ಕಳೆದ ವರ್ಷ ಪ್ರಕೃತಿ ವಿಕೋಪದಿಂದ ನಲುಗಿತ್ತು ಕೊಡಗು. ಆ ಅನಾಹುತದಲ್ಲಿ ಅದೆಷ್ಟೋ ಜನರು ತಮ್ಮ ನೆಲೆಗಳನ್ನು ಕಳೆದುಕೊಂಡರು. ನಿರಾಶ್ರಿತರಾದರು. ಕೊಡಗಿನ ಜನರ ಸಹಾಯಕ್ಕೆ ಸರ್ಕಾರ ಕೂಡಾ ಧಾವಿಸಿತು. ನಿರಾಶ್ರಿತರಿಗೆ ಮನೆಗಳನ್ನು ಕಟ್ಟಿ ಕೊಡುವ ತೀರ್ಮಾನವನ್ನು ಮಾಡಿತು ಸರ್ಕಾರ. ಈ ನಿಟ್ಟಿನಲ್ಲಿ ಸರ್ಕಾರ ನಿರ್ಮಾಣ ಮಾಡಿದ ಮನೆಗಳನ್ನು ನೋಡಿದ ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಅವರು ಸರ್ಕಾರ ಕೊಡಗಿನ ಜನರಿಗಾಗಿ ನಿರ್ಮಾಣ ಮಾಡಿರುವ ಮನೆಗಳ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಹರ್ಷಿಕಾ ಅವರು ಮಾದ್ಯಮಗಳೊಂದಿಗೆ ಮಾತನಾಡುತ್ತಾ ಸರ್ಕಾರ ಕೊಡಗಿನ ನಿರಾಶ್ರಿತರಿಗೆ ಕೊಟ್ಟಿರುವ ಮನೆಗಳು ಸರಿಯಿಲ್ಲ ಎಂದು ಆರೋಪವನ್ನು ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಕೊಡಗಿನ ಜನರು ಸ್ವಾಭಿಮಾನಿಗಳು. ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದ ಹಾಗೆ ಸ್ವಚ್ಛವಾದ ಮನೆಗಳನ್ನು ಕಟ್ಟಿಕೊಡಬೇಕು. ಈಗಾಗಲೇ ಕೊಡಗಿನಲ್ಲಿ ನಿರ್ಮಣ ಆಗಿರುವ ಮನೆಗಳನ್ನು ನಾನು ನೋಡಿದ್ದೇನೆ. ಆ ಮನೆಗಳು ಸರಿಯಾಗಿಲ್ಲ ಎಂದಿದ್ದಾರೆ ಹರ್ಷಿಕಾ.

ಆ ಮನೆಗಳನ್ನು ನೋಡಿ ನನಗೆ ಬೇಸರವಾಯಿತು. ದಯವಿಟ್ಟು ಈ ರೀತಿಯ ಮನೆಗಳನ್ನು ನಿರ್ಮಾಣ ಮಾಡಬೇಡಿ. ಕಟ್ಟಿಸುವುದಾದರೆ ಚೆನ್ನಾಗಿರುವ ಮನೆಗಳನ್ನು ನಿರ್ಮಾಣ ಮಾಡಿಸಿ ಎಂದು ಅವರು ಸರ್ಕಾರಕ್ಕೆ ತಿಳಿಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಅವರು ಕೊಡಗಿನ ಆಸ್ಪತ್ರೆಯ ಅಭಿಯಾನಕ್ಕೆ ತಾನು ಶಿವಣ್ಣನ ನಂತರ ಭಾಗವಹಿಸಿರುವುದಾಗಿ, ಆಸ್ಪತ್ರೆಗಾಗಿ ಜನರು ಮೈಸೂರು ಅಥವಾ ಬೆಂಗಳೂರಿಗೆ ಬರಬೇಕಾದ ಪರಿಸ್ಥಿತಿ ಇದೆ ಎಂದ ಅವರು, ಅವರ ತಂದೆಗೆ ಹುಷಾರಿಲ್ಲದ ಸಂದರ್ಭದಲ್ಲಿ ಎದುರಾದ ಸಮಸ್ಯೆಯನ್ನು ಕೂಡಾ ಸ್ಮರಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here