ಭಯ, ಭಕ್ತಿ ಹಾಗೂ ಆತಂಕಗಳಿಂದ ನಿನ್ನೆಯ ಚಂದ್ರ ಗ್ರಹಣ ಮುಗಿದಿದೆ. ಈ ಗ್ರಹಣದ ಪ್ರಭಾವ ರಾಜಕಾರಣಿಗಳ ಮೇಲೆ ತುಸು ಹೆಚ್ಚಾಗಿಯೇ ಆಗಿದ್ದು ,ಗ್ರಹಣ ಪ್ರಭಾವದಿಂದ ಪಾರಾಗಲು ಹಲವರು‌ ಹಲವು ಗುಡಿ ಮೆಟ್ಟಿಲು ಹತ್ತಿ ಬಂದಿದ್ದು ಎಲ್ಲಾ ಸುದ್ದಿಗಳನ್ನು ನಾವು ಓದಿದ್ದಾಯಿತು. ಈಗ ಗ್ರಹಣ ಪ್ರಭಾವದ ಕುರಿತು ರಾಜ್ಯದ ಪ್ರಖ್ಯಾತ ಜ್ಯೋತಿಷ್ಯ ಪಂಡಿತರೊಬ್ಬರು , ರಾಜ್ಯ ರಾಜಕಾರಣದ ಭವಿಷ್ಯ ನುಡಿದಿದ್ದು, ಗ್ರಹಣ , ಪೂಜೆ, ದೋಷ ನಿವಾರಣೆಗಳೆಂದು ಓಡುವವರ ತಲೆಯ ಮೇಲೆ ಬಾಂಬ್ ಬೀಳುವಂತಹ ಹೇಳಿಕೆ ಇದಾಗಿದೆ.

ಮಡಿಕೇರಿ ಶ್ರೀ ವಿಜಯ ವಿಠಲ ದೇವಾಲಯದ ಅರ್ಚಕರೂ ಹಾಗೂ ಪ್ರಖ್ಯಾತ ಜ್ಯೋತಿಷ್ಯ ಶಾಸ್ತ್ರಜ್ಞರು ಆದ ಪಂಡಿತ ಕೃಷ್ಣ ಉಪಾಧ್ಯಾಯ ಅವರು , ಗ್ರಹಣವು ರಾಜ್ಯದ ರಾಜಕೀಯದ‌ ಮೇಲೆ ತೀವ್ರ ಪರಿಣಾಮಗಳನ್ನು ಉಂಟುಮಾಡುತ್ತದೆ ಹಾಗೂ ಕೆಲವು ಪ್ರಮುಖ ಬದಲಾವಣೆಗಳನ್ನು ತರುತ್ತದೆ ಎಂಬುದಾಗಿ ಭವಿಷ್ಯ ನುಡಿದಿದ್ದಾರೆ. ರಾಜಕೀಯದ ಮೇಲೆ ಪ್ರಭಾವ ಬೀರುವ ಈ ಗ್ರಹಣದಿಂದಾಗಿ ಪ್ರಸ್ತುತ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಕುರ್ಚಿ ಅಲುಗಾಡುವ ಎಲ್ಲಾ ಸಾಧ್ಯತೆಗಳಿವೆ ಅಂದರೆ ಕುಮಾರ ಸ್ವಾಮಿಯವರು ಮಂತ್ರಿ‌ ಪದವಿ ಕಳೆದು‌ಕೊಳ್ಳುವ ಅವಕಾಶಗಳಿವೆಯೆಂದು ಪಂಡಿತರು ಹೇಳಿದ್ದಾರೆ.

ಅದರ ಜೊತೆಗೆ ಈಗಿನ ಗ್ರಹಣವು ದೇಶದ ಆರ್ಥಿಕ ವ್ಯಾಪಾರದ ಮೇಲೆ ಪರಿಣಾಮ‌ ಬೀರಲಿದೆ ಎಂದೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಂಟಕ ಕಾದಿದೆಯೆಂದು ಹೇಳಿದ್ದಾರೆ. ರಾಜ್ಯದ ದೊರೆಯ ಸ್ಥಾನದಲ್ಲಿರುವ ನಾಯಕರು ಭಾಗ ಮಂಡಲವನ್ನು ದಾಟಿ ತಲಕಾವೇರಿಗೆ ಭೇಟಿ ನೀಡಿರುವುದು ಕೂಡಾ ಒಳ್ಳೆಯ ಸೂಚನೆಯಲ್ಲ ಎಂದು ಅವರು ಹೇಳಿದ್ದು, ಭಾಗ ಮಂಡಲದ ತ್ರಿವೇಣಿ ಸಂಗಮದಲ್ಲಿ ಕೊಡವರು ತಮ್ಮ ಪಿತೃ ಗಳಿಗೆ ಪಿಂಡ ಪ್ರಧಾನ ಮಾಡುವ ಸ್ಥಳ ಎಂದು ಅಲ್ಲಿಗೆ ಹೋಗಿ ಬಂದಿರುವುದು, ಹೋಗುವುದಕ್ಕೆ ಅನುಸರಿಸಿದ ಮಾರ್ಗ ಈ ಎಲ್ಲಾ ವಿಚಾರಗಳನ್ನು ಗಮನಿಸಿದಾಗ ಅಲ್ಲಿ ಋಣಾತ್ಮಕ ಅಂಶಗಳು ಹೆಚ್ಚಾಗಿದೆಯೆಂದು ಪಂಡಿತರು ಹೇಳಿದ್ದಾರೆ.

ಕುಮಾರಸ್ವಾಮಿ ಅವರು ಕೊಡಗಿಗೆ ಭೇಟಿ ನೀಡಿದ್ದು ಉತ್ತಮ ಬೆಳವಣಿಗೆಯಾದರೂ, ಅವರು ಭಾಗ ಮಂಡಲವನ್ನು ದಾಟಿ ತಲಕಾವೇರಿಗೆ ಹೋದದ್ದು ಮಾತ್ರ ಸರಿಯಾದ ವಿಷಯವಲ್ಲ, ಹಾಗೆ ಹೋದವರ ಆರೋಗ್ಯದಲ್ಲಿ ಏರು ಪೇರುಗಳುಂಟಾಗುತ್ತದೆಯೆಂದು , ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಗಳೂ ಇರುತ್ತದೆಂದು ಕೃಷ್ಣ ಉಪಾಧ್ಯಾಯ ಅವರು ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಇನ್ನು ಮಾನ್ಯ ಮುಖ್ಯಮಂತ್ರಿ ಅವರು ಈ ವಿಚಾರವನ್ನು ಯಾವ ರೀತಿ ಪರಿಗಣಿಸುವರೋ ತಿಳಿದಿಲ್ಲ. ಗ್ರಹಣದ ಒಂದು ದಿನ ಮುಂಚಿತವಾಗಿಯೇ ಕುಮಾರಸ್ವಾಮಿ ಅವರು ತಿರುಪತಿಗೆ ಭೇಟಿ ನೀಡಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here