ಕೇರಳದ ಪ್ರವಾಹದಿಂದ ನೊಂದ ಜನರಿಗೆ ವಿವಿಧ ಮೂಲಗಳಿಂದ ಸಹಾಯ ಹರಿದು ಬರುತ್ತಿದ್ದು, ಶ್ರೀ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗ ವರೆಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಕೊಡುಗೆಯನ್ನು ನೀಡಲು ಮುಂದಾಗಿತ್ತಿದ್ದು, ಮಾನವೀಯತೆಯನ್ನು ಮೆರೆಯುತ್ತಿದ್ದಾರೆ. ಸೆಲೆಬ್ರಿಟಿಗಳು ಲಕ್ಷ , ಕೋಟಿಗಳಷ್ಟು ಹಣ ನೀಡುತ್ತಿದ್ದರೆ , ಮದ್ಯಮ ವರ್ಗದ ಜನರು ತಾವು ಕೂಡಿಟ್ಟ, ಯಾವುದೋ ಸಮಾರಂಭಕ್ಕಾಗಿ ಉಳಿಸಿಟ್ಟ ಹಣ ನೀಡಿ, ಸೆಲೆಬ್ರಿಟಿ ಗಳಿಗಿಂತ ನಾವು ಕಡಿಮೆಯಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.ಈಗ ಅದೇ‌ ನಿಟ್ಟಿನಲ್ಲಿ ಕೇರಳದ ಒಬ್ಬ ವ್ಯಕ್ತಿ ಪ್ರವಾಹ ಪೀಡಿತರಿಗೆ ವಸ್ತ್ರ ಕೊಡುಗೆ ನೀಡಿ ಎಂದು ಕೇಳಲು ಬಂದ ಸ್ವಯಂ ಸಂಸ್ಥೆಗೆ ,‌ತನ್ನ ಇಡೀ ಷೋ ರೂಂ‌ನ‌ ಬಟ್ಟೆಗಳನ್ನು

ತೆಗೆದುಕೊಂಡು ಹೋಗಲು ಅನುಮತಿ ನೀಡಿ, ಮಾನವೀಯತೆಯನ್ನು ಮೆರೆದಿದ್ದಾರೆ ಹಾಗೂ ಕಷ್ಟ ಕಾಲದಲ್ಲಿ ಒಬ್ಬರು ಇನ್ನೊಬ್ಬರ ನೆರವಿಗೆ ನಿಲ್ಲಬೇಕು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಅವರ ಈ ಕೆಲಸ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಕೇರಳದ ಕಲ್ಪಟ್ಟ ಎಂಬಲ್ಲಿ ರೆಡಿಮೇಡ್ ವಸ್ತ್ರಗಳ ಶೋ ರೂಂ ಹೊಂದಿರುವ ಫೈಜಲ್ ಎಂಬುವವರೇ ಆ ಹೃದಯವಂತಿಕೆ ಮೆರೆದ ವ್ಯಕ್ತಿಯಾಗಿದ್ದಾರೆ. ಸ್ವಯಂ ಸೇವಾ ಸಂಘಟನೆಯೊಂದು, ಇವರ ಬಳಿ ಬಂದು ಪ್ರವಾಹ ಸಂತ್ರಸ್ತರಿಗೆ ಸ್ವಲ್ಪ ಬಟ್ಟೆಗಳನ್ನು ನೀಡಬೇಕೆಂದು ಕೇಳಿದ್ದಾರೆ.

ಅದಕ್ಕೆ ಪೈಜಲ್‌ ನೀಡಿದ ಉತ್ತರ ಮಾತ್ರ ಎಲ್ಲರನ್ನೂ ದಂಗು ಬಡಿಸಿದೆ. ಬಟ್ಟೆ ಕೇಳಲು ಬಂದ ಆ ಸ್ವಯಂ ಸೇವಾ ಸಂಘಟನೆಗೆ ಪೈಜಲ್ ಅವರು ತಮ್ಮ. ಪೂರ್ತಿ ಬಟ್ಟೆ ಅಂಗಡಿಯನ್ನು ಬಿಟ್ಟು ಕೊಟ್ಟು, ಅಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಬಟ್ಟೆಗಳೆಲ್ಲವನ್ನೂ ತೆಗೆದು ಕೊಂಡು ಹೋಗಿ ಎಂದು ಹೇಳಿದ್ದಾರೆ.ನಿಜವಾಗಿಯೂ ಮಾನವೀಯತೆ ಎಂಬುದು ಇಂತಹ ಸಂದರ್ಭಗಳಲ್ಲಿ ಹೊರಬರುತ್ತದೆ. ಸಂಕಷ್ಟ ದಲ್ಲಿ ಇರುವವರ ರಕ್ಷಣೆಗೆ ಮಾಡುವ ಇಂತಹ ಕೆಲಸಗಳು ಹಾಗೂ ಅದನ್ನು ಮಾಡುವ ಸಾಮಾನ್ಯರು ಕೂಡಾ ತಮ್ಮ ಒಂದು ಸಹಾಯದಿಂದ ಅಸಾಮಾನ್ಯರಾಗಿಬಿಡುತ್ತಾರೆ ಹಾಗೂ ಮಾನವೀಯತೆಗೆ ನಿಲುವೆತ್ತರ ನಿದರ್ಶನ ಆಗಿ ಬಿಡುತ್ತಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here