ಕೊರೊನ ವೈರಸ್ ಭೀತಿ ಎಲ್ಲೆಡೆ ಹರಡುತ್ತಿರುವ ಕಾರಣದಿಂದಾಗಿ ಶಾಲೆಗಳಿಗೆ ಹೋಗುವ ಐದು ವರ್ಷದ ಕೆಳಗಿನ ಮಕ್ಕಳಿಗೆ ಒಂದು ತಿಂಗಳ ಕಾಲ ಶಾಲೆಗೆ ರಜೆ ನೀಡಕಾಗುವುದು ಎಂದು ವೈದ್ಯಕೀಯ ಸಚಿವ ಕೆ.ಸುಧಾಕರ್ ಅವರು ಹೇಳಿದ್ದಾರೆ. ಮಾದ್ಯಮಗಳ ಜೊತೆ ಮಾತನಾಡಿದ ಸಚಿವರು ಚಿಕ್ಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ.
ಆದ್ದರಿಂದ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೈ ವೈದ್ಯಕೀಯ ಇಲಾಖೆಗಳ ಸಮಕ್ಷಮದಲ್ಲಿ ಮಕ್ಕಳಿಗೆ ರಜೆಯನ್ನು ಘೋಷಿಸುವ ನಿರ್ಧಾರವೊಂದನ್ನು ಮಾಡಲಾಗಿದೆ ಎಂಬ ಮಾಹಿತಿಯನ್ನು ಸಚಿವರು ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾನ್ಯ ಸಚಿವರು ಈ ವಿಷಯವಾಗಿ ಮುನ್ನೆಚ್ಚರಿಕೆ ಹಾಗೂ ಮಾರ್ಗಸೂಚಿಯನ್ನು ನೀಡಿರುವುದಾಗಿಯೂ ತಿಳಿಸಿದ್ದಾರೆ. ಈ ಮೂಲಕ 5 ವರ್ಷದ ಒಳಗಿನ ಮಕ್ಕಳಿಗೆ ಮಾರ್ಚ್ 31 ರ ವರೆಗೆ ರಜೆಯನ್ನು ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದರಿಂದಾಗಿ ಪ್ರೀ ನರ್ಸರಿ, ಎಲ್.ಕೆ.ಜಿ. ಹಾಗೂ ಯು.ಕೆ.ಜಿ. ಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ರಜೆ ಸಿಗಲಿದೆ. ಮತ್ತೆ ಬೇಸಿಗೆ ರಜೆ ಮುಗಿದ ನಂತರವೇ ಈ ಮಕ್ಕಳಿಗೆ ಶಾಲೆ ಆರಂಭವಾಗಲಿದೆ ಎಂಬ ಮಾಹಿತಿಯನ್ನು ಅವರು ನೀಡುವ ಮೂಲಕ ಮಕ್ಕಳ ಸುರಕ್ಷತೆ ಕಡೆ ಗಮನ ನೀಡಿದ್ದಾರೆ.

ಇದೇ ವಿಷಯವಾಗಿ ಟ್ವೀಟ್ ಮಾಡಿರುವ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಅವರು ಆರೋಗ್ಯ ಆಯುಕ್ತರ ಸಲಹೆಯಂತೆ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರೀ ನರ್ಸರಿ, ಎಲ್.ಕೆ.ಜಿ ಮತ್ತು ಯುಕೆಜಿಗಳಿಗೆ ಇಂದಿನಿಂದ ರಜೆ ನೀಡಲಾಗಿದೆ ಎಂದು ಘೋಷಣೆಯನ್ನು ಮಾಡಿದ್ದಾರೆ. ಇನ್ನು ಶಾಲೆಗಳು ಯಾವ ನಿರ್ಧಾರ ಮಾಡಲಿವೆ ಎಂಬುದು ನೋಡಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here