ಇದೀಗ ದೇಶ ಮಾತ್ರವೇ ಅಲ್ಲದೆ ಇಡೀ ವಿಶ್ವವೇ ಕೊರೊನಾ ಎಂಬ ರೋಗದ ಭೀತಿಯಲ್ಲಿ ದಿನ ಕಳೆಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಕೋಡಿಹಳ್ಳಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿ ಅವರು ಭವಿಷ್ಯವಾಣಿಯನ್ನು ನೀಡಿದ್ದಾರೆ. ಅವರು ಮಾತನಾಡುತ್ತಾ ದೇಶದಾದ್ಯಂತ ಈಗಾಗಲೇ ತಲ್ಲಣ ಮೂಡಿಸಿರುವ ಕರೊನಾ ಪಿಡುಗು ಭಾರತವನ್ನು ವಿದೇಶಗಳಷ್ಟು ಮಟ್ಟಕ್ಕೆ ಬಾಧಿಸಿಲ್ಲ ಎಂದಿದ್ದು, ಕೊರೊನಾ ದಿಂದ ನಮ್ಮ ದೇಶಕ್ಕೆ ಹೆಚ್ಚಿನ ಅಪಾಯವಾಗದೇ ಇದ್ದರೂ, ಈ ಹೆಮ್ಮಾರಿಯ ಹಾವಳಿಯಿಂದಾಗಿ ಒಂದು ಇಡೀ ದೇಶವೇ ಅಳಿಯಲಿದೆ ಎಂದು ಅವರು ತಮ್ಮ ಭವಿಷ್ಯ ವಾಣಿಯಲ್ಲಿ ಹೇಳಿದ್ದಾರೆ.

ಕರೊನಾ ವೈರಸ್​ ಸೋಂಕಿನಿಂದಾಗಿ ಮುಂಬರುವ ದಿನಗಳಲ್ಲಿ ಜಗತ್ತಿನ ವಿವಿಧ ದೇಶಗಳಲ್ಲಿ ಹೊಸ, ಹೊಸ ಶಾಸನ ರಚನೆಯಾಗಲಿವೆ ಎಂದು ನುಡಿದಿರವ ಶ್ರೀಗಳು, ಈ ಸೋಂಕಿಗೆ ಪ್ರಕೃತಿಯಿಂದಲೇ ಮದ್ದು ದೊರೆಯಲು ಸಾಧ್ಯ ಎಂದು ಕೂಡಾ ಹೇಳಿದ್ದಾರೆ. ಕೊರೊನಾ ಸೋಂಕಿಗೆ ಔಷಧ ಪ್ರಕೃತಿಯಲ್ಲಿ ಇದೆ ಎಂದು ಅವರು ಹೇಳಿರುವುದು ವಿಶೇಷವಾಗಿದೆ. ಭವಿಷ್ಯ ವಾಣಿಯಲ್ಲಿ ಅವರು ದೇಶದಲ್ಲಿ ಮುಂದಿನ ದಿನಗಳಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹೇಳಿದ್ದಾರೆ. ಅಲ್ಲದೆ ಭೂಕಂಪನ ಕೂಡಾ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಅವರು ಹೇಳಿದ್ದಾರೆ.

ಇವುಗಳ ಜೊತೆಗೆ ಸಮುದ್ರ ಕೆರಳಿ ರೌದ್ರಾವತಾರ ತೋರಲಿದೆ ಎಂದು ಎಚ್ಚರಿಕೆಯನ್ನು ಕೂಡಾ ನೀಡಿದ್ದಾರೆ. ಕೊರೊನಾ ಎಂಬ ಭಯದಿಂದ ದಿನ ದೂಡುತ್ತಿರುವ ಜನರಿಗೆ ಶ್ರೀ ಗಳ ಭವಿಷ್ಯವಾಣಿ ಮತ್ತಷ್ಟು ಭಯವನ್ನು ಉಂಟು ಮಾಡಿದರೂ ಮಾಡಬಹುದು. ಕೋಡಿಹಳ್ಳಿ ಮಠದ ಶ್ರೀಗಳು ಆಗಾಗ ಭವಿಷ್ಯ ವಾಣಿಗಳನ್ನು ನುಡಿಯುವುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ. ಈ ವೀಡಿಯೋ ನೋಡಿ…

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here