ಕೇರಳದ ನೆರೆ ಸಂತ್ರಸ್ತರಿಗೆ ಮಾನವೀಯ ನೆಲೆಗಟ್ಟಿನಲ್ಲಿ ಹಲವರು ಹಲವು ರೀತಿಯಲ್ಲಿ ಸಹಾಯ ಮಾಡಿದ ಒಂದೊಂದೇ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಕಾಣ ತೊಡಗಿದ್ದು, ಮಾನವೀಯತೆ ಎಂಬುದು ನಮ್ಮ ಸಮಾಜದಲ್ಲಿ ಇನ್ನೂ ಉಳಿದಿದೆ ಎಂಬುದಕ್ಕೆ ನಿದರ್ಶನವಾಗಿದ್ದು, ಉಳ್ಳವರು, ಇಲ್ಲದವರು ಎಲ್ಲರೂ ಪ್ರಕೃತಿಯ ಮುಂದೆ ಅಸಹಾಯಕರು ಎಂಬ ಸಮಯದಲ್ಲಿ ದೇವ ಮಾನವ ರಂತೆ ಕಷ್ಟದಲ್ಲಿರುವವರ ನೆರವಿಗೆ ಧಾವಿಸಿದ ಕೆಲವರು, ಇತರರಿಗಾಗಿ ತಾವು ಏನೇ ಮಾಡಲು ಸಿದ್ದರಿದ್ದೇವೆ ಎಂಬುದನ್ನು ತಮ್ಮ ಕಾರ್ಯಗಳಿಂದ ತೋರಿಸುತ್ತಿದ್ದಾರೆ.

ಸೆಲೆಬ್ರಿಟಿ ಗಳು ಮಾಡಿದ ನೆರವು ಮಾದ್ಯಮಗಳಲ್ಲಿ ಜಗಜ್ಜಾಹಿರಾದರೆ , ಪ್ರವಾಹದಲ್ಲಿ ಸಿಕ್ಕವರ ಜೊತೆಯಲ್ಲೇ ಇದ್ದು ಅವರ ಪ್ರಾಣ ಉಳಿಸಿದ ಅನೇಕ ತೆರೆ ಮರೆಯ ನಾಯಕರ ಸಾಧನೆ, ಧೈರ್ಯಗಳು ಅಷ್ಟಾಗಿ ಗಮನಕ್ಕೆ ಬಂದಿಲ್ಲ. ಇಂತಹುದೇ ಒಂದು ಮಾನವೀಯ ಕಾರ್ಯ ಮಾಡಿರುವ ರಿಯಲ್ ಲೈಫ್ ಹೀರೋ ಜೈಸಲ್. ಕೇರಳದ ತ್ರಿಶೂರ್ ನಲ್ಲಿ ನೆರೆಯಲ್ಲಿ ಸಿಲುಕಿದ ಜನರ ರಕ್ಷಣೆಗೆ ಹೊರಟ‌ ಸ್ವಯಂ ಸೇವಕ ಮೀನುಗಾರರ ತಂಡ, ಈಗಾಗಲೇ ಸಾವಿರಾರು ಜನರನ್ನು ಉಳಿಸಿ ರಾಷ್ಟ್ರ ಮಟ್ಟದಲ್ಲಿ ಹೊಗಳಿಕೆಗೆ ಪಾತ್ರವಾಗಿದ್ದಾರೆ. ಈ ಮೀನುಗಾರರ ತಂಡು ನೆರೆ ಬಾದಿತರನ್ನು ರಕ್ಷಿಸಿ ಅವರನ್ನು ರಕ್ಷಣಾ ದೋಣಿಗಳಿಗೆ ಹತ್ತಲು ಹೇಳಿದ್ದಾರೆ.

ರಕ್ಷಣಾ ದೋಣಿಗಳನ್ನು ಹತ್ತುವಾಗ ಕಷ್ಟವೆನಿಸಿದ ಮಹಿಳೆಯರಿಗೆ ಹಾಗೂ ಹಿರಿಯರಿಗೆ ಸಹಾಯ ಮಾಡುವ ಉದ್ದೇಶದಿಂದ ಜೈಸಲ್ ತಾನೇ ನೀರಿನಲ್ಲಿ ತನ್ನ ಬೆನ್ನು ಬಾಗಿಸಿ ಮೆಟ್ಟಿಲಿನ ರೀತಿ ತನ್ನ ಮೇಲೆ ಹತ್ತಿ ದೋಣಿಯೊಳಗೆ ಹೋಗಲು ಹೇಳಿದ್ದಾರೆ. ಇತರರ ರಕ್ಷಣೆಗಾಗಿ ದೋಣಿ ಏರಲು ತನ್ನನ್ನು ತಾನೇ ಏಣಿಯಂತೆ ಬಳಸಲು ಇತರರಿಗೆ ಅವಕಾಶ ಮಾಡಿಕೊಟ್ಟ ಜೈಸಲ್ ರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲೆಡೆಯಿಂದ ವ್ಯಾಪಾಕ ಮೆಚ್ಚುಗೆ ಪಾತ್ರವಾಗಿದೆ. ಅವರಿಗೆ ಈಗಾಗಲೆ ಸಾವಿರಾರು ಜನ ದೂರವಾಣಿ ಕರೆ ಮಾಡಿ ಅಭಿನಂದನೆಯ ಮಳೆ ಸುರಿಸಿದ್ದಾರೆ. ಇದಲ್ಲವೇ ಮಾನವೀಯತೆ ಎಂದರೆ? ಇದಕ್ಕೆ ಲಕ್ಷ ಅಲ್ಲ ಕೋಟಿ ಕೊಟ್ಟರೂ ಅದನ್ನು ತೂಗಲು ಸಾಧ್ಯವಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here