ನಾಡಿನ ಪ್ರಸಿದ್ಧ ಶಕ್ತಿ ದೇವಿಯ ತಾಣಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ರಥೋತ್ಸವಕ್ಕೆ ಕೊರೊನಾ ವೈರಸ್ ಅಡ್ಡಿಯಾಗಿದೆ. ಕೊರೊನಾ ಭೀತಿಯಿಂದ ಅದ್ದೂರಿಯಾಗಿ ರಥೋತ್ಸವವನ್ನು ನಡೆಸುವುದನ್ನು ಕೈ ಬಿಡಲು ತೀರ್ಮಾನಿಸಿದೆ ದೇವಾಲಯದ ಆಡಳಿತ ಮಂಡಳಿ. ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನಲ್ಲಿರುವ ಮೂಕಾಂಬಿಕಾ ದೇವಿ ನೆಲೆಸಿರುವ ಈ ಪುಣ್ಯ ಕ್ಷೇತ್ರ ನಾಡಿನಲ್ಲಿ ಮಾತ್ರವಲ್ಲದೇ, ದೇಶದಲ್ಲೇ ಹೆಸರು ವಾಸಿಯಾಗಿರುವ ಒಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಮೂಕಾಂಬಿಕಾ ವಾರ್ಷಿಕ ರಥೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಅಸಂಖ್ಯಾತ ಭಕ್ತರು ಕೊಲ್ಲೂರಿಗೆ ಬರುವರು‌.

ಆದರೆ ರಾಜ್ಯದಲ್ಲಿ ಈಗಾಗಲೇ ಕೊರೊನಾ ವಿರುದ್ಧ ಹೈ ಅಲರ್ಟ್ ಘೋಷಣೆಯಾಗಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಸಾರ್ವಜನಿಕ ಸಮಾರಂಭ ಹಾಗೂ ಕಾರ್ಯಕ್ರಮಗಳನ್ನು ನಿಷೇಧ ಮಾಡಲಾಗಿದೆ. ಕೊಲ್ಲೂರಿನಲ್ಲಿ ವಾರ್ಷಿಕ ರಥೋತ್ಸವ ನಡೆದರೆ ಸ್ಥಳೀಯರು, ರಾಜ್ಯದ ಬೇರೆ ಬೇರೆ ಭಾಗಗಳಿಂದ ಬರುವ ಭಕ್ತಾದಿಗಳು ಮಾತ್ರವೇ ಅಲ್ಲದೇ ನೆರೆ ರಾಜ್ಯಗಳಿಂದ ಕೂಡಾ ಭಕ್ತರು ಕೊಲ್ಲೂರಿಗೆ ಆಗಮಿಸುತ್ತಾರೆ. ಆದ್ದರಿಂದಲೇ ಜಿಲ್ಲಾಡಳಿತ ಕೊರೊನಾ ವೈರಸ್ ಹರಡದಂತೆ‌ ಮುನ್ನೆಚ್ಚರಿಕೆಯ ಕ್ರಮವಾಗಿ ಸರಳವಾಗಿ ರಥೋತ್ಸವ ನಡೆಸುವಂತೆ ಸೂಚನೆಯನ್ನು ನೀಡಿದೆ ಎನ್ನಲಾಗಿದೆ.

ಅದ್ದೂರಿ ರಥೋತ್ಸವದ ಬದಲಾಗಿ ರಥಾರೋಹಣ ಮಾಡಲು ಆಲಯ ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ಈ ವೇಳೆ ಆಲಯದ ಅರ್ಚಕರು ಮತ್ತು ಸಿಬ್ಬಂದಿಗೆ ಮಾತ್ರ ಪಾಲ್ಗೊಳ್ಳುವಂತೆ ಸೂಚನೆಯನ್ನು ನೀಡಲಾಗಿದ್ದು, ಭಕ್ತರಿಗೆ ಮನೆಯಲ್ಲೇ ಇದ್ದು ದೇವಿಗೆ ಪ್ರಾರ್ಥನೆ ಮಾಡಿರೆಂದು, ಕಂಟಕ ನಿವಾರಣೆ ನಂತರ ದೇವಾಲಯದಲ್ಲಿ ನಡೆಯುವ ಉತ್ಸವದಲ್ಲಿ ಭಾಗವಹಿಸಿ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಸಿಇಓ ಅವರು ಮಾದ್ಯಮವೊಂದರ ಮುಖಾಂತರ ಜನರಿಗೆ ಸಂದೇಶವನ್ನು ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here