ಇಂದು ಮುಂಜಾನೆ ಕಿಚ್ಚ ಸುದೀಪ್ ಧಿಡೀರನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.

ಅಚಾನಕ್ಕಾಗಿ ಕಿಚ್ಚ ಸುದೀಪ್ ಸಿದ್ದರಾಮಯ್ಯ ಅವರನ್ನು ಭೇಟಿ ನೀಡಿದ್ದು ಸಾಕಷ್ಟು ಕುತೂಹಲ ಮೂಡಿಸಿತ್ತು

ಇದೀಗ ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು ನೆನಗುದಿಗೆ ಬಿದ್ದಿರುವ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸಮಾಧಿಯ ವಿವಾದವನ್ನು ಬಗೆಹರಿಸಿ ಬೇಗ ಸ್ಮಾರಕ ನಿರ್ಮಾಣವಾಗುವಂತೆ ಮನವಿ ಮಾಡಿದ್ದಾರೆ.

ವಿಷ್ಣುವಿನ ಸ್ಮಾರಕ ನಿರ್ಮಾಣಕ್ಕೆ ಕಿಚ್ಚ ಸುದೀಪ್ ಮುಖ್ಯಮಂತ್ರಿ ಭೇಟಿ ಮಾಡಿರುವುದು ವಿಷ್ಣು ಅಭಿಮಾನಿಗಳಲ್ಲಿ ಆನೆಬಲ ತಂದಿದ್ದು ಮುಂದಿನ ದಿನಗಳಲ್ಲಿ ಯಾವ ರೀತಿ ಕಾರ್ಯರೂಪಕ್ಕೆ ಬರುತ್ತದೋ ಕಾದು ನೋಡಬೇಕಿದೆ.!

ಕಿಚ್ಚ ಸುದೀಪ್ ಜೊತೆ ವಿಷ್ಣು ಸೇನಾ ಸಮಿತಿಯ ಅದ್ಯಕ್ಷರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ವಿಷ್ಣು ಸ್ಮಾರಕ ಸಾಧ್ಯತೆಗಳ ಬಗ್ಗೆ ವಿವರಣೆ ನೀಡಿದರು.!

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here