ಕೊಡಗಿನಲ್ಲಿ ಅಬ್ಬರಿಸಿದ ಮಳೆರಾಯ ಹಲವು ಜನರ ಬದುಕನ್ನು ಕಿತ್ತುಕೊಂಡಿದ್ದಾನೆ. ವರ್ಷ ವರ್ಷಗಳಿಂದ ಕೂಡಿಟ್ಟು ಮನೆ ಆಸ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕೊಡಗು ಜಿಲ್ಲೆಯ ಜನರ ಬದುಕನ್ನು ಒಂದೇ ಬಾರಿಗೆ ಕಸಿದುಕೊಂಡ ಮಳೆರಾಯ ಸಹಸ್ರಾರು ಜನರ ಜೀವನವನ್ನು ಬೀದಿ ಪಾಲು ಮಾಡಿ ಬಿಟ್ಟಿದ್ದಾನೆ. ಈಗ ಕೊಡಗು ಜನರಿಗೆ ಅವಶ್ಯಕ ವಸ್ತುಗಳ ಪೂರೈಕೆ ಕರ್ನಾಟಕದ ಜನರಿಂದ ಆಗುತ್ತಿದೆ.ಆದರೂ ಸಹ ಕೊಡಗು ಜಿಲ್ಲೆಯ ಜನರಿಗೆ ಈಗ ವಸತಿಗಳ ನೆರವು ಅತ್ಯಗತ್ಯವಾಗಿ ಆಗಬೇಕಿದೆ.ಈಗಾಗಲೇ ಮುಖ್ಯಮಂತ್ರಿ ಹೆಚ್ ಡಿ‌ ಕುಮಾರಸ್ವಾಮಿ ಅವರು ಸಹ ಆದಷ್ಟು ಬೇಗ

ಕೊಡಗಿನ ನಿರಾಶ್ರಿತರಿಗೆ ಮನೆ ಕಟ್ಟಿಸಿಕೊಡುವುದಾಗಿ ತಿಳಿಸಿದ್ದಾರೆ. ಇನ್ನು ಪ್ರತಿದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಬಳಿ ಸಾಕಷ್ಟು ಜನ ನೆರವು ನೀಡುತ್ತಿದ್ದಾರೆ. ಶ್ರಿಮಂತರೇನೊ ಲಕ್ಚ ಕೋಟಿ ಲೆಕ್ಕದಲ್ಲಿ ಧನಸಹಾಯ ಮಾಡುತ್ತಿದ್ದಾರೆ‌. ಆದರೆ ಮಧ್ಯಮವರ್ಗದ ಜನತೆ ಹೇಗೆ ಸಹಾಯ ಮಾಡಬಹದು ಎಂಬುದನ್ನು ಇಲ್ಲೊಬ್ಬರು ಮಾಡಿ ತೋರಿಸಿದ್ದಾರೆ.ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಛೇರಿಗೆ ಆಗಮಿಸಿದ ಹಿರಿಯರೊಬ್ಬರು ತಮ್ಮದೇ ಆದ ರೀತಿ ಸಹಾಯ ಮಾಡಿ ಆದರ್ಶವಾದರು.

ಪಿಂಚಣಿಯನ್ನೇ ಕೊಟ್ಟರು ಇದೊಂದು ಮನ ತಟ್ಟುವ ಘಟನೆ. ಇಂದು ಶಾಸಕರು ಹಾಗೂ ಸಂಸದರ ಸಭೆ ನಡೆಯುತ್ತಿದ್ದ ಸಮಯದಲ್ಲಿ ಬಂದ ಹಿರಿಯ ವ್ಯಕ್ತಿಯೊಬ್ಬರು ಸಿ ಎಂ ಅವರನ್ನು ಭೇಟಿ ಮಾಡಲು ಬಯಸಿದರು, ಅವರ ಹೆಸರು ವೆಂಕಟರಾಮ್. ಕೊಡಗಿನ ಸಂಕಟದ ವರದಿಗಳನ್ನು ಓದಿದ ಅವರು ತಮ್ಮ ಇಳಿಗಾಲದಲ್ಲಿ ಸಿಗುತ್ತಿರುವ ಪಿಂಚಣಿಯನ್ನೇ ದಾನವಾಗಿ ಕೊಡಲು ಬಂದಿದ್ದರು. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ಮೂರು ತಿಂಗಳ ಪಿಂಚಣಿ ಹಣವನ್ನು ಪರಿಹಾರ ನಿಧಿಗೆ ಕೊಟ್ಟೇ ಹೋದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here