ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ದ ಮಾಧ್ಯಮಗಳು ಸುಖಾಸುಮ್ಮನೆ ಕಾಲೆಳೆಯುತ್ತಿವೆಯಾ ? ಹೀಗೊಂದು ಪ್ರಶ್ನೆ ಕೇಳಿದ್ದು ಬೇರೆ ಯಾರೂ ಅಲ್ಲ ಅದು ಸ್ವತಃ ಹೆಚ್ ಡಿ ಕುಮಾರಸ್ವಾಮಿ. ಹೌದು ಇಂದು ಮಾಧ್ಯಮಗಳ ವಿರುದ್ದ ಹೆಚ್ ಡಿ ಕುಮಾರಸ್ವಾಮಿ ಅವರು ಕಿಡಿ ಕಾರಿದ್ದಾರೆ.ಹೀಗೆ ಕುಮಾರಸ್ವಾಮಿ ಅವರು ಮಾಧ್ಯಮಗಳ ವಿರುದ್ದ ಕಿಡಿ ಕಾರಲು ಕಾರಣವಾದರೂ ಏನು ಅಂತ ಕುಮಾರಸ್ವಾಮಿ ಅವರು ಕೊಡುವ ಉತ್ತರ ಕುಮಾರಸ್ವಾಮಿ ಅವರು ಪೆಟ್ರೋಲ್ ಬೆಲೆ ಹೆಚ್ಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು .

ಈ ವಿಷಯ ಸಾರ್ವಜನಿಕವಾಗಿ ಸಹ ಚರ್ಚೆಯಾಗುತ್ತಿದ್ದು ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಎಯವ ಸಲುವಾಗಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿದ್ದಾರೆ ಎಂದು ಮಾಧ್ಯಮಗಳ ಪದೇ ಪದೇ ವರದಿ ಮಾಡುತ್ತಿವೆ.ಆದರೆ ನಾನು ರೈತರ ಸಾಲ ಮನ್ನಾ ಮಾಡಿ ಕರ್ನಾಟಕ ರೈತರ ಹಿತ ಕಾಪಾಡಿದ್ದೇನೆ ಅದನ್ನು ಯಾವ ಮಾಧ್ಯಮಗಳು ಸಹ ಸೌಜನ್ಯಕ್ಕೂ ತೋರಿಸುತ್ತಿಲ್ಲ ಅದರ ಬದಲು ನಮ್ಮ ಬಗ್ಗೆ ನೆಗೆಟಿವ್ ಆಗಿಯೇ ತೋರಿಸಲಾಗುತ್ತಿದ್ದು ಈ ವಿಷಯ ನನಗೆ ಅತೀವ ನೋವು ತರುತ್ತಿದೆ.

ನಾನು ಜನರ ಮಧ್ಯಯೇ ಹೋಗುತ್ತೇನೆ.ಮಾಧ್ಯಮಗಳ ಈ ನಡವಳಿಕೆ ನನಗೆ ಬಹಳ ಬೇಜಾರು ತಂದಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿರುವ ಕುಮಾರಸ್ವಾಮಿ ನಾಟ್ ಮೈ ಸಿಎಂ ಅಭಿಯಾನ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು ಅದ್ಯಾರೋ ಬಡ ಮಹಿಳೆ ಕೈಗೆ ಇಂಗ್ಲೀಸ್ ಬರಹ ಇರುವ ಬೋರ್ಡ್‌ ಕೊಟ್ಟು ಕುಮಾರಸ್ವಾಮಿ ನಾಟ್ ಮೈ ಸಿಎಂ ಎಂದು ತೋರಿಸಿ ಅಪಪ್ರಚಾರ ಮಾಡುವವರ ಬಗ್ಗೆ ಮಾಧ್ಯಮಗಳು ತೋರಿಸುತ್ತಿವೆ.

ಆದರೆ ನಾನು ಮಾಡುತ್ತಿರುವ ಉತ್ತಮ ಕೆಲಸಗಳ ಬಗ್ಗೆ ಯಾವ ಮಾಧ್ಯಮಗಳು ಸಹ ತೋರಿಸುತ್ತಿಲ್ಲ‌ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದರು.ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನನಗೂ ಕೊಡಗಿನ ಬಗ್ಗೆ ಪ್ರೀತಿ ಇದ್ದು ಎರಡು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

Photos credit :- HD Kumaraswamy Facebook Page.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here