ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ಭಾರತ ಚಿತ್ರರಂಗದ ಪಸರಿಸಿದ ಚಿತ್ರ KGF. ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಕೀರ್ತಿಯನ್ನು ಮತ್ತೊಂದು ಹಂತಕ್ಕೆ ಕರೆದೊಯ್ದ ಕೆಜಿಎಫ್ ಚಿತ್ರತಂಡ ಹೊಸ ಇತಿಹಾಸ ಸೃಷ್ಟಿಸಿತ್ತು. ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದ ಕೆಜಿಎಫ್ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ಅವರು ಪಾನ್ ಇಂಡಿಯಾ ಸೂಪರ್ ಸ್ಟಾರ್ ನಟನಾಗಿ ಪರಿಚಿತರಾದರು. ರಾಕಿಂಗ್ ಸ್ಟಾರ್ ಯಶ್ ಮಾಡಿದ ಮೋಡಿಗೆ ಇಡೀ ಭಾರತೀಯ ಚಿತ್ರರಂಗವೇ ಫಿದಾ ಆಗಿತ್ತು.

ಕೆಜಿಎಫ್ ಚಿತ್ರದ ಮುಂದುವರೆದ ಭಾಗವಾಗಿರುವ ಕೆಜಿಎಫ್ ಚಾಪ್ಟರ್ ಟು ಚಿತ್ರವೂ ತೆರೆಗೆ ಬರಲು ರೆಡಿಯಾಗಿದೆ. ಕೆಜಿಎಫ್ ಚಾಪ್ಟರ್ ಟು ಚಿತ್ರದ ಎಕ್ಸ್ಕ್ಲೂಸಿವ್ ಪೋಸ್ಟರ್ ರಿಲೀಸ್ ಆಗಿದೆ. ಸಂಜಯ್ ದತ್ ಅಧೀರನ ಅವತಾರದಲ್ಲಿ ಮಿಂಚಿರುವ KGF2 ಚಿತ್ರದ ಹೊಚ್ಚ ಹೊಸ ಪೋಸ್ಟರ್ ಒಂದನ್ನು ಚಿತ್ರತಂಡ ಇಂದು ರಿವೀಲ್ ಮಾಡಿದೆ.

ಸಂಜಯ್ ದತ್ ಅವರು ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಂದಾಗಿನಿಂದಲೂ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ KGF2 ಚಿತ್ರದಲ್ಲಿ ಸಂಜಯ್ ದತ್ ಅಧೀರ ನ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಹುಟ್ಟಿತ್ತು. ಇದೀಗ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಮಾಡುವಂತೆ ಸಂಜಯ್ ದತ್ ಪತ್ರದ ಲುಕ್ ರಿವೀಲ್ ಆಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here