ಇದು ಭಾರತೀಯರು ಹೆಮ್ಮೆಪಡುವ ಕಿಕ್ ಬಾಕ್ಸರ್ ಗಿರೀಶ್ ಗೌಡ ಅವರ ಮಾತುಗಳು. ‘ಸುಮಾರು 9 ತಿಂಗಳು ಕ್ಯಾನ್ಸರ್ ತೊಂದರೆಯಿಂದ ತೀವ್ರವಾಗಿ ಬಳಲಿದೆ. ಅಸಾಧ್ಯ ನೋವಿನಿಂದ ತುಂಬಾ ಕಷ್ಟವಾಗುತ್ತಿತ್ತು. ಆದರೆ ನನ್ನ ಆಸೆ ತುಂಬಾ ದೊಡ್ಡದಾಗಿತ್ತು. ಅದರ ಮುಂದೆ ಕ್ಯಾನ್ಸರ್ ನೋವು ನನ್ನನ್ನು ಏನೂ ಮಾಡಲಾಗಲಿಲ್ಲ. ಅದಕ್ಕೆ ಇಂದು ನನ್ನ ಕನಸನ್ನು ಸಾಕಾರ ಮಾಡಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದ್ದೇನೆ’ ಎಂದು ಸ್ಫೂರ್ತಿಯ ಚಿಲುಮೆಯಂತೆ ನುಡಿದರು ಕಿಕ್ ಬಾಕ್ಸರ್ ಗಿರೀಶ್ ಗೌಡ.ಕರ್ನಾಟಕದ ಕಿಕ್ ಬಾಕ್ಸರ್ ಕರ್ಣಕರ್ನಾಟಕದ ಕಿಕ್ ಬಾಕ್ಸರ್ ಗಿರೀಶ್ ಭಾರತದ ಕ್ರೀಡಾಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಬರೆದಿದ್ದಾರೆ

.

ಗಿರೀಶ್ ಅವರು ಕಿಕ್ ಬಾಕ್ಸರ್ ಆಗಿದ್ದು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು 130 ಬಾರಿ ಕಿಮೋಥೆರಪಿಗೆ ಒಳಗಾಗಿದ್ದು ಸಿಟಿಕೇರ್ ಆಸ್ಪತ್ರೆಯ ವೈದ್ಯರಾದ ಡಾಃ ಹರಿ ಮೆನೆನ್ ರವರ ಸಲಹೆಯಂತೆ 2 ವರ್ಷಗಳ ಕಾಲ ಕಿಕ್ ಬಾಕ್ಸರ್ ನಿಂದ ದೂರ ಇರಬೇಕು ಎನ್ನುವ ಸೂಚನೆ ಇದ್ದರೂ ಎದೆಗುಂದದೆ ನಿತ್ಯ ಅಭ್ಯಾಸ ಮಾಡುತ್ತಿದ್ದ ಗಿರೀಶ್ ಇತ್ತೀಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ ಷಿಪ್ ನಲ್ಲಿ 9ನೇ ಬಾರಿಗೆ ಚಿನ್ನದ ಪದಕ ಗೆದ್ದು ಸಾಧನೆಯನ್ಬು ಮೆರೆದಿದ್ದಾರೆ ಕನ್ನಡದ ಈ ಹುಡುಗ.ಅಷ್ಟೇ ಅಲ್ಲದೆ ಆ ಪದಕವನ್ನು ಬೆಂಗಳೂರಿನ ಸಿಟಿಕೇರ್ ಆಸ್ಪತ್ರೆಗೆ ಆ ಪದಕವನ್ನು ಕಾಣಿಕೆಯಾಗಿ ನೀಡಿದ್ದಾರೆ. ತಮಗೆ ಮರುಜನ್ನ ನೀಡಿದ ಈ ಆಸ್ಪತ್ರೆಯು ನನಗೆ 2 ನೇ ಮನೆಯಾಗಿದೆ ಎಂದು ಬಣ್ಣಿಸಿದ ಅವರು ನನ್ನ ಕಾಳಜಿ ವಹಿಸಿ ನನಗೆ ಚಿಕಿತ್ಸೆ ನೀಡಿದ ಡಾಃ ಹರಿ ಮೆನನ್ ಇರದಿದ್ದರೆ ಇಂದು ಈ ಸಾಧನೆ ಮಾಡಲು ಸಾದ್ಯವೇ ಆಗುತ್ತಿರಲಿಲ್ಲ ಎಂದು ಬಣ್ಣಿಸಿದ್ದಾರೆ.ಇದುವರೆಗೂ ರಾಷ್ಟೀಯ ಚಾಂಪಿಯನ್ ಷಿಪ್ ನಲ್ಲಿ 9 ಚಿನ್ನದ ಪದಕ ಕೀರ್ತಿ ಅವರಿಗೆ ಸಲ್ಲುತ್ತದೆ. ಅದಕ್ಕೆ ಅವರು 9 ನನಗೆ ಅದೃಷ್ಟದ ಸಂಖ್ಯೆ ಎಂದು ತಿಳಿಸಿದ್ದು. ಈ ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಂಡು ಎರಡು ನಾಕೌಟ್ ಗಳ ಮೂಲಕ ಈ ಪದಕ ಗೆದ್ದಿದ್ದು ಇದನ್ನು ಆಸ್ಪತ್ರೆ ಗೆ ಕಾಣಿಕೆಯಾಗಿ ನೀಡಿದ್ದರ ಉದ್ದೇಶ ಆಸ್ಪತ್ರೆಗೆ ಬರುವ ಎಷ್ಟೋ ರೋಗಿಗಳು ಈ ಪದಕವನ್ನು ನೋಡಿ ತಾವೂ ಎನಾದರೂ ಸಾದಿಸಬೇಕು ಎಂಬ ಸ್ಫೂರ್ತಿಬರಬಹುದು ವೈದ್ಯರಿಗೂ ಸಹ ಅವರನ್ನು ಬದುಕಿಸಬೇಕೆಂಬ ಸ್ಪೂರ್ತಿ ಬರಬಹುದೆಂದು ನುಡಿದಿದ್ದಾರೆ.ಅವರ ಈ ಸಾಧನೆ ಬಗ್ಗೆ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದು ನಿಜಕ್ಕೂ ಗಿರೀಶ್ ಅವರು ಜಗತ್ತಿನ ಕ್ರೀಡಾ ಕ್ಷೇತ್ರಕ್ಕೆ ಮಾದರಿಯಾಗಿದ್ದು. ಕ್ರೀಡಾ ಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ. 2 ವರ್ಷಗಳ ಕಾಲ ಕ್ರೀಡೆ ಯಿಂದ ದೂರವಿರುವಂತೆ ಸೂಚಿಸಿದ್ದರೂ ಸಹ ಲೆಕ್ಕಿಸದೆ ಕೇವಲ 91 ದಿನಕ್ಕೆ ಬಾಕ್ಸಿಂಗ್ ರಿಂಗ್ ಗೆ ಹೋಗಿ ಚಿನ್ನದ ಪದಕ ಗೆದ್ದು ಆಸ್ಪತ್ರೆಗೆ ಕಾಣಿಕೆಯಾಗಿ ನೀಡಿರುವುದು ಅತೀವ ಸಂತೋಷವನ್ನು ತಂದಿದೆ. ಇವರ ಈ ಕೊಡುಗೆ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸಿದ್ದಾರೆ.ಸಾಮಾನ್ಯವಾಗಿ ಕ್ರೀಡಾ ಪಟುಗಳು ತಾವು ಗೆದ್ದರೆ ಅದನ್ನು ತಮ್ಮ ತಂದೆ ತಾಯಿ ಪತ್ನಿ ಸ್ನೇಹಿತರು ಅಥವಾ ದೇಶಕ್ಜೆ ಸಮರ್ಪಿಸುವುದು ಸಹಜ ಆದರೆ ಇವರು ಒಂದು ಆಸ್ಪತ್ರೆಗೆ ಸಲ್ಲಿಸಿರುವುದು ಇತಿಹಾಸ.ಸಾಧಿಸುವ ಚಲವೊಂದಿದ್ದರೆ ಎಲ್ಲವೂ ಸಾಧ್ಯ ಅದಕ್ಕೆ ಏನೋ ಹಿರಿಯರು ಹೇಳಿರುವುದು ಆಗದು ಎಂದು ಕೈಕಟ್ಟಿ ಕುಳಿತರೆ ಸಾಗವು ಕೆಲಸವು ಮುಂದೆ ಮನಸ್ಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕು ಎಂದೂ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here