ಪ್ರವಾಹ ಪೀಡಿತ ಕೊಡಗಿನ ಜನರ ನೋವಿಗೆ ಸ್ಪಂದಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ವರ್ಗದವರು  ನೆರೆ ಪೀಡಿತ ಜನರಿಗಾಗಿ ಉದಾರ ನೆರವು ನೆರವು ನೀಡುವ ಮೂಲಕ ಕೊಡಗಿನ ಜನರ ಸಂತ್ರಸ್ತರಿಗೆ ತಮ್ಮ ಕೈಯಲ್ಲಾಗುವ ನೆರವು  ನೀಡಿದ್ದಾರೆ.ಕೆಎಸ್‌ಆರ್‌ಟಿಸಿಯ ನಾಲ್ಕೂ ನಿಗಮಗಳ ಎಲ್ಲ ಸಿಬ್ಬಂದಿ ತಮ್ಮ ಒಂದು ದಿನದ ಸಂಬಳವನ್ನು ಕೊಡಗಿನ ಸಹಾಯಕ್ಕೆಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.ಕೆಎಸ್‌ಆರಿಟಿಸಿಯ 1.16 ಲಕ್ಷ ಸಿಬ್ಬಂದಿಯ ಒಂದು ದಿನದ ವೇತನದ ಒಟ್ಟು ಮೊತ್ತ 11.80 ಕೋಟಿ ಆಗಲಿದೆ.

ಈ ಬೃಹತ್ ಮೊತ್ತವನ್ನು ಅವರು ಪ್ರವಾಹ ಪೀಡಿತ ಕೊಡಗಿನ ಜನರ ಉಪಯೋಗಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ
ಕೊಡಗಿನಲ್ಲಿ ಸುರಿದ ಭಾರೀ ಮಳೆಯಿಂದ ಮನೆ, ಮಠ ಕಳೆದುಕೊಂಡು ನಿರಾಶ್ರಿತರಾದ ನೆರೆ ಸಂತ್ರಸ್ತರಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳು ತಮ್ಮ ಒಂದು ದಿನದ ವೇತನ 11.80 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ.  ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಂದ ಒಟ್ಟು 1.16 ಲಕ್ಷ ಸಿಬ್ಬಂದಿಗಳು ಒಂದು ದಿನದ ವೇತನವನ್ನು ನೀಡುವ ಮೂಲಕ ನೆರೆ ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ.

ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆ ತರಲು ಉಚಿತ ಸೇವೆಯನ್ನು ಒದಗಿಸುವ ಜತೆಗೆ ವಿವಿಧೆಡೆ ಸಾರ್ವಜನಿಕರು ನೀಡುವ ದೈನಂದಿನ ಹಾಗೂ ಸಾಮಗ್ರಿಗಳನ್ನು ಉಚಿತವಾಗಿ ಸರಬರಾಜು ಮಾಡುತ್ತಿದೆ.ಕೊಡಗು , ಕುಂದಾಪುರ , ಮಡಿಕೇರಿ , ಬೆಂಗಳೂರು ಸ್ಯಾಟ್‍ಲೈಟ್ ನಿಲ್ದಾಣಗಳಲ್ಲಿ ಈ ವಸ್ತುಗಳನ್ನು ಇರಿಸಲು ಕೋಣೆಯನ್ನು ಕೂಡ ವ್ಯವಸ್ಥೆ ಮಾಡಲಾಗಿದ್ದು , ಮುಕ್ತವಾಗಿ ಸಾರ್ವಜನಿಕರು ಸ್ಪಂದನೆಗೆ ನಿಗಮ ಧನ್ಯವಾದ ಅರ್ಪಿಸುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here