ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಕೇಂದ್ರ ಸಚಿವರಾದ ಸದಾನಂದ ಗೌಡ ಅವರು ಟೀಕೆ ಮಾಡಿದ್ದಾರೆ. ಕುಮಾರ ಸ್ವಾಮಿ ಅವರ ರಾಜಕೀಯ ಮೆಟ್ಟಿಲುಗಳು ಪ್ರಸ್ತುತ ಕುಸಿಯುತ್ತಿದೆ. ಅದಕ್ಕೆ ಅವರು ತಮ್ಮ ಕೈಯಲ್ಲಿ ಸಿಟಿ ಗಳನ್ನು ಹಿಡಿದು ಬರುತ್ತಿದ್ದಾರೆ ಎಂದು ಕೇಂದ್ರ ಸಚಿವರಾದ ಸದಾನಂದ ಗೌಡ ಅವರು ಹೇಳಿಕೆಯೊಂದನ್ನು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಗಳೂರು ಗಲಭೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಸಿಡಿಯನ್ನು ಬಿಡುಗಡೆ ಮಾಡಿದ್ದು, ಅದರ ಬಗ್ಗೆ ಮಾತನಾಡುತ್ತಾ ಕೇಂದ್ರ ಸಚಿವರು ಕುಮಾರ ಸ್ವಾಮಿ ಅವರ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ.

ಸದಾನಂದ ಗೌಡರು ಮಾತನಾಡುವಾಗ ಗಲಭೆಯಾಗಿ ಇಷ್ಟು ದಿನಗಳು ಆದ ಮೇಲೆ ಕುಮಾರಸ್ವಾಮಿ ಅವರು ಸಿಡಿ ಬಿಡುಗಡೆ ಮಾಡಿದ್ದಾರೆ. ಮೊದಲೇ ಏಕೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಅವರ ಕಡೆಯವರನ್ನು ಕಳುಹಿಸಿ, ಪೋಲಿಸ್ ವೇಷದಲ್ಲಿ ಹಾಕಿಸಿ, ವಿಡಿಯೋ ಮಾಡಿ ಬಿಡುಗಡೆ ಮಾಡಿರಬೇಕು ಎಂದು ವ್ಯಂಗ್ಯವಾಡಿದ್ದಾರೆ. ಸಿಡಿ ಬಿಡುಗಡೆ ಮಾಡಿರುವ ಹಿಂದೆ ಒಂದು ದೊಡ್ಡ ಸಂಚು ಇದೆ ಎಂದಿರುವ ಸಚಿವರು ಸಿಡಿಗಳು ಬಹಳಷ್ಟು ಜನರಿಗೆ ರಾಜಕೀಯ ಅಸ್ತಿತ್ವಕ್ಕೆ ಬಳಕೆಯಾಗುತ್ತಿದೆ ಎಂದಿದ್ದಾರೆ.

ರಾಜ್ಯದಲ್ಲಿ ಈ ಹಿಂದೆ ಕೂಡಾ ಅನೇಕ ಸಿಡಿಗಳು ಬಿಡುಗಡೆ ಆಗಿವೆ. ಸಿಡಿಗಳೆಲ್ಲಾ ನಿಜವೇ ಆಗಿದ್ದರೆ ಇಂದು ಸಾಕಷ್ಟು ಜನ ಜೈಲು ಪಾಲಾಗಬೇಕಿತ್ತು. ಸಿಡಿಗಳನ್ನು ಹಲವರು ತಮ್ಮ ಬೇಳೆ ಬೇಯಿಸಿಕೊಳ್ಳೋದಿಕ್ಕೆ, ಜನರನ್ನು ಹಾದಿ ತಪ್ಪಿಸೋದಿಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಟೀಕೆ ಮಾಡಿದ್ದು, ಕುಮಾರಸ್ವಾಮಿ ಅವರು ಅದೇ ರೀತಿ ಮಾಡುತ್ತಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here