ಹೊಂಬಾಳೆ ಪ್ರೊಡಕ್ಷನ್ ಅಡಿಯಲ್ಲಿ ಪ್ರಶಾಂತ್ ನೀಲ್ ಅವರ ದಕ್ಷ ನಿರ್ದೇಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ನಾಯಕನಾಗಿ ನಟಿಸಿರುವ ಮೋಸ್ಟ್ ಎಕ್ಸೈಟಿಂಗ್ ಸಿನಿಮಾ ಆಗಿ ಪಂಚ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಅದ್ದೂರಿ ಚಿತ್ರ ಕೆಜಿಎಫ್. ಚಿತ್ರ ಬಿಡುಗಡೆಯ ದಿನಾಂಕ ಅನೌನ್ಸ್ ಆದ ಮೇಲೆ ಯಶ್ ಅಭಿಮಾನಿಗಳು ಮಾತ್ರವಲ್ಲದೆ, ಸಿನಿಪ್ರಿಯರೆಲ್ಲರೂ ಬಿಡುಗಡೆಯ ದಿನಕ್ಕಾಗಿ ಕಾಯುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಹಿಂದಿನ ಯಾವುದೇ ಚಿತ್ರಕ್ಕಿಂತ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದೆ ಕೆಜಿಎಫ್. ಈ ಚಿತ್ರ ತೆರೆಯ ಮೇಲೆ ಅಬ್ಬರಿಸಲು ಇನ್ನೊಂದು ವಾರ ಮಾತ್ರ ಉಳಿದಿದೆ. ಮಾದ್ಯಮಗಳಲ್ಲಿ ಪ್ರತಿ ದಿನ ಸುದ್ದಿಯಲ್ಲಿ ಈ ಚಿತ್ರ ಮಂಚೂಣಿಯಲ್ಲಿದೆ.

ಇನ್ನು ಈ ಬಹು ನಿರೀಕ್ಷಿತ ಚಿತ್ರ ಎರಡು ಕಂತುಗಳಲ್ಲಿ ಬರಲಿದೆಯೆಂಬುದು ಕೂಡಾ ವಿಶೇಷವೇ ಆಗಿದೆ. ಮೊದಲ ಭಾಗದಲ್ಲಿ ನಾಯಕನಾದ ರಾಕಿಯ ಬಾಲ್ಯ ಜೀವನ ಹಾಗೂ ಹೇಗೆ ಈತ ಭೂಗತ ಲೋಕದ ಜೊತೆಗೆ ಸಂಪರ್ಕ ಪಡೆಯುತ್ತಾನೆ ಹಾಗೂ ಅಲ್ಲೊಬ್ಬ ಗ್ಯಾಂಗ್ ಸ್ಟರ್ ಆಗುತ್ತಾನೆ ಎಂಬುದನ್ನು ಸುಂದರ ಕಥಾನಕದ ಮೂಲಕ ವಿವರಿಸಲು ಹೊರಟಿದ್ದಾರೆ. ಈ ಚಿತ್ರದ ಕಥಾ ಹಂದರ ಏನೆಂಬುದನ್ನು ನಿರ್ದೇಶಕರು ಬಹಳ ಸರಳವಾಗಿ ವಿವರಿಸಿದ್ದು, ಜನರಿಗೆ ಚಿತ್ರದ ಬಗ್ಗೆ ಮತ್ತಷ್ಟು ಆಸಕ್ತಿ ಮೂಡಿಸಿದೆ.

ಒಬ್ಬ ಅತಿಯಾಸೆಯ ಕೆಟ್ಟ ಅಥವಾ ದುಷ್ಟನ ಕೈಗೆ ಬಂಗಾರದ ಗಣಿಯ ಒಡೆತನ ಸಿಕ್ಕರೆ ಅವನು ಏನೆಲ್ಲಾ ದುಷ್ಕೃತ್ಯಗಳನ್ನು ಮಾಡಬಲ್ಲನೆಂಬುದನ್ನು ತೆರೆಯ ಮೇಲೆ ಆವಿಷ್ಕರಿಸಲಿದ್ದಾರೆ ಪ್ರಶಾಂತ್ ನೀಲ್ ಅವರು. ಚಿತ್ರದಲ್ಲಿ ಭೂಗತ ಜಗತ್ತಿನ ಬಗ್ಗೆ ಕೂಡಾ ಇದ್ದು, ನಿರ್ದೇಶಕರೇ ಹೇಳುವಂತೆ ತನ್ನ ತಾಯಿಯ ಮಾತಿನ ಮೇರೆಗೆ ನಾಯಕ ಭೂಗತ ಜಗತ್ತಿನ ಪ್ರವೇಶ ಮಾಡುತ್ತಾನೆ. ಅಂದ ಮೇಲೆ ಭರ್ಜರಿ ಆಕ್ಷನ್ ಜೊತೆಗೆ ತಾಯಿ ಸೆಂಟಿಮೆಂಟ್ ಕೂಡಾ ಚಿತ್ರಕ್ಕೆ ಸೇರಿದೆ ಎನ್ನಬಹುದಾಗಿದೆ.

ದೇಶಾದ್ಯಂತ ಸುಮಾರು 1500 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ಕೆಜಿಎಫ್ ಅಬ್ಬರ……ಓದಿ.

ಕೆಜಿಎಫ್ ಕನ್ನಡ ಚಿತ್ರ ಸೀಮೆಯ ಬಹು ನಿರೀಕ್ಷೆಯ ಚಿತ್ರ ಹಾಗೂ ಪ್ರೆಸ್ಟೀಜಿಯಸ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈಗಾಗಲೇ ಚಿತ್ರ ಬಿಡುಗಡೆಯ ಕ್ಷಣಗಣನೆ ಒಂದೆಡೆ ಆರಂಭವಾಗಿದೆ‌. ಪಂಚಭಾಷೆಗಳಲ್ಲಿ ಮಿಂಚಲು ಹೊರಟಿರುವ ಈ ಸಿನಿಮಾ ಟಾಕ್ ಆಫ್ ದಿ ಟೌನ್ ಆಗಿದೆ. ಟ್ರೇಲರ್ ಹಾಗೂ ಟೀಸರ್ ಮೂಲಕವೇ ಅಬ್ಬರಿಸಿದ್ದ ಈ ಚಿತ್ರವು ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದೆಯೆಂಬ ವಿಷಯವು ಕೂಡಾ ಈಗೊಂದು ಹೊಸ ಇತಿಹಾಸವನ್ನು ಸೃಷ್ಟಿಸಲು ಹೊರಟಿದೆ. ಕೆಜಿಎಫ್ ಎಲ್ಲಾ ಭಾಷೆಗಳಲ್ಲೂ ಜಯಭೇರಿ ಬಾರಿಸಬೇಕೆಂಬ ಪಣ ತೊಟ್ಟಂತಿದೆ ಚಿತ್ರ ತಂಡ.

ಕನ್ನಡದಲ್ಲಿ ಈ ಚಿತ್ರ ಒಟ್ಟು 350 ಥಿಯೇಟರ್ ಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ಹಿಂದಿಯ ಖ್ಯಾತ ನಟ,ನಿರ್ದೇಶಕ ಪರ್ಹಾನ್ ಅಖ್ತರ್ ಕೆಜಿಎಫ್ ನ ಹಿಂದಿ ಅವತರಣಿಕೆಯ ವಿತರಕರಾಗಿದ್ದು ಅವರು ಸಹಾ ಸುಮಾರು 350 ಚಿತ್ರ ಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಹೊರಟಿದ್ದಾರೆ. ತೆಲುಗಿನಲ್ಲಿ ಚಿತ್ರದ ಹಕ್ಕನ್ನು ಪಡೆದಿರುವ ವಾರಾಹಿ ಪ್ರೊಡಕ್ಷನ್ 300 ಥಿಯೇಟರ್ ಗಳಲ್ಲಿ ತೆಲುಗಿನಲ್ಲಿ ಕೆಜಿಎಫ್ ನ್ನು ಬಿಡುಗಡೆ ಮಾಡುತ್ತಿದ್ದು, ಮೊಟ್ಟ ಮೊದಲ ಬಾರಿಗೆ ಕನ್ನಡದ ಚಿತ್ರವೊಂದಕ್ಕೆ ಈ ಮಟ್ಟದ ಥಿಯೇಟರ್ ಗಳನ್ನು ತೆಲುಗಿನಲ್ಲಿ ಪಡೆಯಲಾಗಿದೆ.

ತಮಿಳುನಾಡಿನಲ್ಲಿ 250. ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೆ ಅಣಿಯಾಗುತ್ತಿದ್ದರೆ, ಮೊಟ್ಟ ಮೊದಲ ಬಾರಿಗೆ ಮಲೆಯಾಳಂನಲ್ಲಿ ಕನ್ನಡ ನಾಡಿನ ಚಿತ್ರವೊಂದು 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆಯೆಂಬುದು ಕೂಡಾ ಈ ಚಿತ್ರದ ಹೆಗ್ಗಳಿಕೆಯಾಗಿದೆ. ಇದೆಲ್ಲಾ ದೇಶದಲ್ಲಿ ಆದರೆ ವಿದೇಶಗಳಲ್ಲಿ ಸುಮಾರು 100 ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು, ಬರೋಬ್ಬರಿ 1500 ಚಿತ್ರಮಂದಿರಗಳಲ್ಲಿ ಕೆಜಿಎಫ್ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆಯೆಂಬುದು ನಿಜಕ್ಕೂ ದೊಡ್ಡ ಸಂತಸದ ವಿಷಯವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here