ಕೊರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಜನರನ್ನು ಮನೆಯಲ್ಲೇ ಇರಿ ಎಂದು ಲಾಕ್ ಡೌನ್ ಮಾಡಲಾಗಿದೆ. ಅಲ್ಲದೆ ಯಾವುದೇ ಧಾರ್ಮಿಕ ಆಚರಣೆಗಳನ್ನು ಕೂಡಾ ಗುಂಪಾಗಿ ಸೇರಿ ಮಾಡಲು ಈ ಬಾರಿ ಅವಕಾಶವನ್ನು ನಿರಾಕರಣೆ ಮಾಡಲಾಗಿದೆ. ಆದರೆ ಇದರ ನಡುವೆಯೂ ಮಸೀದಿಯೊಂದರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ ಎಂದು ತಿಳಿದ ಮಹಿಳಾ ತಹಸೀಲ್ದಾರ್ ಒಬ್ಬರು ದಿಟ್ಟತನದಿಂದ ಮಸೀದಿಯೊಳಕ್ಕೆ ಹೋಗಿ ಅಲ್ಲಿದ್ದವರಿಗೆ ಸರಿಯಾದ ಪಾಠವನ್ನು ಕಲಿಸಿರುವ ಘಟನೆಯೊಂದು ಕೋಲಾರದಲ್ಲಿ ನಡೆದಿದ್ದು ಎಲ್ಲೆಡೆ ಈ ಸುದ್ದಿ ವ್ಯಾಪಕವಾಗಿ ಸದ್ದು ಮಾಡುತ್ತಿದೆ.

ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರನ್ನು ಮಂದಿರ, ಮಸೀದಿ ಹಾಗೂ ಚರ್ಚ್ ಅಥವಾ ಇನ್ನಾವುದೇ ಧಾರ್ಮಿಕ ಸ್ಥಳಗಳಲ್ಲಿ ಎಲ್ಲೂ ಕೂಡಾ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಬಾರದು ಎಂದು ನಿರ್ಬಂಧ ಹೇರಿದ್ದು,ಇದು ಕಾನೂನಿನ ಪ್ರಕಾರ ಅಪರಾಧ ಎಂಬ ಎಚ್ಚರಿಕೆ ನೀಡಿದ್ದರೂ ಕೂಡಾ ಕೋಲಾರದ ಮಸೀದಿಯೊಂದರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿದ ತಹಶಿಲ್ದಾರ್ ಶೋಭಿತಾ ಅವರು ಮಹಿಳೆಯರು ಮಸೀದಿಯ ಒಳಗೆ ಪ್ರವೇಶ ಮಾಡಬಾರದು ಎಂಬುದಕ್ಕಿಂತ ತನ್ನ ಕರ್ತವ್ಯ ಮುಖ್ಯ ಎಂದು ಮಸೀದಿಯೊಳಗೆ ಪ್ರವೇಶ ಮಾಡಿ ಅಲ್ಲಿದ್ದವರಿಗೆ ತಕ್ಕ ಪಾಠ ಕಲಿಸಿದ್ದಾರೆ.

ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿ ಹನ್ನೊಂದು ಜನ ಮಸೀದಿಯ ಒಳಗೆ ಪ್ರಾರ್ಥನೆ ಸಲ್ಲಿಸುತ್ತಿರುವ ವಿಷಯದ ಮಾಹಿತಿ ಸಿಕ್ಕ ಕೂಡಲೇ ತಹಶಿಲ್ದಾರ್ ಶೋಭಿತ ಅವರು ಕೋಲಾರದ ಮುನಿಸಿಪಲ್ ಆಸ್ಪತ್ರೆಯ ಮುಂಭಾಗದ ಮಸೀದಿ ಪ್ರವೇಶಿಸಿ ಅಲ್ಲಿದ್ದ ಹನ್ನೊಂದು ಜನರನ್ನು ವಶಕ್ಕೆ ಪಡೆದಿದ್ದಾರೆ, ಅನಂತರ ಇವರೆಲ್ಲರನ್ನು ಇಲ್ಲೇ ಕೂಡಿ ಹಾಕಿ, ಹೊರಗೆ ಬಿಡಬೇಡಿ ಎಂದು ಆಕೆ ಹೇಳಿದ್ದಾರೆ. ಈ ಮೂಲಕ ಅವರು ಮಸೀದಿ ಪ್ರವೇಶಿಸಿದ ಮೊದಲ ಮಹಿಳೆ ಎನಿಸಿದ್ದಾರೆ. ಜನರು ಕರ್ತವ್ಯಕ್ಕಿಂತ ಮಿಗಿಲಾದ ಧರ್ಮ ಯಾವುದಿಲ್ಲ ಎಂದಿದ್ದಾರೆ ಅವರ ಈ ದಿಟ್ಟತನದ ನಿರ್ಧಾರಕ್ಕೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here