ಬೆಂಗಳೂರು ಹೊರವಲಯ ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ತಮ್ಮ ಗೆಲುವಿಗಾಗಿ ಚಿತ್ರನಟರ ಮೊರೆಹೋಗಿರುವಂತೆ ಕಾಣುತ್ತಿದೆ. ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದು, ನೆಲಮಂಗಲದಲ್ಲಿ ಜೆಡಿಎಸ್ ಪಕ್ಷದ ಪರ ಪ್ರಚಾರ ಮಾಡಲು ಕಿಚ್ಚ ಸುದೀಪ್ ಈಗಾಗಲೇ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಶಾಸಕ ಶ್ರೀನಿವಾಸಮೂರ್ತಿ ಹಾಗೂ ಕಿಚ್ಚ ಸುದೀಪ್ ಭೇಟಿಯಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸುದೀಪ್ ಕೂಡ 2018ರ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಊಹಾಪೋಹಗಳು ಕೂಡ ಹರಿದಾಡುತ್ತಿವೆ. ಈ ನಡುವೆ ಅಭ್ಯರ್ಥಿಗಳ ಗೆಲುವಿಗಾಗಿ ಸ್ಟಾರ್ ಕ್ಯಾಂಪೇನ್ ನಲ್ಲಿ ನಟರ ಬಳಕೆ ಈಗಿನಿಂದಲೇ ರಂಗೇರುತ್ತಿದೆ.

ಈ ಹಿಂದೆ ಸುದೀಪ್ ಚುನವಾಣೆಗೆ ಸ್ಪರ್ಧೆ ಮಾಡದೇ ಜೆಡಿಎಸ್ ಅಭ್ಯರ್ಥಿಗಳ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ವೇಳೆ ಕಿಚ್ಚ ಭೇಟಿಯಾಗಿದ್ದರು. ಈ ವೇಳೆ ಸುದೀಪ್ ನಾನು ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಆದರೆ ಪ್ರಚಾರ ಮಾಡುವ ಮನಸ್ಸಿದೆ ಎಂದು ಹೇಳಿದ್ದರು. ನಾಯಕ ಸಮುದಾಯದ ಮತಗಳನ್ನು ಸೆಳೆಯೋಕೆ

ಕಿಚ್ಚನನ್ನು ಬಳಸಿಕೊಳ್ಳೋಕೆ ಜೆಡಿಎಸ್ ಕೂಡ ಒಳಗೊಳಗೇ ಸಿದ್ಧತೆ ಮಾಡಿಕೊಂಡಿದೆ.ಕಿಚ್ಚ ಸುದೀಪ್ ಜೆಡಿಎಸ್ ಪರ ಚಿತ್ರದುರ್ಗದ ಜಿಲ್ಲೆಯಲ್ಲೂ ಮತಯಾಚಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.ಒಂದು ವೇಳೆ ಕಿಚ್ಚ ಸುದೀಪ್ ಜೆಡಿಎಸ್ ಪರ ಪ್ರಚಾರ ನಡೆಸಿದರೆ ಜೆಡಿಎಸ್ ಗೆ ಈ ಬಾರಿ ಸ್ಟಾರ್ ಕಳೆ ಹೆಚ್ಚಾಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here