ಪ್ರೇಮ ಚಿಗುರಲು ವಯಸ್ಸಿನ ಅಂತರವಿಲ್ಲ. ಇಷ್ಟ ಪಡುವ ಮನಸ್ಸು ಸಿಕ್ಕಾಗ, ಒಲವಿನ ಹೂಗಳು ಅರಳಿದಾಗ ಆತ್ಮೀಯತೆ ಕೂಡಾ ಪ್ರೇಮವಾಗಿ ಬದಲಾಗಿ, ಪ್ರೇಮಾಂಕುರವಾಗುತ್ತದೆ. ಮನಸುಗಳ ಮಿಲನ ಮುಖ್ಯವೇ ಹೊರತು, ಅಂದ ಚೆಂದ, ಆಸ್ತಿ ಅಂತಸ್ಸು ಅಥವಾ ವಯಸ್ಸನ್ನು ಅವಲಂಬಿಸಿ ನಿಜವಾಗ ಪ್ರೀತಿ ಮೂಡುವುದಿಲ್ಲ. ಈಗ ಇಂತಹುದೇ ಒಂದು ನಿಜವಾದ ಪ್ರೇಮ ಅರಳಿದೆ.‌ ಕೇರಳದ ವೃದ್ಧಾಶ್ರಮವೊಂದರಲ್ಲಿ ವೃದ್ಧರಿಬ್ಬರು ಪ್ರೀತಿಸಿ ವಿವಾಹವನ್ನು ಮಾಡಿಕೊಂಡಿದ್ದಾರೆ. ಇತ್ತೀಚಿಗೆ ನಡೆದಿರುವ ಈ ಭಾವನಾತ್ಮಕ ಘಟನೆಯಲ್ಲಿ 60 ವಯಸ್ಸಿನ ಕೊಚ್ಚನಿಯನ್ ಮೆನನ್ ಮತ್ತು ಲಕ್ಷ್ಮೀ ಅಮ್ಮಾಳ್ ಎಂಬುವ ಹಿರಿಯ ಜೀವಿಗಳು ವಿವಾಹ ಬಂಧನದ ಮೂಲಕ ಒಂದಾಗಿದ್ದಾರೆ.

ಕೇರಳದ ತ್ರಿಶೂರ್ ಜಿಲ್ಲೆಯ ರಾಮವರ್ಮಪುರಂ ನಲ್ಲಿರುವ ವೃದ್ಧಾಶ್ರಮದಲ್ಲಿ ಒಬ್ಬರನ್ನೊಬ್ಬರು ಭೇಟಿಯಾದ ಕೊಚ್ಚಾನಿಯನ್ ಮೆನನ್ ಮತ್ತು ಲಕ್ಷ್ಮೀ ಅಮ್ಮಾಳ್ ಮೊದಲು ಸ್ನೇಹಿತರಾಗಿದ್ದಾರೆ. ದಿನ ಕಳೆದಂತೆ ಸ್ನೇಹ ಆತ್ಮೀಯತೆಯಾಗಿ, ಇಬ್ಬರ ನಡುವೆ ಪ್ರೀತಿ ಮೂಡಿ, ಕಡೆಗೆ ವಿವಾಹ ಮಾಡಿಕೊಳ್ಳಲು ನಿರ್ಧಾರ ಮಾಡಿದರು ಈ ಹಿರಿಯ ಜೀವಗಳು. ಕಳೆದ ಶನಿವಾರ ಕೊಚ್ಚಾನಿಯನ್ ಮೆನನ್ (67) , ಲಕ್ಷ್ಮೀ ಅಮ್ಮಾಳ್ (65) ಅವರು ವಿವಾಹ ಮಾಡಿಕೊಂಡು ಹೊಸ ಜೀವನವನ್ನು ಆರಂಭಿಸಿದ್ದು, ಇವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೃದ್ಧಾಶ್ರಮದಲ್ಲಿ ಇರುವ ಇತರೆ ಹಿರಿಯರೆಲ್ಲಾ ಸೇರಿ ಸಾಂಪ್ರದಾಯಿಕವಾಗಿ ಇವರ ವಿವಾಹವನ್ನು ಮಾಡಿಸಿದ್ದಾರೆ. ವೈರಲ್ ಆದ ಈ ವಿವಾಹದ ಫೋಟೋ ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಪ್ರೇಮ ಎಲ್ಲ ಗಡಿಗಳನ್ನು ದಾಟಿ ಮುಂದೆ ಹೋಗಲೀ, ಪ್ರೀತಿಗೆ ಯಾವುದೇ ಗಡಿಗಳು ಎಂಬುದು ಇಲ್ಲ, ಪ್ರೇಮಕ್ಕೆ ಮುಪ್ಪು ಎನ್ನುವುದು ಇಲ್ಲ ಎಂದು ಕೂಡಾ ಪ್ರತಿಕ್ರಿಯೆಗಳನ್ನು ನೀಡುವ ಮೂಲಕ ಈ ಹಿರಿಯ ಜೀವಗಳ ವಿವಾಹಕ್ಕೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಗಳನ್ನು ಕೋರಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here