ಸಿಎಂ ಕುಮಾರಸ್ವಾಮಿ ಬದಲಾಗಬೇಕೆಂಬ ಕೂಗು ಕಾಂಗ್ರೆಸ್ ವಲಯದಲ್ಲಿ ಇದ್ದು, ಈ ಕೂಗಿಗೆ ಬೆಂಬಲ ನೀಡುವಂತೆ ಈಗ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಚೆಲುವರಾಯ ಸ್ವಾಮಿಯವರು ಒಂದು ಹೇಳಿಕೆಯ ಮೂಲಕ ಪರೋಕ್ಷವಾಗಿ ಮಾಜಿ ಸಿಎಂ ಸಿದ್ಧರಾಮಯ್ಯನವರಿಗೆ ಬೆಂಬಲ ನೀಡಿದ್ದಾರೆ. ಚೆಲುವರಾಯ ಸ್ವಾಮಿಯವರು ಸುದ್ದಿಗಾರರ ಜೊತೆ ಮಾತನಾಡುತ್ತಾ ನಮಗೆ ಎಲ್ಲಾ ಸಮುದಾಯವನ್ನು ಪ್ರತಿನಿಧಿಸುವವರು ಮುಖ್ಯಮಂತ್ರಿಯಾಗಬೇಕು, ಕೇವಲ ಕೆಲವು ಸಮುದಾಯಕ್ಕೆ ಮುಖ್ಯಮಂತ್ರಿಯಾದರೆ ಸಾಲದು ಎಂದು ಹೇಳಿದ್ದಾರೆ. ಸಮಾಜದಲ್ಲಿರುವ ಎಲ್ಲಾ ಸಮುದಾಯವನ್ನು ವಿಶ್ವಾಸಕ್ಕೆ ಪಡೆದು ಆಡಳಿತ ನಡೆಸುವ ಮುಖ್ಯಮಂತ್ರಿಯವರು ಈಗ ಬೇಕಿದೆ ಎಂದವರು ಹೇಳಿದ್ದಾರೆ.

ರಾಜ್ಯದಲ್ಲಿ 38 ಸ್ಥಾನಗಳನ್ನು ಪಡೆದವರು 80 ಸ್ಥಾನ ಪಡೆದವರಿಗೆ ಹೀಗೆ ನಡೆದುಕೊಳ್ಳಬೇಕೆಂದು ಸೂಚಿಸುವುದೆಷ್ಟರ ಮಟ್ಟಕ್ಕೆ ಸರಿಯೆಂದು ಅವರು ಪ್ರಶ್ನಿಸಿದ್ದಾರೆ. ಇನ್ನೊಬ್ಬರ ವಿರುದ್ಧ ಮಾತನಾಡುವ ಮೊದಲು ತಮ್ಮ ನಡವಳಿಕೆಯನ್ನು ಸರಿ ಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಏನಾಗಬೇಕೋ ಅದು ಆಗೇ ಆಗುತ್ತದೆಂಬ ಒಂದು ಎಚ್ಚರಿಕೆಯ ಸಂದೇಶವನ್ನು ಅವರು ರವಾನಿಸಿರುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿ ತಿಳಿಯುವುದರ ಜೊತಗೆ ಸಿಎಂ ಅವರ ವಿರುದ್ಧ ಅವರಲ್ಲಿ ಇರುವ ಅಸಮಾಧಾನದ ಕಿಡಿ ಹೊರ ಬಂದಂತಾಗಿದೆ.

ಕಾಂಗ್ರೆಸ್ ಜೆಡಿಎಸ್ ನಡುವೆ ಹೊಂದಾಣಿಕೆ ಮಂಡ್ಯ ಮಾತ್ರವಲ್ಲ, ರಾಜ್ಯದ ಎಲ್ಲೂ ಆಗಿಲ್ಲ ಎಂದ ಅವರು, ಮಂಡ್ಯದ ಅಪೆಕ್ಸ್ ಬ್ಯಾಂಕ್ ಚುನಾವಣೆಯನ್ನು ತಡೆದಿರುವುದರ ಬಗ್ಗೆ ಕೂಡಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಬ್ಯಾಂಕಿನಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರದ ತನಿಖೆ ಮಾಡುವ ವದಂತಿ ಹಬ್ಬಿದೆ. ಆದರೆ ಶಿವಮೊಗ್ಗದಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆಸಿ, ಜೈಲಿಗೆ ಹೋದವರು, ಈಗ ಅಲ್ಲಿನ ಜೆಡಿಎಸ್ ಅಧ್ಯಕ್ಷರು. ಮೊದಲು ಅದನ್ನು ಸರಿ ಮಾಡಲಿ ಎಂದಿರುವ ಅವರು ಉನ್ನತ ಸ್ಥಾನದಲ್ಲಿ ಇರುವವರು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕೆಂಬ ಸಲಹೆಯನ್ನು ಕೂಡಾ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here