ಕನ್ನಡ ಚಿತ್ರರಂಗದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಚಿತ್ರವೂ ಪ್ರಮುಖವಾದುದು. ಉಗ್ರಂ ಚಿತ್ರದ ನಂತರ ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ಬಹು ಕೋಟಿ ವೆಚ್ಚದ ಕೆ ಜಿ ಎಫ್ ಚಿತ್ರಕ್ಕೆ ಹೊಂಬಾಳೆ ಪ್ರೊಡಕ್ಷನ್ ಬಂಡವಾಳ ಹೂಡಿದೆ.ಈಗಾಗಲೇ ಚಿತ್ರೀಕರಣ ಮುಗಿಸಿ ನವೆಂಬರ್ ತಿಂಗಳ 16 ರಂದು ಬಹು ಭಾಷೆಗಳಲ್ಲಿ ಏಕಕಾಲಕ್ಕೆ ಕೆ.ಜಿ.ಎಫ್ ಚಿತ್ರ ತೆರೆಗೆ ಬರಲಿದೆ. ಅದಕ್ಕೂ ಮೊದಲು ಮುಂದಿನ ತಿಂಗಳು ಅಂದ್ರೆ ಅಕ್ಟೋಬರ್ ತಿಂಗಳ 14 ರಂದು ಕೆ.ಜಿ.ಎಫ್ ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ.ಸಿನಿಮಾ ಮತ್ತು ಟ್ರೈಲರ್ ನೋಡುವ ಮುನ್ನವೇ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಕೆ.ಜಿ.ಎಫ್ ಚಿತ್ರತಂಡ ಕೆ.ಜಿ.ಎಫ್ ಚಿತ್ರದ ಕೆಲವು ಮಾಸ್ ಸ್ಟಿಲ್ ಗಳನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಿಸುವಂತೆ ಮಾಡಿದೆ.ರಾಕಿಂಗ್ ಸ್ಟಾರ್ ಮಾಸ್ ಅವತಾರದಲ್ಲಿ ಮಿಂಚುತ್ತಿರುವ ಕೆ.ಜಿ.ಎಫ್ ಚಿತ್ರದ ಎಕ್ಸಕ್ಲೂಸಿವ್ ಫೋಟೋ ಗಳು‌ ಇಲ್ಲಿದೆ ನೋಡಿ..

 

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here