ಪ್ರೀತಿ ಮಾಡಿದ ಹುಡುಗಿಯ ತಲೆ ಕತ್ತರಿಸಿ ತಲೇ ಸಮೇತ ನಮ್ಮ ಶ್ರೀನಿವಾಸಪುರ ಪೋಲೀಸ ಠಾಣೆಗೆ ಬಂದ ಪ್ರಿಯಕರ.ಇದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ.ತಾನು ಪ್ರೀತಿಸಿದ ಯುವತಿ ಬೇರೊಬ್ಬನೊಂದಿಗೆ ಓಡಾಡುತ್ತಿದ್ದಾಳೆಂದು ಆಕ್ರೋಶಗೊಂಡು ಯುವಕ ಆಕೆಯ ಕತ್ತು ಕತ್ತರಿಸಿ ರುಂಡದೊಂದಿಗೆ ಪೊಲೀಸ್ ಠಾಣೆಗೆ ಹಾಜರಾದ ಹೇಯ ಘಟನೆ ಕೆಂಚಾರ್ಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಅಜೀಜ್ ಅಲಿಯಾಸ್ ಸದ್ದಾಂ ಹುಸೇನ್ (26) ತಾನು ಪ್ರೀತಿಸಿದ ಯುವತಿ ಬೆಂಗಳೂರಿನ ನೀಲಸಂದ್ರದ ರೋಷನ್ ಖಾನಂ (26) ಎಂಬಾಕೆಯನ್ನು ಕೊಲೆ ಮಾಡಿ ರುಂಡದೊಂದಿಗೆ ಠಾಣೆಗೆ ಬಂದ ಭೂಪ.ರೋಷನ್‍ಖಾನಂಳನ್ನು ಅಜೀಜ್ ಪ್ರೀತಿಸಿದ್ದ.

 

ಆದರೆ ಇತ್ತೀಚೆಗೆ ಬೇರೆ ಯುವಕನ ಜತೆ ಓಡಾಡುತ್ತಿದ್ದಳು. ಇದನ್ನು ಸಹಿಸದೆ ಆತ ಅವಳನ್ನು ಕೊಲೆ ಮಾಡಲು ಸಂಚು ರೂಪಿಸಿದ. ಅದರಂತೆ ನಿನ್ನೆ ರೋಷನ್‍ಖಾನಂಳನ್ನು ಮುರಗಮಲ್ಲಾ ದರ್ಗಾಗೆ ಬರುವಂತೆ ಅಜೀಜ್ ಹೇಳಿದ್ದಾನೆ. ಆಕೆಗೆ ದರ್ಗಾದ ಅಮ್ಮಾಜಾನ್ ಭಾವಜಾನ್ ದರ್ಶನ ಮಾಡಿಸಿ ಕೆಂಚಾರ್ಲಹಳ್ಳಿ ಹೊರವಲಯದ ಮಾವಿನ ತೋಪಿಗೆ ಕರೆದುಕೊಂಡು ಹೋಗಿ ತಕ್ಷಣ ಆಕೆಯಕತ್ತು ಕತ್ತರಿಸಿ ರುಂಡವನ್ನು ಬ್ಯಾಗ್‍ನಲ್ಲಿ ಹಾಕಿಕೊಂಡು ಉಳಿದ ಭಾಗವನ್ನು ಅಲ್ಲೇ ಬಿಟ್ಟು ದ್ವಿಚಕ್ರ ವಾಹನಲ್ಲಿ ಶ್ರೀನಿವಾಸಪುರ ಠಾಣೆಗೆ ಹೋಗಿದ್ದಾನೆ.

ಅಲ್ಲಿನ ಪೊಲೀಸರು ರಕ್ತಮಯವಾಗಿದ್ದ ಬ್ಯಾಗ್ ಕಂಡು ಅಜೀಜ್‍ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನು ಪ್ರೀತಿಸಿದ ಹುಡುಗಿ ಬೇರೊಬ್ಬನೊಂದಿಗೆ ಓಡಾಡುತ್ತಿದ್ದುದನ್ನು ಸಹಿಸಲಾಗಲಿಲ್ಲ. ಅದಕ್ಕೆ ಅವಳ ತಲೆ ಕಡಿದು ತಂದಿದ್ದೇನೆ ಎಂದು ಹೇಳಿದ್ದಾನೆ.ಘಟನೆ ನಡೆದಿರುವುದು ಕೆಂಚಾರ್ಲಹಳ್ಳಿ ಠಾಣೆ ವ್ಯಾಪ್ತಿಯಾಗಿರುವುದರಿಂದ ಆರೋಪಿಯನ್ನು ಇಲ್ಲಿನ ಠಾಣೆಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಕೆಂಚಾರ್ಲಹಳ್ಳಿ ಠಾಣೆ ಪಿಎಸ್‍ಐ ಶ್ರೀನಿವಾಸ್, ಸಿಪಿಐ ಭೈರಪ್ಪ ಭೇಟಿ ನೀಡಿ ಪರಿಶೀಲಿಸಿ ಯುವತಿಯ ರುಂಡವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here