ಸ್ಯಾಂಡಲ್ ವುಡ್ ನಲ್ಲೊಂದು ಸೆನ್ಸೇಷನ್ ಕ್ರಿಯೇಟ್ ಮಾಡಿ, ಹೊಸ ದಾಖಲೆಗಳನ್ನು ಬರೆದ ಸಿನಿಮಾ ಎಂದೊಡನೆ ಎಲ್ಲರೂ ತಟ್ಟನೆ ಉತ್ತರಿಸುವ ಹೆಸರು ಕೆಜಿಎಫ್. ಈ ಬ್ಲಾಕ್​ ಬಸ್ಟರ್​ ಸಿನಿಮಾದ ಮೂಕ ಸ್ಯಾಂಡಲ್​ವುಡ್​​ ನಲ್ಲಿ ಹೊಸ ಅಲೆಯನ್ನು ಎಬ್ಬಿಸಿ, ಭಾರತೀಯ ಚಿತ್ರರಂಗವದು ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡಿದ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ನೀಲ್. ಇಂದು ಪ್ರಶಾಂತ್ ನೀಲ್ ಅವರು ತಮ್ಮ ಜೀವನದ ಮಧುರವಾದ ಸ್ಮೃತಿಯಾದ ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದು, ಅವರು ಮದುವೆಯಾಗಿ, ಇಂದಿಗೆ ಸಂತೋಷ ಒಂಬತ್ತು ವರ್ಷಗಳು ಕಳೆದಿವೆ.

ಈ ಸಂತಸದ ದಿನದಲ್ಲಿ ತನ್ನ ಸಂತೋಷ ಹಾಗೂ ಸಂಭ್ರಮವನ್ನು, ತಾನು ತನ್ನ ಜೀವನ ಸಂಗಾತಿಯನ್ನು ಮೊದಲ ಬಾರಿಗೆ ಭೇಟಿಯಾದ ನೆನಪುಗಳ ಬಗ್ಗೆ ಅವರು ತಮ್ಮ ಫೇಸ್​ಬುಕ್​​ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಕೆಲವು ಅಂದವಾಸ ಫೋಟೊಗಳನ್ನು ಕೂಡಾ ಅವರು ಹಂಚಿಕೊಂಡಿದ್ದಾರೆ. ಅವರು ಫೋಟೋಗಳ ಜೊತೆ ಸಂದೇಶವೊಂದನ್ನು ಬರೆದಿದ್ದು, ಅದರಲ್ಲಿ ನೀನು ನನ್ನ ಬಗ್ಗೆ ಮೊದಲ ಭೇಟಿಯಲ್ಲಿ ಹೇಗೆ ನನ್ನ ಕಾಳಜಿ ವಹಿಸಿ, ನನ್ನ ತಲೆಗೂದಲನ್ನು ಸೆಟ್ ಮಾಡಿದೆಯೋ, ಇಂದಿಗೂ ಅದೇ ರೀತಿಯಲ್ಲಿ ಕಾಳಜಿ ತೋರುವೆ, ನಾವು ನಮ್ಮದು ಅವೇಂಜ್ಡ್‌ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಎನ್ನುವುದನ್ನು ಚರ್ಚೆ ಮಾಡುತ್ತಲೇ ಇರೋಣ.

ನಮಗಿನ್ನೂ ಇದರ ಬಗ್ಗೆ ಸ್ಪಷ್ಟತೆ ಇಲ್ಲ. ಭವಿಷ್ಯದಲ್ಲಿ ಮತ್ತಷ್ಟು ಜಗಳ ಮಾಡುತ್ತಾ, ಮಧುರ ಸ್ಮೃತಿಗಳನ್ನು ಹೆಣೆಯುತ್ತಾ ನೀಲ್ ಗ್ಯಾಂಗ್ ಅನ್ನು ಕಟ್ಟೋಣ ಎನ್ನುವ ಒಂದು ಅಂದವಾದ ಸಾಲುಗಳ ಪೋಸ್ಟ್ ಮೂಲಕ ಪ್ರಶಾಂತ್ ನೀಲ್ ಅವರು ತಮ್ಮ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯವನ್ನು ಕೋರಿದ್ದಾರೆ. ಅವರ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡ ಫೋಟೋ ನೋಡಿ ಹಲವರು ಮೆಚ್ಚುಗೆ ಸೂಚಿಸುತ್ತಾ, ಶುಭಾಶಯಗಳನ್ನು ಕೂಡಾ ಕೋರುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here