ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಬಾರೀ ಮಳೆ ಕೊಡಗು ಜಿಲ್ಲೆಯಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದೆ. ರಸ್ತೆಗಳು ಎಲ್ಲೆಂದರಲ್ಲಿ ಬಿರುಕು ಬಿಡುತ್ತಿದ್ದು ಗುಡ್ಡಗಳು ಕುಸಿದು ಬೀಳುತ್ತಿವೆ. ಕೆಲವಡೆ ಮನೆಗಳು ಸಹ ಕುಸಿದು ಬೀಳುತ್ತಿದ್ದು ಜನರ ಸ್ಥಿತಿ ಚಿಂತಾಜನಕವಾಗುತ್ತಿದೆ. ಹಲವೆಡೆ ಸೇತುವೆಗಳ ಮೇಲೆ ಕಾವೇರಿಯು ಹರಿಯುತ್ತಿದ್ದು ಮನೆಗಳು ಬೀಳುತ್ತಿರುವ ಕಾರಣದಿಂದಾಗಿ ಕೆಲವರನ್ನು ಸ್ಥಳಾಂತರಿಸಲಾಗುತ್ತಿದೆ. ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ. ಈಗ ಮಳೆಯ ಸ್ಥಿತಿ ಜಾಸ್ತಿಯಾಗುತ್ತಿದ್ದು ಇನ್ನಷ್ಟು ಅಪಾಯಗಳು

ಸಂಭವಿಸುವ ಸಾಧ್ಯತೆಗಳು ಇದ್ದು ಜಿಲ್ಲೆಯಾದ್ಯಂತ ಹಲವು ಕಡೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನಾಪೋಕ್ಲು ,ಕುಶಾಲನಗರ , ವಿರಾಜಪೇಟೆ ಸೇರಿದಂತೆ ಹಲವೆಡೆ ಕಾವೇರಿ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಕೆಲವೆಡೆ ಸೇತುವೆ ಮುಳುಗಿ ವಾಹನ ಸವಾರರು ಭಯದಲ್ಲಿ ವಾಹನ ಸಂಚರಿಸುವಂತೆ ಮಾಡಿದೆ.ಇನ್ನು ಕೆಲವಡೆ ಗುಡ್ಡ ಕುಸಿಯುತ್ತಿರುವುದರ ಪರಿಣಾಮ ಬಾರೀ ವಾಹನಗಳನ್ನು ನಿಷೇಧಿಸಲಾಗಿದೆ.ಕೇರಳ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯು ಸಹ ಕೊಡಗಿಗೆ ಅಡ್ಡ ಪರಿಣಾಮ ಬೀರುತ್ತಿದೆ.

ಈಗಾಗಲೇ ಕೆಲವು ಕಡೆ ತೆಪ್ಪಗಳ ಸಹಾಯದಿಂದ ಜನರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ತಯಾರಿ ನಡೆಸುತ್ತಿದೆ.ಮಡಿಕೇರಿ ಸಂಪಂಜೆ ಪ್ರಮುಖ ರಸ್ತೆ ಮುಳುಗಡೆ ಆಗಿದೆ ಸಂಪೂರ್ಣ ರಸ್ತೆೆ ಭರ್ತ ಆಗಿದ್ದು ನದಿಯಂತೆ ಬದಲಾಗಿದ್ದು ಸಾರ್ವಜನಿಕರಿಗೆ ಬಹಳ ತೊಂದರೆ ಆರಂಭವಾಗಿದೆ.ಮಳೆ ಹೀಗೆ ಮುಂದುವರಿದರೆ ಕೊಡಗು ತುಂಬಾ ಸಂಕಷ್ಟಕ್ಕೆ ಸಿಲುಕಲಿದೆ. ಕೊಡಗಿಗೆ ಅನಾಹುತಗಳ ವೀಡಿಯೋ ಇಲ್ಲಿದೆ ನೋಡಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here