ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಬಸ್ಸು-ಲಾರಿ ಸ್ಕೂಟರ್ ವಾಹನಗಳಲ್ಲಿ ಜಗಳ ಎಂಬುದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಯುವಕ ಹುಡುಗರಂತೂ ಹಿಂದೆಮುಂದೆ ಯೋಚಿಸದೆ ಸಿಕ್ಕಸಿಕ್ಕವರ ಜಗಳವಾಡುವುದು ಕಾಣಿಸುತ್ತಿರುತ್ತದೆ. ಸರ್ಕಾರಿಯ  ಕೆಎಸ್ಆರ್ಟಿಸಿ ಬಸ್ ಅನ್ನು ಫಾಲೋ ಮಾಡಿ ಯುವಕರ ಗುಂಪೊಂದು ಜಗಳ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.ಎಸ್.ಆರ್.ಟಿ.ಸಿ ಬಸ್ ಅಡ್ಡಗಟ್ಟಿ ಡ್ರೈವರ್ ಮತ್ತು ಕಂಡಕ್ಟರ್ ಮೇಲೆ ಬೈಕ್ ಸವಾರರು ಆವಾಜ್ ಹಾಕಿದ ಘಟನೆ ನಡೆದಿದೆ. 2 ಬೈಕ್‌ ನಲ್ಲಿದ್ದ ಯವಕರು ಕುಡಿದು ಬೈಕ್ ಓಡಿಸುತ್ತಿದ್ದರು ಎನ್ನಲಾಗಿದೆ.

ಬಸ್ ಗೆ ಸೈಡ್ ಕೊಡದೇ ತೊಂದರೆ ಕೊಡುತ್ತಿದ್ದ ಯುವಕರಿಗೆ ಸೈಡ್ ಕೊಡುವಂತೆ ಹಾರನ್ ಮಾಡಿದ್ದಕ್ಕೆ ಎರಡು ಬೈಕ್ ನಲ್ಲಿದ್ದ ಯುವಕರು ಅಡ್ಡಗಟ್ಟಿ, ಬೈಕ್ ನಿಲ್ಲಿಸಿ ಕ್ಯಾತೆ ತೆಗೆದ ಘಟನೆ ಗದಗ ಜಿಲ್ಲೆ ನರಗುಂದ ಬಳಿ ನಡೆದಿದೆ. ಈ ವೇಳೆ ಬುದ್ಧಿವಾದ ಹೇಳಲು ಮುಂದಾದ ಪ್ರಯಾಣಿಕರಿಗೂ ಬಸ್ ಒಳಗಡೆ ಹೋಗಿ ಆವಾಜ್ ಹಾಕಿ ಗದರಿಸಿದ್ದಾರೆ. ಧಾರವಾಡ ಡಿಪೋಗೆ ಸೇರಿದ ಬಸ್ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಉಷ್.. ಗಿಷ್ ಎಂದರೆ ಉಸಿರೇ ನಿಲ್ಲಸ್ತೀನಿ ಎಂದು ಬೆದರಿಕೆ ಹಾಕಿದ್ದಾರೆ.

ಸಾರಿಗೆ ಸಿಬ್ಬಂದಿ ಹಾಗೂ ಪ್ರಯಾಣಿಕರ ಮೇಲೆ ದರ್ಪ ಮೆರೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ‌. ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಕಾರಣವಿಲ್ಲದೇ ಸುಖಾ ಸುಮ್ಮನೆ ತೊಂದರೆ ಕೊಡುವ ಇಂತಹ ಪುಂಡರ ಪುಂಡಾಟಿಕೆಗೆ ಪೊಲೀಸ್ ಇಲಾಖೆ ತಕ್ಕ ಪಾಠ ಕಲಿಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.ಈ ವಿಡಿಯೋ ನೋಡಿ……

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here