ಕೊಡಗು ಜಿಲ್ಲೆಯಲ್ಲಿ ಒಂದು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯೊಂದು ಬೇಕೆಂಬ ಅಭಿಯಾನವೊಂದು ಕಳೆದ ವರ್ಷ ಟ್ವಿಟರ್ ನಲ್ಲಿ ಆರಂಭವಾಗಿದ್ದು, ಮಾತ್ರವಲ್ಲದೇ ಚಿತ್ರರಂಗದ ಗಣ್ಯರು ಕೂಡಾ ಇದಕ್ಕೆ ತಮ್ಮ ಬೆಂಬಲವನ್ನು ನೀಡಿದ್ದರು. ಕೊಡಗು ಜಿಲ್ಲೆಯ ಜನರು, ಅಲ್ಲಿನ ಯುವ ಜನತೆ ಕೂಡಾ ಈ ಅಭಿಯಾನಕ್ಕೆ ತಮ್ಮ ಕೈ ಜೋಡಿಸಿದ್ದರು. ಸಾಮಾಜಿಕ ಜಾಲತಾಣಗಳ ಈ ಅಭಿಯಾನವೊಂದು ಕ್ರಾಂತಿಯಂತೆ ಕಂಡಿತ್ತು. ಪ್ರಕೃತಿ ಸೌಂದರ್ಯ ಮಡಿಲಾದ ಕೊಡಗು ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ ಎಂಬ ಕೊರಗು ಅಲ್ಲಿನ ಜನರನ್ನು ಕಾಡಿತ್ತು‌.

ಈಗ ಈ ಸಮಸ್ಯೆಗೆ ಒಂದು ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ. ಕೊಡಗಿನಲ್ಲಿ ಆಸ್ಪತ್ರೆಯ ನಿರ್ಮಾಣಕ್ಕೆ ಸಿದ್ಧತೆಗಳು ಆರಂಭವಾಗುವ ಸೂಚನೆಗಳು ದೊರೆತಿವೆ‌. ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಡಿಸೆಂಬರ್ 31 ರಂದು ಮಡಿಕೇರಿಯಲ್ಲಿ 450 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕಾಗಿ ನಾವು ಭೂಮಿ ಪೂಜೆ ಮಾಡಬೇಕಿತ್ತು, ಆದರೆ ಮುಂದೂಡಿದೆವು. ಶೀಘ್ರದಲ್ಲೇ, ನಾವು ಭೂಮಿ ಪೂಜೆಯ ಸಮಾರಂಭವನ್ನು ಮಾಡುತ್ತೇವೆ.

ಅಲ್ಲದೆ ಸಂಬಂಧಪಟ್ಟ ಮಾಹಿತಿಯನ್ನು ಅಪ್ಡೇಡ್ ಮಾಡುವುದಾಗಿ ಅವರು ತನ್ನ ಪೋಸ್ಟ್ ನಲ್ಲಿ ಹೇಳಿದ್ದಾರೆ.ಅಲ್ಲದೆ ಕೊಡಗಿನಲ್ಲಿ ನಿರ್ಮಾಣ ಮಾಡಲು ಸಿದ್ಧವಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೀಲ ನಕ್ಷೆಯನ್ನು ಹಾಗೂ ಕಟ್ಟಡದ ಮಾದರಿಯ ಫೋಟೋಗಳನ್ನು ಕೂಡಾ ಹಂಚಿಕೊಂಡಿದ್ದು, ಕೊಡಗಿನ ಕೂಗಿಗೆ ಬಹು ಬೇಗ ಉತ್ತರ ಸಿಗಲಿದೆ ಎಂಬ ನಿರೀಕ್ಷೆಯನ್ನು ಮೂಡಿಸಿದೆ. ಕೊಡಗಿನ ಜನರ ಆಸ್ಪತ್ರೆಯ ಅಭಿಯಾನಕ್ಕೆ ಫಲ ಸಿಗುವ ಕಾಲ ಬಂದಂತಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here