ಅಮೆರಿಕ ಪ್ರವಾಸದಲ್ಲಿರುವ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅವರ ತಂದೆ , ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿಯಾದ ಹೆಚ್.ಡಿ. ದೇವೇಗೌಡರು ತಮ್ಮ ಪುತ್ರನಿಗೆ ಕಾಂಗ್ರೆಸ್ ಶಾಸಕರು ರಾಜೀನಾಮೇ ನೀಡಿರುವುದರ ಬಗ್ಗೆ ಚಿಂತಿಸದೆ, ಶಾಂತವಾಗಿರುವಂತೆ ಸೂಚನೆ ನೀಡಿದ್ದಾರೆ. ರಾಜೀನಾಮೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅವರು ಆರಾಮವಾಗಿಯೇ ಅಮೆರಿಕ ಪ್ರವಾಸ ಮಾಡಿ ಬರುವಂತೆ ದೇವೇಗೌಡರು ಸಲಹೆಯೊಂದನ್ನು ನೀಡಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲೇ ಕುಮಾರಸ್ವಾಮಿ ಅವರು ರಾಜಕೀಯ ತಲ್ಲಣಗಳ ಹೊರತಾಗಿ ಪ್ರವಾಸ ಮೊಟಕುಗೊಳಿಸಿಲ್ಲ ಎನ್ನಲಾಗಿದೆ.

 

ಸರ್ಕಾರ ನಮಗಿಂತ ಹೆಚ್ಚು ಬೇಕಾಗಿರುವುದು ಕಾಂಗ್ರೆಸ್ಸಿಗೆ. ನಮಗೆ ಮುಂದೆ ಬಂದು ಬೆಂಬಲ ಸೂಚಿಸಿದ್ದು ಅವರೇ. ರಾಜೀನಾಮೆ ಕೊಟ್ಟಿರುವುದು ಅವರ ಶಾಸಕರೇ ಹೊರತು ನಮ್ಮವರಲ್ಲ. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ರಾಷ್ಟ್ರ ಮಟ್ಟದಲ್ಲಿ ಆ ಪಕ್ಷದ ಸ್ಥಿತಿ ಸರಿಯಾಗಿಲ್ಲ. ಕರ್ನಾಟಕದಲ್ಲಿ ಇರುವ ಅಧಿಕಾರ ಹೋದರೆ ಅದರಿಂದ ನಷ್ಟ ಅವರಿಗೇ ಆಗುತ್ತದೆ. ಅದಕ್ಕೆ ಅವರಲ್ಲಿ ಉಂಟಾಗಿರುವ ಬಂಡಾಯವನ್ನು ಅವರೇ ಶಮನಗೊಳಿಸಲಿ ಎಂದು ಹೇಳಿದ್ದಾರೆನ್ನಲಾಗಿದೆ.

 

ನಾವು ಈಗ ನಮ್ಮ ಪಕ್ಷದ ಶಾಸಕರ ಬಗ್ಗೆಯಷ್ಟೇ ಚಿಂತಿಸಬೇಕು. ನಾನು ಹೈ ಕಮಾಂಡ್ ನ ಜೊತೆ ಮಾತಾಡುತ್ತೇನೆ. ಮುಂದಿನದು ಕಾಂಗ್ರೆಸ್ ನವರು ನೋಡಿಕೊಳ್ಳುತ್ತಾರೆ ಎಂದು ಅವರು ಸಿಎಂ ಅವರಿಗೆ ಸಲಹೆ ನೀಡಿದ್ದು, ಶಾಂತವಾಗಿ ಪ್ರವಾಸ ಮುಗಿಸುವಂತೆ ಸಲಹೆ ನೀಡಿರುವ ಕಾರಣ, ಸಿಎಂ ಅವರು ಅಮೆರಿಕ ಪ್ರವಾಸವನ್ನು ನಿಲ್ಲಿಸಿ ಇಲ್ಲಿಗೆ ಬಂದಿಲ್ಲ ಎನ್ನಲಾಗಿದೆ. ಇನ್ನು ರಾಜ್ಯದಲ್ಲಿ ಇನ್ನೂ ರಾಜಕೀಯ ಪರಿಸ್ಥಿತಿ ಹೇಗಿದೆ ಎಂಬುದನ್ನು ಊಹಿಸುವುದು ಕಷ್ಟವಾದಂತೆ ಇದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here