ಕೇರಳದ ಇಪ್ಪತ್ತು ವರ್ಷದ ಆ್ಯಡಂ ಹ್ಯಾರಿಯ ಜೀವನ ಸಾಮಾನ್ಯವಾದುದಲ್ಲ. ಆ್ಯಡಂ ತೃತೀಯ ಲಿಂಗಿ ಎಂದು ಗುರುತಿಸಲ್ಪಟ್ಟಾಗ ಆತನ ಕುಟುಂಬ ಅದನ್ನು ಸ್ವೀಕರಿಸಲು ತಯಾರಿಲ್ಲದೆ ಮನೆಯಿಂದ ಹೊರಹಾಕಲ್ಪಟ್ಟ. ಆದರೆ ಅದೇ ಆ್ಯಡಂ ಹ್ಯಾರಿಯ ಕನಸನ್ನು ನನಸು ಮಾಡಲು ಆತನನ್ನು ಕೇರಳ ಸರ್ಕಾರ ಕಮರ್ಷಿಯಲ್ ಪೈಲಟ್ ಮಾಡಲು ಮುಂದಾಗಿರುವುದು ಆ್ಯಡಂನ ಗುರಿ ಸಾಧನೆಗೆ ನೆರವಾಗುವಂತಾಗಿದೆ. ತಿರುವನಂತಪುರಂನ ರಾಜೀವ್ ಗಾಂಧಿ ಅಕಾಡೆಮಿ ಫಾರ್ ಏವಿಯೇಷನ್ ​​ಟೆಕ್ನಾಲಜಿಯಲ್ಲಿ ಮೂರು ವರ್ಷಗಳ ಕೋರ್ಸ್ ಮಾಡಲು ಮತ್ತು ಅವರ ಕನಸುಗಳನ್ನು ಈಡೇರಿಸಲು ವಾಣಿಜ್ಯ ಪೈಲಟ್ ಪರವಾನಗಿ ಪಡೆಯಲು ಹ್ಯಾರಿಗೆ ಸಹಾಯ ಮಾಡಲು ರಾಜ್ಯದ ಸಾಮಾಜಿಕ ನ್ಯಾಯ ಇಲಾಖೆ 23.34 ಲಕ್ಷ ರೂ. ಗಳನ್ನು ನೀಡಲು ಮುಂದಾಗಿದೆ.

ಹ್ಯಾರಿ ಈಗಾಗಲೇ ಖಾಸಗಿ ಪೈಲಟ್ ಪರವಾನಗಿಯನ್ನು ಹೊಂದಿದ್ದಾನೆ ಮತ್ತು ಅವನ ಕುಟುಂಬವು ಅವನನ್ನು ತ್ಯಜಿಸಿದ್ದರಿಂದ ಆತ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಸರ್ಕಾರದ ಸಹಾಯವನ್ನು ಕೋರಿ ಅರ್ಜಿ ಸಲ್ಲಿಸಬೇಕಾಯಿತು. ಕಮರ್ಷಿಯಲ್ ಪೈಲಟ್ ಆಗಲು ಕಮರ್ಷಿಯಲ್ ಲೈಸನ್ಸ್ ಬೇಕು. ವಾಯುಯಾನ ನಿಯಂತ್ರಕ ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ನಿಯಮಗಳ ಪ್ರಕಾರ, ಅರ್ಜಿದಾರರು ಇನ್ನೂರು ಗಂಟೆಗಳ ವಿಮಾನ ಯಾನ ಮಾಡಿರುವ ದಾಖಲೆ ಬೇಕು. ಅದಕ್ಕಾಗಿಯೇ ಈಗ ಹ್ಯಾರಿ ಮೂರು ವರ್ಷ ಕೋರ್ಸ್ ಮಾಡಲು ಸರ್ಕಾರ ನೆರವು ನೀಡಿದೆ.

ತನಗೆ ಇಂತಹ ನೆರವು ನೀಡಲು ಮುಂದಾಗಿರುವುದಕ್ಕೆ, ಈ ಸಹಾಯಕ್ಕಾಗಿ ಕೇರಳ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿರುವ ಆ್ಯಡಂ ಹ್ಯಾರಿ ಕೇರಳದ ತ್ರಿಶೂರ್ ಜಿಲ್ಲೆಯವರಾಗಿದ್ದು, ದೇಶದಲ್ಲೇ ಖಾಸಗಿ ಪೈಲಟ್ ಪರವಾನಗಿ ಮೊದಲ ಟ್ರಾನ್ಸ್ ಜೆಂಡರ್ ಎಂಬ ಹೆಗ್ಗಳಿಗೆ ಇವರದ್ದಾಗಿದೆ. ಕೇರಳ ಎಲ್.ಜಿ.ಬಿ.ಟಿ. ಸಮುದಾಯದವರಿಗೆ ಇತ್ತೀಚಿನ ದಿನಗಳಲ್ಲಿ ಮುಕ್ತವಾದ ಅವಕಾಶಗಳನ್ನು ನೀಡುತ್ತಿರುವುದು ದೇಶದ ಗಮನವನ್ನು ಸೆಳೆದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here