KGF ಭಾರತ ಚಿತ್ರರಂಗದಲ್ಲಿ ಸಖತ್ ಸೆನ್ಸೇಷನಲ್ ಸೃಷ್ಟಿಸುತ್ತಿರುವ ಸಿನಿಮಾ. ಮೊದಲ ಬಾರಿಗೆ ಕನ್ನಡ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬಂದು ಎಲ್ಲಾ ಭಾಷೆಯಲ್ಲಿ ಯಶಸ್ಸು ಪಡೆಯುತ್ತಿರುವ ಕೆಜಿಎಫ್ ಚಿತ್ರದ ಹಿಂದೆ ಹಲವಾರು ಜನರ ಶ್ರಮವಿದೆ. ಕೆಜಿಎಫ್ ಚಿತ್ರವನ್ನು ಬರೋಬ್ಬರಿ ಎರಡು ವರ್ಷಗಳ ಕಾಲ ಚಿತ್ರೀಕರಣ ಮಾಡಲಾಗಿತ್ತು. ಕೆಜಿಎಫ್ ಮೊದಲ ಭಾಗ ಈಗ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಕೆಜಿಎಫ್ ಚಿತ್ರತಂಡ ಸಂಭ್ರಮದಲ್ಲಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ನೂರು ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ ಪಡೆದ ಕೆಜಿಎಫ್ ಚಿತ್ರಕ್ಕೆ ಹೊಂಬಾಳೆ ಪ್ರೊಡಕ್ಷನ್ಸ್ ನ ವಿಜಯ್ ಕಿರಗಂದೂರು ಮತ್ತು ಕಾರ್ತಿಕ್ ಗೌಡ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದರು.

ಐದು ಭಾಷೆಗಳಲ್ಲಿ ಸಿನಿಮಾ ತೆರೆಕಂಡು ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ‘ಕೆಜಿಎಫ್’ ಸಿನಿಮಾ. ಆರೇ ದಿನಗಳಲ್ಲಿ 100 ಕೋಟಿ ದಾಡಿದ ಕನ್ನಡ ಚಿತ್ರ ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಅದಲ್ಲದೇ ಹೊರದೇಶಗಳಲ್ಲಿಯೂ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬೇರೆ ಭಾಷೆಯ ಕಲಾವಿದರು , ತಂತ್ರಜ್ಞನರು ಸಿನಿಮಾವನ್ನು ವೀಕ್ಷಿಸಿ ಕನ್ನಡ ಚಿತ್ರಕ್ಕೆ ಬೆಂಬಲ ನೀಡುತ್ತಿದ್ದಾರೆ. ಇತ್ತೀಚೆಗೆ ತೆಲುಗು ಚಿತ್ರನಿರ್ದೇಶಕ ರಾಮ್ ಗೋಪಾಲ್ ವರ್ಮಾ , ತೆಲುಗು ನಟ ನಿಖಿಲ್ ಅವರು ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೀಗ ಕನಸಿನ ರಾಣಿ ಮಾಲಾಶ್ರೀ ‘ಕೆಜಿಎಫ್’ ಸಿನಿಮಾ ನೋಡಿದ್ದಾರೆ.ಎಲ್ಲೆಲ್ಲಿಯೂ ‘ಕೆಜಿಎಫ್’ ಹವಾ

ಜೋರಾಗಿದ್ದು, ಇದೀಗ ನಮ್ಮ ಚಂದನವನದ ನಟಿ, ಕನಸಿನ ರಾಣಿ ಮಾಲಾಶ್ರೀ ಕೂಡ ‘ಕೆಜಿಎಫ್’ ಸಿನಿಮಾ ವೀಕ್ಷಣೆ ಮಾಡಿದ್ದು, ಸಿನಿಮಾ ನೋಡಿರುವುದರ ವಿಚಾರವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಯಶ್ ನಟನೆ ಅಧ್ಬುತವಾಗಿದ್ದು,ನೋಡುಗರನ್ನು ಬೆರಗುಗೊಳಿಸುವುದರ ಜೊತೆಗೆ ಮೈನವೀರೆಳಿಸುತ್ತದೆ. ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಛಾಯಾಗ್ರಾಹಕ ಭುವನ್ ಗೌಡ ಚಿತ್ರದ ದೃಶ್ಯಗಳನ್ನು ತೆರೆಯ ಮೇಲೆ ಅದ್ಭುತವಾಗಿ ಮೂಡಿಸಿದ್ದು, ಚಿತ್ರತಂಡಕ್ಕೆ ಹ್ಯಾಟ್ಸಫ್ ಹೇಳುತ್ತಾ ಹೊಂಬಾಳೆ ಫಿಲ್ಮ್ಸ್ ಗೆ ಶುಭಕೋರಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here