ಕನ್ನಡದ ಕೋಟ್ಯಧಿಪತಿ ಈಗಾಗಲೇ ಕಿರುತೆರೆಯ ಜನಪ್ರಿಯ ಶೋಗಳಲ್ಲಿ ಒಂದಾಗಿ ನಾಡಿನಲ್ಲಿ ಹೆಸರು ಮಾಡಿರುವ ಕಾರ್ಯಕ್ರಮ.‌ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು. ಇನ್ನು ಈ ಶೋ ಜನರಿಗೆ ಜ್ಞಾನಾರ್ಜನೆಯ ಜೊತೆಗೆ, ಹಾಟ್ ಸೀಟ್ ನಲ್ಲಿ ಕೂರುವವರಿಗೆ ಹಣವನ್ನು ಕೂಡಾ ಗೆಲ್ಲಲು ಅವಕಾಶವನ್ನು ನೀಡುತ್ತದೆ. ಹಲವರು ಈ ಹಣದಿಂದ ತಮ್ಮ ಜೀವನದಲ್ಲೊಂದು ಹೊಸ ಬದಲಾವಣೆ ಆಗಬಹುದು ಎಂಬ ನಿರೀಕ್ಷೆಯಿಂದ ಭಾಗವಹಿಸಲು ಬರುತ್ತಾರೆ. ಇಂತಹ ಜನಪ್ರಿಯ ಕಾರ್ಯಕ್ರಮದ ಹಾಟ್ ಸೀಟ್ ಮೇಲೆ ಮೊದಲ ಬಾರಿಗೆ ರಾಜ್ಯದ ಇಬ್ಬರು ಯುವ ರಾಜಕಾರಣಿಗಳು ಕುಳಿತು ಗಮನ ಸೆಳೆದಿದ್ದಾರೆ.

ಬಿಜೆಪಿಯ ಯುವ ನಾಯಕರಾದ ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯ ಇಬ್ಬರೂ ಪುನೀತ್ ಅವರು ನಡೆಸಿಕೊಡುವ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ವಾರ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಹಾಟ್ ಸೀಟಿನಲ್ಲಿ ಕುಳಿತುಕೊಂಡಿದ್ದಾರೆ. ಅವರಿಬ್ಬರೂ ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಹಿನ್ನೆಲೆ ಮಹತ್ವದ್ದಾಗಿದೆ. ಈ ಇಬ್ಬರೂ ಯುವ ನಾಯಕರು ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ನೊಂದವರಿಗಾಗಿ ಸಹಾಯ ಹಸ್ತ ನೀಡಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಇದೇ ಮೊದಲ ಬಾರಿಗೆ ಕೋಟ್ಯಾಧಿಪತಿ ಶೋನಲ್ಲಿ ರಾಜಕಾರಣಿಗಳು ಭಾಗವಹಿಸಿದ್ದು, ನೆರೆ ಸಂತ್ರಸ್ತರಿಗೆ ನೆರವಾಗಲು, ಪುನೀತ್ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಹಣ ಗಳಿಸುವರು ಈ ಯುವ ರಾಜಕಾರಣಿಗಳು. ಇದೇ ಸಂದರ್ಭದಲ್ಲಿ ಅವರು ನಾಡಿನ ಜನರು ನಮ್ಮ ಮೇಲೆ ನಂಬಿಕೆಯಿಟ್ಟು ನಮ್ಮನ್ನು ಗೆಲ್ಲಿಸಿದ್ದಾರೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆಯೆಂದು ಹೇಳಿದ್ದಾರೆ. ಇನ್ನು ಇವರ ಆಗಮನ ಹಲವರಲ್ಲಿ ಅವರು ಯಾವ ಯಾವ ವಿಷಯ ಹಂಚಿಕೊಳ್ಳಲಿದ್ದಾರೆ ಎಂಬುದರ ಕಡೆ ಕೂಡಾ ಆಸಕ್ತಿ ಮೂಡಿಸಿದೆ.

ನೆರೆ ಪರಿಹಾರಕ್ಕಾಗಿ ಆಡೋಕೆ ಬಂದ್ರು ಮೈಸೂರಿನ ಸಿಂಹ ಹಾಗೂ ಬೆಂಗಳೂರಿನ ಸೂರ್ಯ! ಕನ್ನಡದ ಕೋಟ್ಯಧಿಪತಿ ಸ್ಪೆಷಲ್ ಎಪಿಸೋಡ್ | ಶನಿ – ಭಾನು ರಾತ್ರಿ 8ಕ್ಕೆ#KKP #ColorsKannada Puneeth Rajkumar Pratap Simha Tejasvi Surya

Colors Kannada यांनी वर पोस्ट केले बुधवार, ४ सप्टेंबर, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here