ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ,ಕನ್ನಡ ಅಲ್ಲದೇ ಪರಭಾಷೆಯಲ್ಲೂ ಅಪಾರ ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಸೆಪ್ಟೆಂಬರ್ 2 ರಂದು 45 ನೇ ವರ್ಷದ ಜನ್ಮದಿನದ ಸಂಭ್ರಮ.ಕಳೆದ ಬಾರಿ ಜನ್ಮದಿನ ಆಚರಣೆಯಿಂದ ದೂರ ಉಳಿದಿದ್ದ ಕಿಚ್ಚ ಸುದೀಪ್ ಅವರು ಈ ಬಾರಿ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಜೆಪಿ ನಗರದ ತಮ್ಮ‌ ನವಾಸದಲ್ಲಿ  ಈ ಬಾರಿಯ ಜನ್ಮದಿನ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ‌.ಆದರೆ ಈ ಬಾರಿ ಸಹ ಅಭಿಮಾನಿಗಳಿಗೆ ಕಲವು ನಿಬಂಧನಗಳನ್ನು ವಿಧಿಸಿರುವ ಕಿಚ್ಚ ಸುದೀಪ್ ಅವರು ಯಾವುದೇ ಕಾರಣಕ್ಕೂ ಅಭಿಮಾನಿಗಳು ಕೇಕು ಹಾರ ಪಟಾಕಿ ತರಬಾರದು ಎಂಬ ಷರತ್ತು ವಿಧಿಸಿದ್ದಾರೆ‌.ಆದರೆ ವರ್ಷಕ್ಕೊಮ್ಮೆ ಬರುವ ಮೆಚ್ಚಿನ ನಾಯಕನ ಜನ್ಮದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಅಸಚರಿಸಲು ತೀರ್ಮಾನಿಸಿದ್ದಾರೆ.

ಈಗಾಗಲೇ ಕಿಚ್ಚ ಸುದೀಪ್ ಅಭಿಮಾನಿಗಳು ಟ್ವಿಟರ್ ನಲ್ಲಿ ಭಾರತದಲ್ಲಿ ಟ್ರೆಂಡ್ ಸೃಷ್ಟಿಸಿ ಸುದೀಪ್ ಅವರಿಗೆ ವಿಶೇಷ ಗೌರವ ನೀಡಿದ್ದಾರೆ. ಅಷ್ಟೇ ಅಲ್ಲದೇ ಸೋಷಿಯಲ್ ಮೀಡಿಯಾಗಾಗಿ ಕಾಮನ್ ಡಿಪಿ ತಯಾರಿಸಿ ಅದನ್ನು ಎಲ್ಲರೂ ಪ್ರೊಫೈಲ್ ಆಗಿ ಬಳಸಿ ಕಿಚ್ಚ ಸುದೀಪ್ ಅವರಿಗೆ ಜನ್ಮದಿನದ ಶುಭಾಷಯ ತಿಳಿಸುತ್ತಿದ್ದಾರೆ.ಇನ್ನು ಕನ್ನಡದಲ್ಲಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷೆಯ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಜೊತೆ ನಟಿಸಿ ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಸೆನ್ಸಾರ್ ಮುಗಿಸಿ ತೆರೆಗೆ ಬರಲು ಸಜ್ಜಾಗುತ್ತಿದೆ.ಕಿಚ್ಚ ಸುದೀಪ್ ಅಭಿನಯದ ಫೈಲ್ವಾನ್ ಮತ್ತು ಕೋಟಿಗೊಬ್ಬ-3 ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಕಿಚ್ಚನ ಜನ್ಮದಿನಕ್ಕೆ ಮಧ್ಯರಾತ್ರಿ ಟೀಸರ್ ಬಿಡುಗಡೆ ಮಾಡುತ್ತಿವೆ.

ಇವುಗಳ ಮಧ್ಯೆ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಿಗ್ ಬಜೆಟ್ ನ ಸೈರಾ ನರಸಿಂಹ ರೆಡ್ಡಿ ಚಿತ್ರತಂಡವು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜನ್ಮದಿನದ ಪ್ರಯುಕ್ತ ಸುದೀಪ್ ಅವರ ವಿಶೇಷ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು ಕಿಚ್ಚ ಸುದೀಪ್ ಅವರು ಸಖತ್ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಸಖತ್ ವೈರಲ್ ಆಗಿದೆ.ಇನ್ನು ರಾಜ್ಯದ ಹಲವೆಡೆ ಕಿಚ್ಚ ಸುದೀಪ್ ಅಭಿಮಾನಿಗಳು ನೆಚ್ಚಿನ ನಟನ ಜನ್ಮದಿನದ ನಿಮಿತ್ತ ಹಲವು ಕಡೆ ಅನ್ನದಾನ ಮಾಡುತ್ತಿದ್ದು ಅನಾಥಾಶ್ರಮಗಳಿಗೆ ಸಹಾಯ ಮಾಡುವ ಮೂಲಕ ಅರ್ಥಪೂರ್ಣ ಕಿಚ್ಚನ ಜನ್ಮದಿನ ಆಚರಿಸುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here