ಸುಮಲತ ಅಂಬರೀಶ್ ಅವರು ಇತ್ತೀಚಿಗೆ ಮಾದ್ಯಮಗಳ ಮುಖ್ಯ ಸುದ್ದಿಯಾಗಿದ್ದಾರೆ. ಅವರ ಪ್ರತಿ ಮಾತು , ಅವರ ಹೇಳಿಕೆ ಹಾಗೂ ಅವರ ನಿರ್ಧಾರಗಳು ಪ್ರತಿಯೊಂದು ಸಂಚಲನವನ್ನುಂಟು ಮಾಡುತ್ತಿವೆ. ಇದಕ್ಕೆ ಕಾರಣವಾಗಿರುವು ಮಂಡ್ಯ ಲೋಕಸಭಾ ಚುನಾವಣೆ. ಹೌದು ಸುಮಲತ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧಾರ ಮಾಡಿದಾಗಿನಿಂದಲೂ ಆ ಕ್ಷೇತ್ರ ನಾಡಿನ ಪ್ರಮುಖ ಹಾಗೂ ಸಿಕ್ಕಾಪಟ್ಟೆ ಸೆನ್ಷೇಷನಲ್ ಕ್ಷೇತ್ರವಾಗಿ ಮಾರ್ಪಟ್ಟಿತು. ಒಂದೆಡೆ ಗೌಡರ ವಂಶದ ಕುಡಿಯಾದ ನಿಖಿಲ್ ಕುಮಾರ ಸ್ವಾಮಿ ಅವರಿದ್ದರೆ, ಇನ್ನೊಂದೆಡೆ ಮಂಡ್ಯದ ಗಂಡು, ಮಂಡ್ಯದ ಪುತ್ರ ಅಂಬರೀಶ್ ಅವರ ಪತ್ನಿ ಸುಮಲತ ಸ್ಪರ್ಧೆಗೆ ಇಳಿದಿರುವುದೇ ಈ ಕ್ಷೇತ್ರದಲ್ಲಿ ಜಿದ್ದಾಜಿದ್ದಿಯ ಹೋರಾಟ ನಡೆದಿದೆ.

ಇದೀಗ ಸುಮಲತಾ ಅಂಬರೀಶ್ ಅವರ ಪರ ಪ್ರಚಾರ ಮಾಡಲು ಮಂಡ್ಯಕ್ಕೆ ಕನ್ನಡ ಚಿತ್ರರಂಗದ ಘಟಾನುಘಟಿ‌ ಸ್ಟಾರ್ ಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ , ರಾಕಿಂಗ್ ಸ್ಟಾರ್ ಯಶ್ , ದೊಡ್ಡಣ್ಣ , ಅಭಿಷೇಕ್ ಅಂಬರೀಶ್ , ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಪ್ರಚಾರ ಮಾಡಲು ರೆಡಿಯಾಗಿರುವಾಗಲೇ ಸುಮಲತಾ ಅಂಬರೀಶ್ ಅವರ ನಾನು ಸಹ ಪ್ರಚಾರ ಮಾಡುತ್ತೇನೆ ಎಂದು ಶಿವಮೊಗ್ಗದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಹಾಕುವ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕುಮಾರ್ ಬಂಗಾರಪ್ಪ ಅವರ ಈ ಹೇಳಿಕೆ ಅಚ್ಚರಿ ತಂದಿದೆ.

ನಾಳೆ ಸುಮಲತಾ ಅಂಬರೀಶ್ ಅವರು ಮಂಡ್ಯದ ಲೋಕಸಭಾ ಚುನಾವಣಾ ಸ್ಪರ್ಧೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಇನ್ನು ಕಳೆದ ನಾಲ್ಕು ದಿನಗಳ ಹಿಂದೆ ಬಿಜೆಪಿ ಮುಖಂಡರಾದ ಎಸ್ ಎಮ್ ಕೃಷ್ಣ ಅವರ ಜೊತೆ ಸುಮಲತಾ ಅಂಬರೀಶ್ ಚರ್ಚೆ ನಡೆಸಿದ್ದರು‌. ಆದರೆ ನೆನ್ನೆ ಪತ್ರಿಕಾಗೋಷ್ಠಿಯಲ್ಲಿ ಸುಮಲತಾ ಅವರು ನನಗೆ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷದಿಂದ ಗುರುತಿಸಿಕಳ್ಳಲು ಇಷ್ಟವಿಲ್ಲ ಹೀಗಾಗಿ ಮಂಡ್ಯ ಜನರ ಅಪೇಕ್ಷೆಯಂತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧ ಮಾಡುವುದಾಗಿ ಹೇಳಿದ್ದರು. ಆದರೆ  ಇದೀಗ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಸುಮಲತಾ ಪರ ಪ್ರಚಾರ ಮಾಡಲು ಸಿದ್ದ ಎಂದು ಹೇಳಿಕೆ ನೀಡಿದ್ದಾರೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here