ಬಿಜೆಪಿ ಶಾಸಕರಾದಂತಹ ಪ್ರೀತಂಗೌಡ ಅವರು ಹಾಸನದಲ್ಲಿ ಮಾತನಾಡುತ್ತಾ, ಕೆಲ ದಿನಗಳ ಹಿಂದಷ್ಟೇ ರಾಜ್ಯ ರಾಜಕಾರಣದ ಬಗ್ಗೆ , ಮತ್ತು ಬಿಜೆಪಿ ಬಗ್ಗೆ ಭವಿಷ್ಯವನ್ನು ನುಡಿದಿದ್ದ ಕೋಡಿಶ್ರೀ ಗಳ ಭವಿಷ್ಯ ವಾಣಿಯ ಕುರಿತಾಗಿ ಪ್ರತಿಕ್ರಿಯಿಸಿದ್ದಾರೆ. ಕೋಡಿ ಶ್ರೀ ಗಳು ಇನ್ನು ಮೂರು, ನಾಲ್ಕು ತಿಂಗಳಲ್ಲಿ ಸರ್ಕಾರ ಬಿದ್ದು ಹೋಗತ್ತೆ ಎಂದು ಭವಿಷ್ಯವಾಣಿಯನ್ನು ಹೇಳಿದ್ದರು. ಈ ಬಗ್ಗೆ ಮಾತನಾಡಿದ ಪ್ರೀತಂಗೌಡ, ಕೋಡಿ ಮಠದ ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಕೋಡಿಶ್ರೀ ಗಳು ಗಾಳಿ ಬಂದ ಕಡೆ ತೂರಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ. ರಾಜಕೀಯ ಹೇಳಿಕೆ ಕೊಡುವ ಮೂಲಕ ಅವರು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಪ್ರೀತಂ ಗೌಡ ಅವರು ಬಿಜೆಪಿ ಸರ್ಕಾರದ ಬಗ್ಗೆ ಹೊಸ ಭವಿಷ್ಯ ನುಡಿದಿದ್ದು, ಅವರ ಪ್ರಕಾರ ಮುಂದಿನ 15 ವರ್ಷಗಳ ಕಾಲ ಬಿಜೆಪಿ ಇದ್ದೆ ಇರುತ್ತೆ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಇದು ಪ್ರೀತಂ ಗೌಡ ಹೇಳುತ್ತಿರುವ ಭವಿಷ್ಯ ಎಂದು ಕೂಡಾ ಅವರು ಹೇಳಿದ್ದಾರೆ. ಇನ್ನು ಟ್ಯಾಕ್ಸಿ ಚಾಲಕರ ಫ್ಲೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ನಿರಾಕರಿಸಿದ ಪ್ರೀತಂ, ನಾನು ಚಿಕ್ಕ ವಿಷಯವನ್ನು ದೊಡ್ಡದಾಗಿ ಮಾಡಲು ಇಷ್ಟ ಪಡುವುದಿಲ್ಲ ಎಂದಿದ್ದಾರೆ. ಹಾಸನದ ಅಭಿವೃದ್ದಿ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದಿದ್ದಾರೆ.

ಕೆಲವು ದಿನಗಳ ಹಿಂದೆ ಕೋಡಿ ಮಠದ ಶ್ರೀಗಳು ನಾನು ಹಿಂದೆ ಹೇಳಿದಂತೆ ಮೈತ್ರಿ ಸರ್ಕಾರದ ಆಯುಷ್ಯ ಕಡಿಮೆ ಇದ್ದುದ್ದರಿಂದ ಅದು ಪತನವಾಯಿತು ಎಂದು ಹೇಳಿದ್ದಲ್ಲದ್ದೇ, ರಾಜ್ಯದಲ್ಲಿ ಇರುವ ಸರ್ಕಾರ ಕೂಡಾ ಶೀಘ್ರದಲ್ಲೇ ಬಿದ್ದು ಹೋಗುತ್ತದೆ ಎಂದು ಸೂಚನೆಯೊಂದನ್ನು ನೀಡಿದ್ದರು ಎಂಬುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here