದು ಕಣ್ಣು ಕುರುಡಾಗಿರುವುದೂ ಇದಕ್ಕೆ ಕಾರಣ.
10.5 ಅಡಿ ಎತ್ತರವಿರುವ ರಾಮಚಂದ್ರನ್, ಮೂರು ತಿಂಗಳ ಹಿಂದಷ್ಟೆ ನಿಯಂತ್ರಣ ತಪ್ಪಿದ್ದರಿಂದ ಇಬ್ಬರು ಮೃತಪಟ್ಟಿದ್ದರು. ಈ ಎಲ್ಲದರ ನಡುವೆ ಆನೆಗೆ ಅದರದೇ ಆದ ಅಭಿಮಾನಿಗಳಿದ್ದಾರೆ. ಅದಕ್ಕೊಂದು ಅಭಿಮಾನಿಗಳ ಪಡೆ ಇದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here