ಕೆ.ಆರ್.ಕೆ. ಪ್ರೊಡಕ್ಷನ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಕೊಡೆಮುರುಗ ಚಿತ್ರದ್ದೇ ಸುದ್ದಿ ಈಗ .ಚಿತ್ರದ ಟ್ರೈಲರ್ ನೋಡಿ ಕೆ. ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ಚಿತ್ರದ ನಿರ್ಮಾಪಕರಾಜರು , ಚಿತ್ರದ ಹಾಡು ಕೇಳಿ ಸಿನಿರಸಿಕರು ಚಿತ್ರದ ಮೇಲೆ ಫಿದಾ ಆಗೋದ್ರು.ಹೌದು ಕೊಡೆ ಮುರುಗ ಚಿತ್ರದ “ಕೋಳಿ ಕಾಲಿಗೆ ಗೆಜ್ಜೆಗೆ ” ಎನ್ನುವ ಸಾಲಿನಿಂದ ಪ್ರಾರಂಭವಾಗುವ ಈ ಹಾಡು ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರನ್ನು ತನ್ನ ಕಚಗುಳಿ ನೀಡುವ ಲಿರಿಕ್ಸ್ ನಿಂದಲೇ ಗೆದ್ದುಕೊಂಡಿದೆ.


ಜೀವನದ ಸರಿತಪ್ಪಗಳನ್ನು, ಸಮಾಜದ ಆಚಾರವನ್ನು, ರಾಜಕಾರಣಿಗಳ ಬಗ್ಗೆ ಹೀಗೆ ಬದುಕಿನ ಆಗು ಹೋಗುಗಳ ವಿಡಂಬನಾತ್ಮಕವದಂತಹ ವಿಮರ್ಶೆಯಾಗಿದೆ ಈ ಹಾಡಿನ ಸಾರಾಂಶ.
ಈ ಹಾಡಿಗೆ ಸ್ವತಃ ಸುಬ್ರಹ್ಮಣ್ಯ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ ಹಾಗೂ ಎಮ್ ಎಸ್ ತ್ಯಾಗರಾಜ್ ರವರು ಅದ್ಭುತವಾದ ಸಂಗೀತವನ್ನು ಸಂಯೋಜಿಸಿದ್ದಾರೆ.
ಈ ಹಾಡಿನ ಮತ್ತೊಂದು ಕೇಂದ್ರಬಿಂದು ಎಂದರೆ ಗಾಯಕ ಕೈಲಾಶ್ ಖೇರ್.ದಿ ವಿಲನ್ ಚಿತ್ರದ ಟಿಕ್ ಟಿಕ್ ಸಾಂಗ್ ನಂತರ ಯಾವುದಾದರೂ ಹಿಟ್ ಸಾಂಗ್ ನಿಡಿದ್ದಾರೆಂದರೆ ಅದು ಖಂಡಿತವಾಗಿಯೂ ಕೊಡೆ ಮುರುಗ ಚಿತ್ರದ ಇದೇ ಹಾಡು.


ಈ ಬಾಲಿವುಡ್ ಗಾಯಕ ಈ ಹಾಡನ್ನು ಮಾಡರ್ನ್ ಜಾನಪದ ಶೈಲಿಯಲ್ಲಿ ಹಾಡನ್ನು ಎಂಜಾಯ್ ಮಾಡಿಕೊಂಡು ಹಾಡುವ ರೀತಿಯೇ ಕೇಳುಗರಿಗೆ ಈ ಹಾಡಿನ ಮೇಲೆ ವಿಶೇಷ ಅಸಕ್ತಿ ಬರುವಂತೆ ಮಾಡಿದೆ.
ಚಿತ್ರದ ಟೈಟಲ್ ಸಾಂಗ್ ನಾಳೆ ಅನಂದ್ ಆಡಿಯೋನಲ್ಲಿ ಬಿಡುಗಡೆ ಮಾಡುತ್ತಿದೆ ಚಿತ್ರ ತಂಡ.
ಈಗಾಗಲೇ ಕೋಳಿ ಕಾಲಿಗೆ ಗೆಜ್ಜೆ ಹಾಡು 3 ಲಕ್ಷ ವೀಕ್ಷಣೆಯತ್ತ ಸಮೀಪಿಸುತ್ತಿದೆ.
ಈ ಹಾಡನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here