ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ
ಬಂದ ಧನಸಹಾಯ . 24/08/2018ರ ವರೆಗೂ ಸಲ್ಲಿಕೆಯಾಗಿರುವ ದೇಣಿಗೆ ಮೊತ್ತದ ವಿವರ-

ಧನಾದೇಶ/ ಡಿ.ಡಿ ಗಳ ಮೂಲಕ ಸಲ್ಲಿಕೆಯಾಗಿರುವ ಮೊತ್ತ : ರೂ.13,59,90,418. 00

ಆನ್ಲೈನ್ (Paytm ಒಳಗೊಂಡಂತೆ)ಖಾತೆಗೆ ಸಲ್ಲಿಕೆಯಾಗಿರುವ ಮೊತ್ತ : ರೂ.9,06,99,390. 44

ಸಂಘ ಸಂಸ್ಥೆಗಳು ಮಾನ್ಯ ಮುಖ್ಯಮಂತ್ರಿಗಳಿಗೆ ನೀಡಿರುವ ಭರವಸೆಯ ಮೊತ್ತ :

ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ರೂ.,2,50,00,000

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ಒಟ್ಟು: ರೂ.25,16,89,808.00

ಬೆಂಗಳೂರು, ಆ.25-ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಅನಾಹುತ ಸಂಭವಿಸಿ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಮತ್ತಿತರ ಜಿಲ್ಲೆಗಳ ನೆರವಿಗೆ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ನಿನ್ನೆಯವರೆಗೆ 25,16,89,808ರೂ. ದೇಣಿಗೆ ನೀಡಲಾಗಿದೆ.  ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಈ ಪ್ರಮಾಣದ ಹಣ ಸಂದಾಯವಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿ, ಪ್ರಕೃತಿ ವಿಕೋಪ -2018ರ ಖಾತೆಗೆ ಧನಾದೇಶ ಅಥವಾ ಡಿಡಿ ಮೂಲಕ 13,59,90,418 ರೂ. ಸಂದಾಯವಾಗಿದೆ. ಒಟ್ಟು 153 ಡಿಡಿಗಳು ಸಲ್ಲಿಕೆಯಾಗಿವೆ.

ಪೇಟಿಯಂ ಒಳಗೊಂಡಂತೆ ಆನ್‍ಲೈನ್ ಮೂಲಕ 9,06,99,390 ರೂ.ಗಳು ಸಲ್ಲಿಕೆಯಾಗಿದೆ. ರಾಜ್ಯಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಎರಡೂವರೆ ಕೋಟಿ ರೂ. ನೀಡುವ ಭರವಸೆ ನೀಡಿದ್ದು, ಅದೇ ರೀತಿ ಸಂಘ-ಸಂಸ್ಥೆಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೆರವು ನೀಡುವ ಭರವಸೆ ನೀಡಿವೆ.  ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪದಲ್ಲಿ ನೊಂದ ಸಂತ್ರಸ್ತರಿಗೆ ಸಹಾಯ ಮಾಡುವ ದಾನಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿ, ಪ್ರಕೃತಿ ವಿಕೋಪ-2018ರ ಖಾತೆಗೆ ದೇಣಿಗೆ ಸಲ್ಲಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here