ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಲ್ಲಿ ಏನೆಲ್ಲಾ ನಡೆದಿದೆ ಎಂಬುದು ಗೊತ್ತಿದೆ.ಅಲ್ಲಿನ ಜನರಿಗೆ ಸದ್ಯದ ಪರಿಸ್ಥಿತಿಯಲ್ಲಿ ಊಟದ ವ್ಯವಸ್ಥೆ ಸರಿಯಾಗಿ ಆದರೆ ಸಾಕು ಅನ್ನುವ ಹಾಗಿದೆ.ಅಂತಹದರಲ್ಲಿ ತೆಗೆದುಕೊಂಡ ಸಾಲ ಕೊಟ್ಟಿಲ್ಲ ಎಂದು ಹಿಂಸೆ ನೀಡಿದ ಕಾರಣ ಸಾಲ ತೆಗೆದುಕೊಂಡಿದ್ದ ಯುವತಿ ಆತ್ಮಹತ್ಯೆ ಗೆ ಶರಣಾದ ಘಟನೆ ನಡೆದಿದೆ.ಕುಶಾಲನಗರದಲ್ಲಿ  ಮೈಕ್ರೋ ಫೈನಾನ್ಸ್ ಸಂಘವೊಂದರ ಸಾಲದ ಭಾದೆಯಾ ಕಿರುಕುಳಕ್ಕೆ ಮನನೊಂದ ಗೃಹಿಣಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆಯು ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮದಲ್ಲಿ ಜರುಗಿದೆ. ಮುಳ್ಳುಸೋಗೆ ಗ್ರಾಮದ ನಿವಾಸಿ ಸಂತೋಷ್(25) ಎಂಬುವವರ ಪತ್ನಿಯಾದ ಮಂಜುಳಾ(22) ಎಂಬಾಕೆಯೇ ಸಂಘದ ಸಾಲದ ವಸೂಲಾತಿಯ ಕಿರುಕುಳಕ್ಕೆ ಹೆದರಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಆಗಿದ್ದಾರೆ.

ಕುಶಾಲನಗರದ ಮೈಕ್ರೋಫೈನಾನ್ಸ್ ಒಂದರಿಂದ ಸುಮಾರು 25 ಸಾವಿರ ರೂಗಳ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದು ಅದನ್ನು ಆರು ಕಂತುಗಳಲ್ಲಿ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಕೊಡಗು ಜಿಲ್ಲೆಯು ವಿಪರೀತ ನೆರೆಹಾವಳಿಯಿಂದ ತತ್ತರಿಸಿದ್ದು ಇಲ್ಲಿನ ಜನರು ಆಸ್ತಿ-ಪಾಸ್ತಿ ಮನೆ ಮಠ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿ ಇರುವುದನ್ನು ಮನಗಂಡ ಕೊಡಗು ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರು ಸಾಲಗಾರರಾದ ಸಂತ್ರಸ್ತರ ಬಳಿ ಯಾವುದೇ ರೀತಿಯಲ್ಲಿ ಬಲವಂತದ ವಸೂಲಾತಿಯನ್ನು ರಾಷ್ಟ್ರೀಕೃತ ಬ್ಯಾಂಕ್ ಗಳಾಗಲೀ ಸಹಕಾರ ಸಂಘದ ಬ್ಯಾಂಕ ಗಳಾಗಲಿ ಫೈನಾನ್ಸ್ ಕಂಪನಿಗಳಾಗಲಿ ಬಲವಂತದ ವಸೂಲಾತಿಯನ್ನು ಮಾಡಬಾರದು ಎಂಬ ಆದೇಶವನ್ನು ನೀಡಿದ್ದಾರೆ.

ಆದರೆ ಈ ಆದೇಶವನ್ನೇಲ್ಲಾ ಗಾಳಿಗೆ ತೂರಿರುವ ಇಲ್ಲಿನ ಮೈಕ್ರೋಫೈನಾನ್ಸ್ ಒಂದರ ಸಂಘದ ಕೆಲ ಏಜೆಂಟರು ನೆನ್ನೆ ಸಂಜೆ ನಾಲ್ಕು ಗಂಟೆಯ ವೇಳೆ ಮಂಜುಳಾರವರ ಮನೆಗೆ ಬಂದು ಸಾಲದ ಮರುಪಾವತಿಗೆ ಒತ್ತಾಯಿಸಿದ್ದು ಅಲ್ಲದೆ ಬಾಯಿಗೆ ಬಂದಂತೆ ಬೈದು ಹೋದರೆಂದು ತಿಳಿದುಬಂದಿದ್ದು ಈ ಬಗ್ಗೆ ಮನನೊಂದ ಮಂಜುಳಾ ನೇಣಿಗೆ ಶರಣಾಗಿರುವುದಾಗಿ ತಿಳಿದುಬಂದಿದೆ. ಈ ಕುರಿತು ಮೃತಳ ಪತಿ ಸಂತೋಷ್ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here